For Quick Alerts
ALLOW NOTIFICATIONS  
For Daily Alerts

2021 ರಲ್ಲಿ ಭಾರತದಲ್ಲಿರುವ ನವರತ್ನ ಕಂಪನಿಗಳ ಪಟ್ಟಿ

|

ಸರ್ಕಾರ ವಿಧಿಸಿರುವ ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳು ನವರತ್ನ ಪಟ್ಟಿಗೆ ಸೇರಲು ಅರ್ಹತೆ ಪಡೆಯುತ್ತವೆ. ಭಾರತ ಸರ್ಕಾರದ ನಿಯಮಗಳ ಅಡಿಯಲ್ಲಿ ಪ್ರಸ್ತುತ 14 ಸಾರ್ವಜನಿಕ ವಲಯದ ಕಂಪನಿಗಳಿಗೆ ನವರತ್ನ ಗೌರವದ ಸ್ಥಾನಮಾನ ನೀಡಲಾಗಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಕನಿಷ್ಠ ಮೂರು 'ಉತ್ಕೃಷ್ಟ' ಅಥವಾ 'ಅತ್ಯುತ್ತಮ' ಮಟ್ಟದ ತಿಳುವಳಿಕೆಯ ಒಡಂಬಡಿಕೆ ಒಪ್ಪಂದಗಳನ್ನು ಪಡೆದುಕೊಂಡಿರಬೇಕು ಎಂಬುದು ಈ ಸ್ಥಾನಮಾನ ಪಡೆಯಲು ಬೇಕಾದ ಅನೇಕ ಅರ್ಹತೆಗಳ ಪೈಕಿ ಒಂದಾಗಿದೆ.

1977 ರಲ್ಲಿ ಭಾರತ ಸರ್ಕಾರವು ನವರತ್ನ ಯೋಜನೆಯನ್ನು ಆರಂಭಿಸಿತು. ಕೇಂದ್ರದ ಸಾರ್ವಜನಿಕ ವಲಯದ ಉದ್ದಿಮೆಗಳು ಜಾಗತಿಕ ಮಟ್ಟದಲ್ಲಿ ಬೆಳೆದು ನಿಲ್ಲುವಂತಾಗಲು ಬೆಂಬಲ ನೀಡುವ ದೃಷ್ಟಿಯಿಂದ ನವರತ್ನ ಯೋಜನೆ ಆರಂಭಿಸಲಾಯಿತು. ನವರತ್ನ ಸಾರ್ವಜನಿಕ ವಲಯದ ಉದ್ದಿಮೆಗಳು ಒಂದೇ ಒಂದು ಪ್ರಾಜೆಕ್ಟ್‌ನಲ್ಲಿ 100 ಕೋಟಿ ರೂಪಾಯಿ ಅಥವಾ ತನ್ನ ಒಟ್ಟು ಆಸ್ತಿ ಮೌಲ್ಯದ ಶೇ 15 ರಷ್ಟನ್ನು ಬಂಡವಾಳ ಹೂಡಬಹುದು. ಹೀಗೆ ಬಂಡವಾಳ ಹೂಡಲು ಸರ್ಕಾರದಿಂದ ಯಾವುದೇ ಅನುಮತಿ ಬೇಕಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಭಾರತದ 14 ನವರತ್ನ ಕಂಪನಿಗಳ ಪಟ್ಟಿ ಇಲ್ಲಿದೆ:

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited)

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited)

ಬಿಇಎಲ್ ಕಂಪನಿಯನ್ನು 1954 ರಲ್ಲಿ ಫ್ರಾನ್ಸ್ ದೇಶದ (ಈಗ ಥೇಲ್ಸ್) ಸಿಎಸ್ಎಫ್ ಎಂಬ ಕಂಪನಿಯ ಪಾಲುದಾರಿಕೆಯಲ್ಲಿ ಆರಂಭಿಸಲಾಯಿತು. ಮೂಲ ಸಂಪರ್ಕ ಸಾಧನಗಳನ್ನು ತಯಾರಿಸುವುದು ಈ ಕಂಪನಿಯ ಉದ್ದೇಶವಾಗಿತ್ತು. ಪ್ರಸ್ತುತ ಬಿಇಎಲ್ ರಕ್ಷಣಾ ಸಂವಹನ, ರಡಾರ್, ನೇವಿ ಸಿಸ್ಟಮ್ಸ್, C4I ಸಿಸ್ಟಮ್ಸ್, ವೆಪನ್ ಸಿಸ್ಟಮ್ಸ್, ಆಂತರಿಕ ಸುರಕ್ಷತೆ, ಪ್ರಸಾರ ಮತ್ತು ದೂರಸಂಪರ್ಕ ವ್ಯವಸ್ಥೆ, ಎಲೆಕ್ಟ್ರಾನಿಕ್ ಯುದ್ಧಕಲೆ, ಟ್ಯಾಂಕ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರೊ ಆಪ್ಟಿಕ್ಸ್, ವೃತ್ತಿಪರ ಎಲೆಕ್ಟ್ರಿಕ್ ಸಾಧನಗಳು ಮತ್ತು ಸೋಲಾರ್ ಫೋಟೊ ವೋಲ್ಟಾಯಿಕ್ ವ್ಯವಸ್ಥೆಗಳಂಥ ವಿಭಿನ್ನ ಶ್ರೇಣಿಯ ಅತ್ಯಾಧುನಿಕ ಉಪಕರಣಗಳನ್ನು ತಯಾರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

1954 ರಲ್ಲಿ ಆರಂಭವಾದ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, 51,302.46 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯದೊಂದಿಗೆ ರಕ್ಷಣಾ ವಲಯದ ಬೃಹತ್ ಮಟ್ಟದ ಉದ್ದಿಮೆಯಾಗಿದೆ. ನಿಫ್ಟಿ 100 ಸೂಚ್ಯಂಕ ಕಳೆದ ಮೂರು ವರ್ಷಗಳಲ್ಲಿ ನೀಡಿದ ಶೇ 73.72 ರಷ್ಟು ಪ್ರತಿಫಲಕ್ಕೆ ಹೋಲಿಸಿದರೆ ಬಿಇಎಲ್ ಶೇರುಗಳು ಶೇ 141.32 ರಷ್ಟು ಪ್ರತಿಫಲವನ್ನು ನೀಡಿವೆ.

 

ಕಂಟೈನರ್ ಕಾರ್ಪೊರೇಶನ್ ಆಫ್ ಇಂಡಿಯಾ (Container Corporation of India)
 

ಕಂಟೈನರ್ ಕಾರ್ಪೊರೇಶನ್ ಆಫ್ ಇಂಡಿಯಾ (Container Corporation of India)

ಕಂಟೈನರ್ ಕಾರ್ಪೊರೇಶನ್ ಆಫ್ ಇಂಡಿಯಾ ಉದ್ಯಮವು ಭಾರತೀಯ ರೈಲ್ವೆ, ರೈಲ್ವೆ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ ಒಡೆತನದಲ್ಲಿದೆ. ಕಂಪನೀಸ್ ಆ್ಯಕ್ಟ್ ಅಡಿಯಲ್ಲಿ ಕಂಟೈನರ್ ಕಾರ್ಪೊರೇಶನ್ ಉದ್ದಿಮೆಯನ್ನು ನವೆಂಬರ್ 1988 ರಲ್ಲಿ ಆರಂಭಿಸಲಾಯಿತು ಹಾಗೂ ಈ ಕಂಪನಿ 1989 ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಭಾರತದೊಳಗಡೆ ಭಾರತೀಯ ರೈಲ್ವೆಯ ಒಡೆತನದಲ್ಲಿದ್ದ 7 ಕಂಟೈನರ್ ವಸಾಹತುಗಳನ್ನು ಈ ಕಂಪನಿ 1989 ರಲ್ಲಿ ತನ್ನ ವಶಕ್ಕೆ ಪಡೆದುಕೊಂಡಿತು. ನಿಫ್ಟಿ 100 ಸೂಚ್ಯಂಕದ ಶೇ 73.72 ಕ್ಕೆ ಹೋಲಿಸಿದರೆ, ಕಳೆದ ಮೂರು ವರ್ಷಗಳಲ್ಲಿ ಕಂಪನಿಯ ಶೇರುಗಳು ಶೇ 40.04 ರಷ್ಟು ಪ್ರತಿಫಲ ನೀಡಿವೆ.

ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (Engineers India Limited)

ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (Engineers India Limited)

ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಇದು ಸಂಪೂರ್ಣ ಸರ್ಕಾರಿ ಸ್ವಾಮಿತ್ವದ ಕಂಪನಿಯಾಗಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಕಂಪನಿಯ ಒಡೆತನವನ್ನು ಹೊಂದಿದೆ. ಪೆಟ್ರೋಲಿಯಂ ರಿಫೈನರಿಗಳು ಹಾಗೂ ಇತರ ಬೃಹತ್ ಉದ್ದಿಮೆಗಳಿಗೆ ಅಗತ್ಯವಾದ ಎಂಜಿನಿಯರಿಂಗ್ ಸಂಬಂಧಿತ ತಾಂತ್ರಿಕ ಬೆಂಬಲ ನೀಡಲು 1965 ರಲ್ಲಿ ಇದನ್ನು ಆರಂಭಿಸಲಾಯಿತು.

ಕಳೆದ 5 ವರ್ಷಗಳಿಂದ ಕಂಪನಿಯು ಯಾವುದೇ ಸಾಲವನ್ನು ಹೊಂದಿಲ್ಲ. ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕದ ಶೇ 89.74 ಪ್ರತಿಫಲಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮೈನಸ್ 33.66 ಪ್ರತಿಫಲ ನೀಡಿವೆ. ಎಂಜಿನಿಯರ್ಸ್ ಇಂಡಿಯಾ ಕಂಪನಿಯನ್ನು 1965 ರಲ್ಲಿ ಸೇವಾ ವಲಯದ ಮಿಡ್ ಕ್ಯಾಪ್ ಗಾತ್ರದ ಕಂಪನಿಯಾಗಿ ಆರಂಭಿಸಲಾಗಿತ್ತು. ಇದರ ಮಾರುಕಟ್ಟೆ ಮೌಲ್ಯ 4,375.50 ಕೋಟಿ ರೂಪಾಯಿಯಾಗಿದೆ.

 

ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (Hindustan Aeronautics Limited)

ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (Hindustan Aeronautics Limited)

ಬೆಂಗಳೂರಿನಲ್ಲಿ ಇರುವ ಕೇಂದ್ರ ಸರ್ಕಾರಿ ಸ್ವಾಮಿತ್ವದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಬಾಹ್ಯಾಕಾಶ ಮತ್ತು ರಕ್ಷಣಾ ವಲಯದ ಕಂಪನಿಯಾಗಿದೆ. ಡಿಸೆಂಬರ್ 23, 1940 ರಲ್ಲಿ ಆರಂಭಗೊಂಡ ಎಚ್ಎಎಲ್ ವಿಶ್ವದ ಅತಿ ಹಳೆಯ ಬಾಹ್ಯಾಕಾಶ ಮತ್ತು ರಕ್ಷಣಾ ವಲಯದ ಉದ್ಯಮವಾಗಿದೆ.

ಕಂಪನಿಯ ಮಾರಾಟ ಪ್ರಮಾಣವು ತ್ರೈಮಾಸಿಕದಲ್ಲಿ ಶೇ 83.75 ರಷ್ಟು ಕುಸಿತ ಕಂಡಿದೆ. ಕಳೆದ ಮೂರು ವರ್ಷಗಳಲ್ಲೇ ಇದು ಅತಿ ಹೆಚ್ಚಿನ ಕುಸಿತವಾಗಿದೆ. ನಿಫ್ಟಿ 100 ಸೂಚ್ಯಂಕದ ಪ್ರತಿಫಲ 73.72 ಕ್ಕೆ ಹೋಲಿಸಿದರೆ ಕಳೆದ ಮೂರು ವರ್ಷಗಳಲ್ಲಿ ಕಂಪನಿಯ ಶೇರುಗಳು ಶೇ 82.78 ರಷ್ಟು ಪ್ರತಿಫಲ ನೀಡಿವೆ. 1963 ರಲ್ಲಿ ಆರಂಭವಾದ ಎಚ್ಎಎಲ್ ರಕ್ಷಣಾ ವಲಯದಲ್ಲಿ ಕೆಲಸ ಮಾಡುವ ಲಾರ್ಜ್ ಕ್ಯಾಪ್ ಕಂಪನಿಯಾಗಿದ್ದು, 48,277.20 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಹೊಂದಿದೆ.

 

ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (Mahanagar Telephone Nigam Limited)

ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (Mahanagar Telephone Nigam Limited)

ಮಹಾನಗರ ಟೆಲಿಫೋನ್ ಲಿಮಿಟೆಡ್, d/b/a MTNL ಇದು ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಒಡೆತನದಲ್ಲಿದ್ದು, ಇದರ ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಎಂಎಟಿಎನ್ಎಲ್ ಭಾರದ ಮೆಟ್ರೊ ನಗರಗಳಾದ ಮುಂಬೈ, ದೆಹಲಿ ಹಾಗೂ ಆಫ್ರಿಕಾದ ದ್ವೀಪ ದೇಶ ಮಾರಿಷಸ್ ನಲ್ಲಿ ಕಾರ್ಯಾಚರಣೆಗಳನ್ನು ಹೊಂದಿದೆ. ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು 688.7 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ನಿಫ್ಟಿ ಸ್ಮಾಲ್ಕ್ಯಾಪ್ 100 ನ ಶೇ 89.74 ಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶೇ 41.79 ರಷ್ಟು ಪ್ರತಿಫಲ ನೀಡಿದೆ. ಹಾಗೆಯೇ S&P BSE ಹೂಡಿಕೆದಾರರಿಗೆ ಈ ಶೇರು ಶೇ 83.5 ರಷ್ಟು ಆದಾಯ ನೀಡಿದೆ. ದೂರಸಂಪರ್ಕ ವಲಯದಲ್ಲಿ ಸ್ಮಾಲ್ ಕ್ಯಾಪ್ ಕಂಪನಿಯಾಗಿ 1986 ರಲ್ಲಿ ಎಂಟಿಎನ್ಎಲ್ ಆರಂಭಗೊಂಡಿತ್ತು. ಕಂಪನಿಯ ಮಾರುಕಟ್ಟೆ ಬಂಡವಾಳ 1,250.55 ಕೋಟಿ ರೂಪಾಯಿಗಳಾಗಿದೆ.

ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (National Aluminium Company Limited)

ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (National Aluminium Company Limited)

ನಾಲ್ಕೊ (ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ) ಗಣಿ, ಖನಿಜ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಂಯೋಜಿತ ಹಾಗೂ ವೈವಿಧ್ಯಮಯ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸರ್ಕಾರಿ ಒಡೆತನದ ಕಂಪನಿಯಾಗಿದೆ. ಇದು ಕೇಂದ್ರದ ಗಣಿ ಸಚಿವಾಲಯದ ಮಾಲಿಕತ್ವದ ಕಂಪನಿಯಾಗಿದೆ.

ನ್ಯಾಷನಲ್ ಅಲ್ಯೂಮಿನಿಯಂ ಬ್ಯುಸಿನೆಸ್ ಲಿಮಿಟೆಡ್ ಇದನ್ನು 1981 ರಲ್ಲಿ ನಾನ್ ಫೆರಸ್ ಖನಿಜ ವಲಯದ ಮಿಡ್ ಕ್ಯಾಪ್ ಕಂಪನಿಯಾಗಿ ಆರಂಭಿಸಲಾಯಿತು. ಇದರ ಮಾರುಕಟ್ಟೆ ಬಂಡವಾಳ 19,762.16 ಕೋಟಿ ರೂಪಾಯಿಯಾಗಿದೆ. ಸದ್ಯ ಭಾರತ ಸರ್ಕಾರವು ನಾಲ್ಕೊದಲ್ಲಿ ಶೇ 51.5 ರಷ್ಟು ಪಾಲುದಾರಿಕೆಯನ್ನು ಹೊಂದಿದೆ. ಮಾರ್ಚ್ 31, 2021 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯು ಶೇಕಡಾ 12.16 ರಷ್ಟು ಇಕ್ವಿಟಿ ಪ್ರತಿಫಲ ನೀಡಿದೆ. ಇದು ಕಳೆದ ಐದು ವರ್ಷದ ಸರಾಸರಿ ಬೆಳವಣಿಗೆ ಶೇ 9.99 ನ್ನು ಮೀರಿದೆ. ನಿಫ್ಟಿ ಮಿಡ್ ಕ್ಯಾಪ್ 100 ರ ಪ್ರತಿಫಲ ಶೇ 92.3 ಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶೇ 61.32 ರಷ್ಟು ಪ್ರತಿಫಲ ನೀಡಿವೆ.

 

ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್ [NBCC (India) Limited]

ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್ [NBCC (India) Limited]

ಸರ್ಕಾರಿ ಸ್ವಾಮಿತ್ವದ ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್ ಬ್ಲೂ ಚಿಪ್ ಕಂಪನಿಯಾಗಿದೆ. ಇದು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳು ಸಚಿವಾಲಯದ ಒಡೆತನದಲ್ಲಿದೆ. ಕಳೆದ 5 ವರ್ಷಗಳಿಂದ ಕಂಪನಿ ಯಾವುದೇ ಸಾಲವನ್ನು ಹೊಂದಿಲ್ಲ. ನಿಫ್ಟಿ ಮಿಡ್ಕ್ಯಾಪ್ 100 ನ ಶೇ 92.3 ಕ್ಕೆ ಹೋಲಿಸಿದರೆ ಕಂಪನಿಯ ಶೇರು ಕಳೆದ ಮೂರು ವರ್ಷಗಳಲ್ಲಿ ಮೈನಸ್ 10.69 ರಷ್ಟು ಪ್ರತಿಫಲ ನೀಡಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ S&P BSE ಇಂಡಸ್ಟ್ರಿಯಲ್ಸ್ ನ ಶೇ 92.84 ಪ್ರತಿಫಲಕ್ಕೆ ಹೋಲಿಸಿದರೆ ಕಂಪನಿ ಶೇರು ಮೈನಸ್ 10.69 ರಷ್ಟು ಪ್ರತಿಫಲ ನೀಡಿವೆ. 1960 ರಲ್ಲಿ ಆರಂಭವಾದ ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್ ನಿರ್ಮಾಣ ವಲಯದ ಮಿಡ್ ಕ್ಯಾಪ್ ಕಂಪನಿಯಾಗಿದೆ. ಇದರ ಮಾರುಕಟ್ಟೆ ಬಂಡವಾಳ 8,721.00 ಕೋಟಿ ರೂಪಾಯಿ.

ಎನ್ಎಂಡಿಸಿ ಲಿಮಿಟೆಡ್ (NMDC Limited)

ಎನ್ಎಂಡಿಸಿ ಲಿಮಿಟೆಡ್ (NMDC Limited)

ಎನ್ಎಂಡಿಸಿ ಸರ್ಕಾರದ ಅಧೀನದಲ್ಲಿರುವ ಖನಿಜ ಉತ್ಪಾದನಾ ಕಂಪನಿಯಾಗಿದೆ. ಉಕ್ಕು ಸಚಿವಾಲಯ, ಭಾರತ ಸರ್ಕಾರಗಳು ಇದಕ್ಕೆ ಸಂಬಂಧಿಸಿದ ಪ್ರದೇಶದ ಆಡಳಿತಾಧಿಕಾರವನ್ನು ಹೊಂದಿವೆ. ಕಬ್ಬಿಣದ ಅದಿರು, ತಾಮ್ರ, ರಾಕ್ ಫಾಸ್ಫೇಟ್, ಸುಣ್ಣದ ಕಲ್ಲು, ಡೊಲೊಮೈಟ್, ಜಿಪ್ಸಮ್, ಬೆಂಟೊನೈಟ್, ಮ್ಯಾಗ್ನೆಸೈಟ್, ವಜ್ರ, ಸತು, ಟಂಗಸ್ಟನ್, ಗ್ರಾಫೈಟ್ ಮತ್ತು ಇತರ ಖನಿಜಗಳ ಗಣಿಗಾರಿಕೆಯಲ್ಲಿ ಈ ಕಂಪನಿ ತೊಡಗಿಸಿಕೊಂಡಿದೆ. ಮಾರ್ಚ್ 31, 2021ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಶೇ 21 ರಷ್ಟು ಇಕ್ವಿಟಿ ರಿಟರ್ನ್ ದಾಖಲಿಸಿದೆ. ಇದು ಕಳೆದ ಐದು ವರ್ಷಗಳ ಇಕ್ವಿಟಿ ರಿಟರ್ನ್ ಸರಾಸರಿಯಾಗಿದ್ದ ಶೇ 15.94 ಕ್ಕಿಂತ ಹೆಚ್ಚಾಗಿದೆ. ಕಂಪನಿಯ ವಾರ್ಷಿಕ ಮಾರಾಟವು ಶೇ 28.72 ಕ್ಕೆ ಏರಿಕೆಯಾಗಿದ್ದು, ಇದು ಕಂಪನಿಯ ಮೂರು ವರ್ಷಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ಶೇ 8.91 ನ್ನು ಮೀರಿಸಿದೆ. ನಿಫ್ಟಿ 100 ಸೂಚ್ಯಂಕದ ಶೇ 73.72 ಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಕಳೆದ ಮೂರು ವರ್ಷಗಳಲ್ಲಿ ಶೇ 36.01 ರಷ್ಟು ಪ್ರತಿಫಲ ನೀಡಿವೆ.

ಎನ್ಎಲ್ಸಿ ಇಂಡಿಯಾ ಲಿಮಿಟೆಡ್ (NLC India Limited)

ಎನ್ಎಲ್ಸಿ ಇಂಡಿಯಾ ಲಿಮಿಟೆಡ್ (NLC India Limited)

ಎನ್ಎಲ್ಸಿ ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ನವರತ್ನ ಕಂಪನಿಯಾಗಿದ್ದು, ಇದು ದೇಶದಲ್ಲಿ ಪಳೆಯುಳಿಕೆ ಇಂಧನ ಗಣಿಗಾರಿಕೆ ಮತ್ತು ಉಷ್ಣ ವಿದ್ಯುತ್ ಉತ್ಪಾದನಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕಂಪನಿಯ ROE ಸ್ಥಿರವಾಗಿ ಕುಸಿಯುತ್ತಿದೆ. ಕಳೆದ ವರ್ಷ ಬಂದ ಲಾಭದಲ್ಲಿನ ಬಹುತೇಕ ಅಂಶವನ್ನು ಶೇರುದಾರರಿಗೆ ಲಾಭಾಂಶದ ರೂಪದಲ್ಲಿ ವಿತರಿಸಲಾಗಿದೆ. ನಿಫ್ಟಿ ಮಿಡ್ಕ್ಯಾಪ್ 100 ನ 92.3 ಪ್ರತಿಶತಕ್ಕೆ ಹೋಲಿಸಿದರೆ ಕಂಪನಿಯ ಶೇರು ಕಳೆದ ಮೂರು ವರ್ಷಗಳಲ್ಲಿ ಶೇಕಡಾ -8.2 ಪ್ರತಿಫಲ ನೀಡಿದೆ. 1956 ರಲ್ಲಿ ಸ್ಥಾಪನೆಯಾದ ಎನ್ಎಲ್ಸಿ ಇಂಡಿಯಾ ಲಿಮಿಟೆಡ್, ಇಂಧನ ವಲಯದ ಮಿಡ್ ಕ್ಯಾಪ್ ಕಂಪನಿಯಾಗಿದ್ದು, 10,788.03 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited)

ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited)

ಆಯಿಲ್ ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ಎರಡನೇ ಅತಿದೊಡ್ಡ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನಾ ಕಂಪನಿಯಾಗಿದೆ. ಇದು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಒಡೆತನದಲ್ಲಿದೆ. ಅಸ್ಸಾಂನ ದುಲಿಯಾಜನ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ. ಮಾರ್ಚ್ 31, 2021 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಕಂಪನಿಯು ತನ್ನ ಐದು ವರ್ಷಗಳ ಸರಾಸರಿ 10.65 ಶೇಕಡಾವನ್ನು ಮೀರಿ 14.9 ಶೇಕಡಾ ROE ಅನ್ನು ನೀಡಿದೆ. ವಾರ್ಷಿಕ ಶೇಕಡಾ 77.13 ಮಾರಾಟ ಬೆಳವಣಿಗೆ ದರವು ಕಂಪನಿಯ ಮೂರು ವರ್ಷದ ಸಿಎಜಿಆರ್ ಶೇಕಡಾ 26.01 ಅನ್ನು ಮೀರಿಸಿದೆ.

ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (Power Finance Corporation Limited)

ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (Power Finance Corporation Limited)

ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (PFC) ನ ಒಡೆತನವನ್ನು ಹೊಂದಿದೆ. ಇದು ಭಾರತೀಯ ಹಣಕಾಸು ಕಂಪನಿಯಾಗಿದೆ. 1986 ರಲ್ಲಿ ಸ್ಥಾಪನೆಯಾದ ಇದು ಭಾರತದ ವಿದ್ಯುತ್ ಕ್ಷೇತ್ರದ ಆರ್ಥಿಕ ಬೆನ್ನೆಲುಬಾಗಿದೆ. ಕಂಪನಿಯು ಸೆಪ್ಟೆಂಬರ್ 30, 2018 ರ ವೇಳೆಗೆ 383 ಬಿಲಿಯನ್ ರೂಪಾಯಿಗಳಷ್ಟು (INR) ನಿವ್ವಳ ಮೌಲ್ಯವನ್ನು ಹೊಂದಿದೆ. ನಿಫ್ಟಿ 100 ಸೂಚ್ಯಂಕದ 73.72 ಪ್ರತಿಶತಕ್ಕೆ ಹೋಲಿಸಿದರೆ ಮೂರು ವರ್ಷಗಳಲ್ಲಿ ಕಂಪನಿಯ ಶೇರುಗಳು ಶೇಕಡಾ 81.54 ರಷ್ಟು ಪ್ರತಿಫಲ ನೀಡಿವೆ. ಭಾರತೀಯ ಕಂಪನಿಯಾದ ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಅನ್ನು 1986 ರಲ್ಲಿ ಟರ್ಮ್ ಲೆಂಡಿಂಗ್ ಇನ್ಸ್ಟಿಟ್ಯೂಷನ್ಸ್ ವಲಯದ ಕಂಪನಿಯಾಗಿ ಆರಂಭಿಸಲಾಯಿತು. ಲಾರ್ಜ್ ಕ್ಯಾಪ್ ಕಂಪನಿಯಾಗಿರುವ ಇದು, 39,324.01 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.

ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (Rashtriya Ispat Nigam Limited)

ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (Rashtriya Ispat Nigam Limited)

ವೈಜಾಗ್ ಸ್ಟೀಲ್ ಇದನ್ನು ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ ಎಂದೂ ಕರೆಯುತ್ತಾರೆ. ಇದು ವಿಶಾಖಪಟ್ಟಣಂ ನಲ್ಲಿರುವ ಸರ್ಕಾರಿ ಸ್ವಾಮ್ಯದ ಉಕ್ಕು ಉತ್ಪಾದಕ ಉದ್ಯಮವಾಗಿದೆ. ಭಾರತ ಸರ್ಕಾರದ ಉಕ್ಕು ಸಚಿವಾಲಯದ ಒಡೆತನದಲ್ಲಿದೆ. ಇದು ದೇಶದ ಮೊದಲ ಕಡಲ ತೀರ ಆಧಾರಿತ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಆಗಿದೆ ಮತ್ತು ಉತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸುವಲ್ಲಿ ಹೆಸರುವಾಸಿಯಾಗಿದೆ. ಇದು ಉದ್ದನೆಯ ಸರಕುಗಳನ್ನು ಉತ್ಪಾದಿಸುವಲ್ಲಿ ಜಾಗತಿಕ ಮಟ್ಟದ ಸ್ಥಾನ ಪಡೆದಿದ್ದು, ವ್ಯಾಪಕ ಶ್ರೇಣಿಯ ಕೈಗಾರಿಕಾ ವಲಯಗಳಿಗೆ ಸೇವೆ ಸಲ್ಲಿಸುತ್ತದೆ.

ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಲಿಮಿಟೆಡ್ (Rural Electrification Corporation Limited)

ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಲಿಮಿಟೆಡ್ (Rural Electrification Corporation Limited)

REC ಲಿಮಿಟೆಡ್ ಎಂದು ಕರೆಯಲಾಗುವ ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್ ಸಾರ್ವಜನಿಕ ಮೂಲಸೌಕರ್ಯ ಹಣಕಾಸು ಕಂಪನಿಯಾಗಿದೆ. ಇದು ಸರ್ಕಾರಿ ಸ್ವಾಮ್ಯದ ನಿಗಮವಾಗಿದ್ದು, ಭಾರತದಾದ್ಯಂತ ವಿದ್ಯುತ್ ಯೋಜನೆಗಳಿಗೆ ಹಣಕಾಸು ಮತ್ತು ಉತ್ತೇಜನ ನೀಡುತ್ತದೆ. ನಿಫ್ಟಿ ಮಿಡ್ಕ್ಯಾಪ್ 100 ಸೂಚ್ಯಂಕದ 92.3 ಪ್ರತಿಶತಕ್ಕೆ ಹೋಲಿಸಿದರೆ ಈ ಸ್ಟಾಕ್ ಮೂರು ವರ್ಷಗಳಲ್ಲಿ ಶೇಕಡಾ 59.26 ರಷ್ಟು ಪ್ರತಿಫಲ ನೀಡಿದೆ. 1969 ರಲ್ಲಿ ಸ್ಥಾಪನೆಯಾದ ಆರ್ಇಸಿ ಲಿಮಿಟೆಡ್, ಟರ್ಮ್ ಲೆಂಡಿಂಗ್ ಇನ್ಸ್ಟಿಟ್ಯೂಶನ್ಸ್ ವಲಯದ ಕಂಪನಿಯಾಗಿದ್ದು, 32,536.77 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Shipping Corporation of India Limited)

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Shipping Corporation of India Limited)

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇದು ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಲ ಮಾರ್ಗಗಳಲ್ಲಿ ಹಡಗು ಸಂಚಾರ ಸೇವೆಗಳನ್ನು ನಿರ್ವಹಿಸುತ್ತದೆ. ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇದು ಭಾರತ ಸರ್ಕಾರದ ಶಿಪ್ಪಿಂಗ್ ಸಚಿವಾಲಯದ ಒಡೆತನದಲ್ಲಿದೆ. ಪ್ರಸ್ತುತ ಕಂಪನಿಯ ಮಾರಾಟವು ಶೇ 17.98 ರಷ್ಟು ಕಡಿಮೆಯಾಗಿದೆ. ಮೂರು ವರ್ಷಗಳಲ್ಲಿ ಮೊದಲ ಬಾರಿಗೆ, ಕಂಪನಿಯ ಆದಾಯ ಕಡಿಮೆಯಾಗಿದೆ. ನಿಫ್ಟಿ ಮಿಡ್ಕ್ಯಾಪ್ 100 ಸೂಚ್ಯಂಕದ 92.3 ಪ್ರತಿಶತಕ್ಕೆ ಹೋಲಿಸಿದರೆ ಈ ಸ್ಟಾಕ್ ಮೂರು ವರ್ಷಗಳಲ್ಲಿ ಶೇಕಡಾ 226.06 ರಷ್ಟು ಪ್ರತಿಫಲ ನೀಡಿದೆ. 1950 ರಲ್ಲಿ ಸ್ಥಾಪನೆಯಾದ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್, ಶಿಪ್ಪಿಂಗ್ ವಲಯದ ಒಂದು ಮಿಡ್ ಕ್ಯಾಪ್ ಕಂಪನಿಯಾಗಿದ್ದು, 6,614.35 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

2021 ರಲ್ಲಿ ಭಾರತದಲ್ಲಿರುವ ನವರತ್ನ ಕಂಪನಿಗಳ ಪಟ್ಟಿ

2021 ರಲ್ಲಿ ಭಾರತದಲ್ಲಿರುವ ನವರತ್ನ ಕಂಪನಿಗಳ ಪಟ್ಟಿ

ನವರತ್ನ ಕಂಪನಿಯ ಹೆಸರು ಬೆಲೆ ರೂ.ಗಳಲ್ಲಿ ಪಿಇ ಅನುಪಾತ

ನವರತ್ನ ಕಂಪನಿಯ ಹೆಸರುಬೆಲೆ ರೂ.ಗಳಲ್ಲಿಪಿಇ ಅನುಪಾತ
ಭಾರತ್ ಎಲೆಕ್ಟ್ರಾನಿಕ್ಸ್217.6525.62
ಕಂಟೇನರ್ ಕಾರ್ಪೊರೇಶನ್ ಆಫ್ ಇಂಡಿಯಾ686.3059.57
ಎಂಜಿನಿಯರ್ಸ್ ಇಂಡಿಯಾ79.1524.30
ಹಿಂದುಸ್ತಾನ್ ಏರೋನಾಟಿಕ್ಸ್1,484.1015.11
ಮಹಾನಗರ ಟೆಲಿಫೋನ್ ನಿಗಮ್19.85-
ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ123.2014.06
NBCC49.5535.38
NMDC157.805.00
ಆಯಿಲ್ ಇಂಡಿಯಾ ಲಿಮಿಟೆಡ್238.955.69
ಪವರ್ ಫೈನಾನ್ಸ್ ಕಾರ್ಪೊರೇಷನ್150.953.18
ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್165.553.71
ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ142.5012.82
NLC ಇಂಡಿಯಾ77.408.57

English summary

List of Navratna Companies In India 2021

List of Navratna Companies In India 2021 Here is a detailed list in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X