For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್,ಡೀಸೆಲ್, ಎಲ್‌ಪಿಜಿ ಸಿಲಿಂಡರ್‌ ಕೊರತೆ ಎದುರಾಗುವುದಿಲ್ಲ, ಗಾಬರಿಯಾಗದಿರಿ:IOC ಸ್ಪಷ್ಟನೆ

|

ಭಾರತವು 21 ದಿನಗಳ ಕಾಲ ಲಾಕ್‌ಡೌನ್ ಆಗಿದ್ದು, ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯು ಬಂದ್ ಆಗಿದೆ. ಹೀಗಿದ್ರೆ ಮುಂದೆ ಪೆಟ್ರೋಲ್, ಡೀಸೆಲ್ ಗತಿ ಏನು? ಪೂರೈಕೆ ಇರುತ್ತಾ ಇಲ್ವಾ ಎಂಬ ಆತಂಕ ಬೇಡ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಹೇಳಿದೆ.

 

ಈಗಾಗಲೇ ಪ್ರಧಾನಿಯವರು ಉಜ್ವಲ್ ಫಲಾನುಭವಿಗಳಿಗೆ ಮೂರು ತಿಂಗಳಿಗೆ ಉಚಿತವಾಗಿ ಎಲ್‌ಪಿಜಿ ವ್ಯವಸ್ಥೆ ಮಾಡಿದ್ದಾರೆ. ಜನರು ಗಾಬರಿಗೊಳ್ಳುವ ಅಗತ್ಯವೇ ಇಲ್ಲ. ಪೆಟ್ರೋಲ್, ಡೀಸೆಲ್ ಹಾಗೂ ಡೀಸೆಲ್ ಸಾಕಾಗುವಷ್ಟು ಇದೆ ಎಂದು ಐಒಸಿ ಹೇಳಿದೆ.

ಏಪ್ರಿಲ್ ತಿಂಗಳಿಗೆ ಆಗುವಷ್ಟು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಂಗ್ರಹ

ಏಪ್ರಿಲ್ ತಿಂಗಳಿಗೆ ಆಗುವಷ್ಟು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಂಗ್ರಹ

ಲಾಕ್‌ಡೌನ್‌ ಇದ್ದರೂ, ದೇಶದಲ್ಲಿ ತೈಲದ ಕೊರತೆ ಬೀಳುವುದಿಲ್ಲ. ಏಪ್ರಿಲ್‌ ತಿಂಗಳವರೆಗೆ ಆಗುವಷ್ಟು ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿಯನ್ನು ಭಾರತ ಈಗಾಗಲೇ ಸಂಗ್ರಹಿಸಿದೆ ಎಂದು ಐಒಸಿ ಚೇರ್ಮನ್‌ ಸಂಜೀವ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಸಮರೋಪಾದಿಯಲ್ಲಿ ಇಂಧನ ಸಾಗಾಣೆ

ಸಮರೋಪಾದಿಯಲ್ಲಿ ಇಂಧನ ಸಾಗಾಣೆ

ದೇಶದ ಮೂಲೆ ಮೂಲೆಗಳಿಗೆ ಇಂಧನ ತೈಲ ರವಾನಿಸಲು ಸಮರೋಪಾದಿಯಲ್ಲಿ ಕೆಲಸ ಸಾಗಿದೆ. ಈಗಾಗಲೇ ಏಪ್ರಿಲ್‌ನ ಬೇಡಿಕೆಗೆ ಆಗುವಷ್ಟು ಇಂಧನ ತೈಲ ರವಾನೆಯಾಗಿದೆ. ಗ್ಯಾಸ್‌ ಬುಕ್ಕಿಂಗ್‌ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ.


ಬೃಹತ್‌ ಸಂಗ್ರಹಕಾರ ಕೇಂದ್ರಗಳು, ಎಲ್‌ಪಿಜಿ ಹಂಚಿಕೆದಾರರು, ಪೆಟ್ರೋಲ್‌ ಬಂಕ್‌ಗಳಿಗೆ ಇಂಧನ ತೈಲ ಪೂರೈಸಿಯೂ, ಸಾಕಷ್ಟು ಸಂಗ್ರಹವನ್ನು ತುರ್ತು ಸೇವೆಗೆ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.

ಕೊರೊನಾ ಪರಿಣಾಮ : ಮುಂದಿನ 3 ತಿಂಗಳಿನಲ್ಲಿ ಜಗತ್ತಿನಲ್ಲಿ ತೈಲ ಶೇಖರಣೆಗೆ ಜಾಗವೇ ಇರುವುದಿಲ್ಲಕೊರೊನಾ ಪರಿಣಾಮ : ಮುಂದಿನ 3 ತಿಂಗಳಿನಲ್ಲಿ ಜಗತ್ತಿನಲ್ಲಿ ತೈಲ ಶೇಖರಣೆಗೆ ಜಾಗವೇ ಇರುವುದಿಲ್ಲ

ಪೆಟ್ರೋಲ್ ಬೇಡಿಕೆ 8 ಪರ್ಸೆಂಟ್ ಇಳಿಕೆ
 

ಪೆಟ್ರೋಲ್ ಬೇಡಿಕೆ 8 ಪರ್ಸೆಂಟ್ ಇಳಿಕೆ

ಮಾರ್ಚ್ ತಿಂಗಳಿನಿಲ್ಲಿ ಹೆಚ್ಚು ಕಾರು ಬೈಕ್‌ಗಳು ರಸ್ತೆಗಿಳಿಯದೇ ಇರುವುದರಿಂದ ಪೆಟ್ರೋಲ್ ಬೇಡಿಕೆ 8 ಪರ್ಸೆಂಟ್ ಇಳಿಕೆಯಾಗಿದೆ. ಡೀಸೆಲ್ ಬೇಡಿಕೆ 16ರಷ್ಟು ಕಡಿಮೆಯಾಗಿದೆ ಮತ್ತು ವೈಮಾನಿಕ ಇಂಧನದ ಬೇಡಿಕೆ 20 ಪರ್ಸೆಂಟ್ ಕುಸಿದಿದೆ.

ಗಾಬರಿಗೊಂಡು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡದಿರಿ

ಗಾಬರಿಗೊಂಡು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡದಿರಿ

ಅನೇಕರು ತಮ್ಮ ಬಳಿಕ ಸಿಲಿಂಡರ್ ಇದ್ದರೂ, ಗಾಬರಿಗೊಂಡು ಎಲ್ಲಿ ಸಿಗುವುದಿಲ್ಲವೋ ಎಂದು ಬುಕ್‌ ಮಾಡುತ್ತಿದ್ದಾರೆ. ಅರ್ಧ ಸಿಲಿಂಡರ್ ಖಾಲಿಯಿದ್ದರೂ ಬುಕ್‌ ಮಾಡುತ್ತಿದ್ದಾರೆ. ಡಬಲ್ ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಸಹ ಒಂದು ಸಿಲಿಂಡರ್ ಸಹ ಖಾಲಿಯಾಗದೆ ರೀ ಫಿಲ್ಲಿಂಗ್ ಬುಕ್ ಮಾಡುತ್ತಿದ್ದಾರೆ.


ಆದರೆ ಈ ರೀತಿಯಾಗಿ ಗಾಬರಿಗೊಂಡು ಬುಕಿಂಗ್ ಅಗತ್ಯವಿಲ್ಲ ಎಲ್ಲಾ ಬೇಡಿಕೆಯನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು ಸಂಗ್ರಹವಿದೆ ಎಂದು ಐಒಸಿ ಹೇಳಿದೆ.

English summary

Lockdown Effect No Fuel Crisis In India Says IOC

There is no shortage of any fuel in the country and customers should not resort to panic booking of LPG refills Says IOC
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X