For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ : 25 ರೂ. ಏರಿಕೆ

|

ದೇಶದ ರಾಜಧಾನಿ ದೆಹಲಿಯಲ್ಲಿ ದೇಶೀಯ ಅನಿಲ ಸಿಲಿಂಡರ್‌ಗಳ ಬೆಲೆ ಮತ್ತೊಮ್ಮೆ ಹೆಚ್ಚಾಗಿದೆ. ದೆಹಲಿಯಲ್ಲಿ ಸಬ್ಸಿಡಿರಹಿತ ಎಲ್‌ಪಿಜಿ ಬೆಲೆ ಇಂದು 25 ರೂ.ಗಳಷ್ಟು ಹೆಚ್ಚಾಗಿದೆ. ಈ ಮೂಲಕ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಈಗ 794 ರೂ.ಗಳಿಂದ 819 ರೂ.ಗೆ ಏರಿದೆ.

ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದ್ದು, ಎಲ್‌ಪಿಜಿ ಸಿಲಿಂಡರ್‌ ದರವನ್ನು ಇತ್ತೀಚೆಗಷ್ಟೇ ಫೆಬ್ರವರಿ 25 ರಂದು 25 ರೂ.ಗೆ ಹೆಚ್ಚಿಸಲಾಗಿತ್ತು. ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದೆಹಲಿಯಲ್ಲಿ ಎಲ್‌ಪಿಜಿ ದರ ಏರಿಕೆಯಾಗಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ : 25 ರೂ. ಏರಿಕೆ

ದೇಶೀಯ ಅನಿಲ ಸಿಲಿಂಡರ್‌ಗಳ ಹೆಚ್ಚಿದ ಬೆಲೆಗಳ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಭಿನ್ನ ರೀತಿಯ ಹೇಳಿಕೆಯನ್ನು ನೀಡಿದ್ದರು. ಅಂತರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಬೆಲೆ ಏರಿಕೆ ಇಳಿಕೆ ಕುರಿತಾಗಿ ಮಾತನಾಡದೆ, ಶೀತದಿಂದಾಗಿ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಚಳಿಗಾಲವು ಕಡಿಮೆಯಾದರೆ, ಬೆಲೆಯೂ ಇಳಿಯುತ್ತದೆ ಎಂದಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ಈ ವಿಚಿತ್ರ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು ವಿರೋಧಿಸಿದ್ದಾರೆ.

ದೆಹಲಿಯಲ್ಲಿ, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಈಗ 819 ರೂ.ಗೆ ದುಬಾರಿಯಾಗಿದೆ, ಮುಂಬೈನಲ್ಲೂ ಎಲ್‌ಪಿಜಿ ಸಿಲಿಂಡರ್‌ಗೆ 819 ರೂಪಾಯಿ ಪಾವತಿಸಬೇಕಾಗುತ್ತದೆ. ಕೋಲ್ಕತಾ ಎಲ್‌ಪಿಜಿ ಸಿಲಿಂಡರ್‌ಗೆ ಗರಿಷ್ಠ 845.50 ರೂ, ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ 835 ರೂಪಾಯಿನಷ್ಟಿದೆ. ಬೆಂಗಳೂರಿನಲ್ಲಿ 822 ರೂಪಾಯಿಗೆ ತಲುಪಿದೆ.

19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ:

ದೆಹಲಿಯಲ್ಲಿ ಈ ಸಿಲಿಂಡರ್ ಬೆಲೆ 1614 ರೂಪಾಯಿ ಆಗಿದ್ದು, ಮುಂಬೈನಲ್ಲಿ ಈ ದರ ಪ್ರತಿ ಸಿಲಿಂಡರ್‌ಗೆ 1,563.50 ರೂ, ಕೋಲ್ಕತ್ತಾದಲ್ಲಿ ಈ ಬೆಲೆ 1,681.50 ರೂ. ಮತ್ತು ಚೆನ್ನೈನಲ್ಲಿ 1730.5 ರೂ. ಆಗಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,533.00 ರೂ., ಕೋಲ್ಕತ್ತಾದಲ್ಲಿ 1,598.50 ರೂ., ಮುಂಬೈನಲ್ಲಿ 1,482.50 ರೂ. ಮತ್ತು ಚೆನ್ನೈನಲ್ಲಿ 1649.00 ರೂ. ಆಗಿತ್ತು.

English summary

LPG Cylinder Price Up Rs 25: Check Latest Rates

Liquefied petroleum gas (LPG) cylinder prices have been increased by Rs 25 each on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X