For Quick Alerts
ALLOW NOTIFICATIONS  
For Daily Alerts

ಫ್ರಾಂಕ್ಲಿನ್ ಟೆಂಪಲ್‌ಟನ್ ಮ್ಯೂಚುವಲ್ ಫಂಡ್‌ಗೆ ಮದ್ರಾಸ್‌ ಹೈಕೋರ್ಟ್ ನೋಟಿಸ್

|

ಕೊರೊನಾವೈರಸ್ ನೆಪ ಹೇಳಿ ಹೂಡಿಕೆದಾರರಿಗೆ ಹಣ ಮರಳಿಸದೇ ಬಿಕ್ಕಟ್ಟಿಗೆ ಕಾರಣವಾಗಿರುವ ಫ್ರಾಂಕ್ಲಿನ್ ಟೆಂಪಲ್‌ಟನ್ ಮ್ಯೂಚುವಲ್ ಫಂಡ್ ಮತ್ತು ಷೇರು ನಿಯಂತ್ರಣ ಮಂಡಳಿಗೆ (ಸೆಬಿ) ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.

ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಫ್ರಾಂಕ್ಲಿನ್ ಟೆಂಪಲ್‌ಟನ್ ಅಸೆಸ್ ಮ್ಯಾನೇಜ್‌ಮೆಂಟ್, ಮ್ಯೂಚುವಲ್ ಫಂಡ್‌ನ ಟ್ರಸ್ಟಿಗಳು, ಅಧ್ಯಕ್ಷ ಸಂಜಯ್ ಸಪ್ರೆ ಸೇರಿದಂತೆ ಇತರೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಫ್ರಾಂಕ್ಲಿನ್ ಟೆಂಪಲ್‌ಟನ್ ಮ್ಯೂಚುವಲ್ ಫಂಡ್‌ಗೆ ಹೈಕೋರ್ಟ್ ನೋಟಿಸ್

ಆರು ಸಾಲ ನಿಧಿ ರದ್ದತಿಯಿಂದಾಗಿ ಹೂಡಿಕೆದಾರರ 28 ಸಾವಿರ ಕೋಟಿ ಮೊತ್ತವು ಮರಳಿ ಕೈ ಸೇರುತ್ತದೆಯೇ, ಇಲ್ಲವೋ ಎಂಬ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಕಂಪನಿಯೇ ಹೇಳಿರುವಂತೆ ಹೂಡಿಕೆದಾರರ ಹಣ ಕೈ ಸೇರಲು 5 ವರ್ಷ ಬೇಕಾಗಬಹುದು. ಆರು ಸಾಲ ನಿಧಿ ಒಟ್ಟಾರೆ 28,000 ಕೋಟಿ ಮೊತ್ತದ ಸಂಪತ್ತನ್ನು ನಿರ್ವಹಿಸುತ್ತಿದ್ದವು.

ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್ ಫಂಡ್ ಬಂದ್: 30,800 ಕೋಟಿ ಹಣ ಲಾಕ್ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್ ಫಂಡ್ ಬಂದ್: 30,800 ಕೋಟಿ ಹಣ ಲಾಕ್

ಹಣ ವಾಪಸ್ ಪಡೆಯುವ ಒತ್ತಡ ಮತ್ತು ಬಾಂಡ್ ಮಾರುಕಟ್ಟೆಯಲ್ಲಿ ನಗದು ಕೊರತೆಯ ಕಾರಣಕ್ಕೆ 6 ಸಾಲ ನಿಧಿಗಳನ್ನು ಫ್ರಾಂಕ್ಲಿನ್ ರದ್ದುಪಡಿಸಿತ್ತು.

English summary

Madras High Court Notice To Franklin Templeton And SEBI

The Madras High Court has issued notices to the Securities and Exchange Board of India (SEBI) along with Franklin Templeton Mutual Fund
Story first published: Saturday, May 30, 2020, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X