For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಇಲಾಖೆ- ತನಿಖಾ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದ

|

ಆದಾಯ ತೆರಿಗೆ ಇಲಾಖೆಯು ಬ್ಯಾಂಕ್ ಖಾತೆ ಮಾಹಿತಿ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ (PAN) ಮಾಹಿತಿಗಳನ್ನು ಇನ್ನು ಮುಂದೆ ತನಿಖಾ ಸಂಸ್ಥೆಗಳು ಹಾಗೂ ಗುಪ್ತಚರ ದಳದ ಜತೆಗೆ ಹಂಚಿಕೊಳ್ಳಲಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ. ಹಾಗಿದ್ದರೆ ಯಾವುವು ಮಾಹಿತಿ ಹಂಚಿಕೊಳ್ಳುವಂಥ ಸಂಸ್ಥೆಗಳು?

 

ಸಿಬಿಐ, ಕಂದಾಯ ಗುಪ್ತಚರ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯ, ಸೆಂಟ್ರಲ್ ಬೋರ್ಡ್ ಆಫ್ ಇನ್ ಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಗುಪ್ತಚರ ಇಲಾಖೆ, ಡೈರೆಕ್ಟೊರೇಟ್ ಜನರಲ್ ಆಫ್ ಜಿಎಸ್ ಟಿ ಇಂಟೆಲಿಜೆನ್ಸ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ, ಹಣಕಾಸು ಗುಪ್ತಚರ ವಿಭಾಗ ಹಾಗೂ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಇವೆಲ್ಲದರ ಜತೆಗೂ ಮಾಹಿತಿ ಹಂಚಿಕೊಳ್ಳಲಾಗುತ್ತದೆ.

ಮಾಹಿತಿ 10 ದಿನದೊಳಗಾಗಿ ಹಂಚಿಕೊಳ್ಳಲಾಗುವುದು

ಮಾಹಿತಿ 10 ದಿನದೊಳಗಾಗಿ ಹಂಚಿಕೊಳ್ಳಲಾಗುವುದು

ಕೇಂದ್ರೀಯ ನೇರ ತೆರಿಗೆ ಮಂಡಳಿ ಈ ಬಗ್ಗೆ ಆದೇಶ ಹೊರಡಿಸಿದೆ. PAN, ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (TAN), ಬ್ಯಾಂಕ್ ಖಾತೆ ಮಾಹಿತಿ, ಐ.ಟಿ. ರಿಟರ್ನ್ಸ್ ಹಾಗೂ ಟಿಡಿಎಸ್ ಮತ್ತು ಇತರ ಪರಸ್ಪರ ಒಪ್ಪಂದ ಆಗಿರುವ ಮಾಹಿತಿಗಳನ್ನು ಹತ್ತು ದಿನದೊಳಗಾಗಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ ಮೂಲಕ ಮಾಡುತ್ತವೆ

ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ ಮೂಲಕ ಮಾಡುತ್ತವೆ

ಈ ಮಾಹಿತಿಗಳನ್ನು ಒದಗಿಸುವುದು ಹಾಗೂ ನೀಡುವ ಕೆಲಸವನ್ನು ಈ ಕೇಂದ್ರೀಯ ಸಂಸ್ಥೆಗಳು ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ ಮೂಲಕ ಮಾಡುತ್ತವೆ. ಈ ಇಂಟೆಲಿಜೆನ್ಸ್ ಗ್ರಿಡ್ ಮೂಲಕ ಶಂಕಿತರ ಮೇಲೆ ಕಣ್ಗಾವಲು ಇಡಲಾಗುತ್ತದೆ. ಆ ಮೂಲಕ ಭಯೋತ್ಪಾದನೆ ದಾಳಿಯನ್ನು ತಡೆಯುವುದಕ್ಕೆ ತಕ್ಷಣದ ಮಾಹಿತಿಗಳನ್ನು ಕಲೆಹಾಕಲಾಗುತ್ತದೆ. ಅದೇ ರೀತಿ ವಲಸಿಗರ ಮಾಹಿತಿ, ಬ್ಯಾಂಕಿಂಗ್, ವೈಯಕ್ತಿಕ ತೆರಿಗೆದಾರರು ಹಾಗೂ ವಿಮಾನ ಮತ್ತು ರೈಲು ಪ್ರಯಾಣದ ಮಾಹಿತಿ ಕೂಡ ಸಂಗ್ರಹಿಸಲಾಗುತ್ತದೆ.

3,400 ಕೋಟಿ ರುಪಾಯಿ ಮಂಜೂರು
 

3,400 ಕೋಟಿ ರುಪಾಯಿ ಮಂಜೂರು

ಈಗಾಗಲೇ ಇಂಥ ಮಾಹಿತಿಗಳನ್ನು ತಕ್ಷಣವೇ ಪಡೆಯುವುದಕ್ಕೆ ಕಾನೂನು ಬದ್ಧ ಅವಕಾಶ ಇದೆ. PANಗೆ ಸಂಬಂಧಿಸಿಂದ ಮಾಹಿತಿಯನ್ನು ಹಂಚಿಕೊಳ್ಳಲು ಆದಾಯ ತೆರಿಗೆ ಇಲಾಖೆ ಹಾಗೂ ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ ಮಧ್ಯೆ 2017ರಿಂದಲೇ ಒಪ್ಪಂದ ಇದೆ. ಸಂಪುಟದ ಭದ್ರತಾ ಸಮಿತಿಯು ಈ ಗ್ರಿಡ್ ಯೋಜನೆಗಾಗಿ ಏಪ್ರಿಲ್ 8, 2010ರಲ್ಲಿ 3,400 ಕೋಟಿ ರುಪಾಯಿ ಮಂಜೂರು ಮಾಡಿದೆ.

English summary

Major Agreement Between Income Tax Department And Central Investigative Agencies

Major agreement to share information about bank account details, PAN and other details will be shared by Income Tax department with central investigative agency, PTI report.
Story first published: Friday, July 24, 2020, 20:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X