For Quick Alerts
ALLOW NOTIFICATIONS  
For Daily Alerts

ದ್ವಿಪಕ್ಷೀಯ ರೂಪಾಯಿ ವಿನಿಮಯದಲ್ಲಿ ಹಲವು ದೇಶಗಳಿಗೆ ಆಸಕ್ತಿ: ನಿರ್ಮಲಾ ಸೀತಾರಾಮನ್

|

ಆರ್‌ಬಿಐ ಹಣಕಾಸು ವಹಿವಾಟಿನಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಳವನ್ನು ಘೋಷಣೆ ಮಾಡಿದೆ. ಇದಾದ ಬಳಿಕ ಹಲವಾರು ದೇಶಗಳು ದ್ವಿಪಕ್ಷೀಯ ರೂಪಾಯಿ ವಿನಿಮಯದಲ್ಲಿ ಆಸಕ್ತಿಯನ್ನು ತೋರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮೈಂಡ್‌ಮೈನ್ ಶೃಂಗಸಭೆ 2022ರಲ್ಲಿ ಮಂಗಳವಾರ ಮಾತನಾಡಿದ ನಿರ್ಮಲಾ ಸೀತಾರಾಮನ್, "ರೂಪಾಯಿ ಈಗ ಹಳೆಯ ವಿಧಾನದಲ್ಲಿ ಇಲ್ಲ. ಈಗ ಹೊಸ ತಂತ್ರಜ್ಞಾನಕ್ಕೆ ರೂಪಾಯಿ ಒಗ್ಗಿಕೊಂಡಿದೆ. ಈ ಗಂಭೀರ ಪರಿಸ್ಥಿತಿಯಲ್ಲಿ ಆರ್‌ಬಿಐ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡುವುದು ಉತ್ತಮ ನಿರ್ಧಾರ," ಎಂದು ತಿಳಿಸಿದ್ದಾರೆ.

ಹಣದುಬ್ಬರ ಪ್ರಸ್ತುತ ಪ್ರಮುಖ ಆದ್ಯತೆ ಏನಲ್ಲ: ನಿರ್ಮಲಾ ಸೀತಾರಾಮನ್ಹಣದುಬ್ಬರ ಪ್ರಸ್ತುತ ಪ್ರಮುಖ ಆದ್ಯತೆ ಏನಲ್ಲ: ನಿರ್ಮಲಾ ಸೀತಾರಾಮನ್

"ರೂಪಾಯಿಯ ವಿನಿಮಯದಲ್ಲಿ ಹಲವಾರು ದೇಶಗಳು ಆಸಕ್ತಿ ಹೊಂದಿದೆ," ಎಂದು ಪುನರುಚ್ಛರಿಸಿದ್ದಾರೆ. "ಕೊರೊನಾ ಸಾಂಕ್ರಾಮಿಕ ಬಳಿಕ ಭಾರತವು ಹಲವಾರು ಹೊಸ ಪರಿಹಾರಗಳನ್ನು ಹೊಂದಿದೆ. ನಾವು ಭಾರತೀಯ ಆರ್ಥಿಕತೆ ವಿಚಾರದಲ್ಲಿ ಹೆಚ್ಚು ಬಹಿರಂಗವಾಗಿ ಮಾತನಾಡುತ್ತೇವೆ. ರಾಷ್ಟ್ರಗಳ ನಡುವೆ ಡಿಜಿಟಲ್ ಮೂಲಕ ಸಂಬಂಧ ವೃದ್ಧಿ ಮಾಡಲು ನಾವು ಸಿದ್ಧವಿದ್ದೇವೆ," ಎಂದು ಕೂಡಾ ತಿಳಿಸಿದ್ದಾರೆ.

"ದೇಶದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಹೊರ ಬರುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿ ಗುರಿಗಾಗಿ ಸೇವೆ ಮಾಡುವಂತೆ ಆಗಬೇಕು. ಅದಕ್ಕಾಗಿ ಇಂಡಸ್ಟ್ರೀಗೆ ಮೊದಲು ಏನು ಬೇಕಾಗಿದೆ ಎಂದು ಭಾರತ ತಿಳಿಯಬೇಕಾಗಿದೆ," ಎಂದು ಕೂಡಾ ಕೇಂದ್ರ ವಿತ್ತ ಸಚಿವೆ ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಮತ್ತೆ ರಿಟೇಲ್ ಹಣದುಬ್ಬರ ಏರಿಕೆ!ಆಗಸ್ಟ್‌ನಲ್ಲಿ ಮತ್ತೆ ರಿಟೇಲ್ ಹಣದುಬ್ಬರ ಏರಿಕೆ!

 ದೇಶದ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು

ದೇಶದ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು

"ಇಂಡಸ್ಟ್ರೀಯಲ್ಲಿ ಇಳಿದು ಕೆಲಸ ಮಾಡಲು, ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವಂತಹ ವಿದ್ಯಾರ್ಥಿಗಳನ್ನು ಬೆಳೆಸುವಂತಹ ಅಗತ್ಯ ಪ್ರಸ್ತುತವಿದೆ. ಹಲವಾರು ಸಂಸ್ಥೆಗಳು ಈ ಕಾರ್ಯವನ್ನು ಮಾಡುತ್ತಿದೆ. ಯಾಕೆಂದರೆ ಸರ್ಕಾರವು ಸಂಸ್ಥೆಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದೆ. ಸಂಸ್ಥೆಗಳು ಸರ್ಕಾರಕ್ಕೆ ಮಾಹಿತಿಯನ್ನು ನೀಡುತ್ತಿದೆ," ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತದಲ್ಲಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ವಿಶ್ವದಾದ್ಯಂತ ಅದೆಷ್ಟೋ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ಹಲವು ವಿಚಾರಗಳಿಗೆ ಭಾರತ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಪ್ರಮುಖವಾಗಿ ಭವಿಷ್ಯದಲ್ಲಿ ಭಾರತಕ್ಕೆ ಅಗತ್ಯವಾದ ಇಂಡಸ್ಟ್ರೀಗಳ ನಿರ್ವಹಣೆ ವಿಚಾರದಲ್ಲಿ ಭಾರತ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಬೇರೆ ದೇಶಗಳ ಮೇಲೆ ಅವಲಂಬಿತವಾದ ಕಾರಣದಿಂದಾಗಿ ಸರಬರಾಜು ವ್ಯತ್ಯಯವಾದಾಗ ಭಾರತದ ಉದ್ಯಮಗಳಿಗೆ ತೊಂದರೆ ಉಂಟಾಗುತ್ತದೆ," ಎಂದು ಕೇಂದ್ರ ವಿತ್ತ ಸಚಿವೆ ವಿವರಿಸಿದ್ದಾರೆ.

  ಗ್ರಾಹಕರೇ ಗಮನಿಸಿ: ಚೆಕ್‌ಬುಕ್ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ  ಗ್ರಾಹಕರೇ ಗಮನಿಸಿ: ಚೆಕ್‌ಬುಕ್ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ

 ಹಣದುಬ್ಬರ ಪ್ರಸ್ತುತ ಪ್ರಮುಖ ಆದ್ಯತೆ ಏನಲ್ಲ ಎಂದಿದ್ದ ಸೀತಾರಾಮನ್

ಹಣದುಬ್ಬರ ಪ್ರಸ್ತುತ ಪ್ರಮುಖ ಆದ್ಯತೆ ಏನಲ್ಲ ಎಂದಿದ್ದ ಸೀತಾರಾಮನ್

ಇತ್ತೀಚೆಗೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ ಕೆಲವು ವಾರಗಳಿಂದ ಹಣದುಬ್ಬರವು ಇಳಿಕೆಯಾಗುತ್ತಿದೆ. ಹಾಗಿರುವಾಗ ಪ್ರಸ್ತುತ ಭಾರತದಲ್ಲಿ ಹಣದುಬ್ಬರವು ಪ್ರಮುಖ ಆದ್ಯತೆ ಏನಲ್ಲ ಎಂದು ಹೇಳಿದ್ದಾರೆ. "ಪ್ರಸ್ತುತ ಉದ್ಯೋಗ ಸೃಷ್ಟಿ ಮಾಡುವುದು ಹಾಗೂ ಆದಾಯವನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುವುದು ಮಾತ್ರ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಳೆದ ಹಲವಾರು ವಾರಗಳಿಂದ ಹಣದುಬ್ಬರವು ಕಡಿಮೆಯಾಗಿದೆ. ಆದ್ದರಿಂದ ಹಣದುಬ್ಬರ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆ ಏನಲ್ಲ," ಎಂದು ಸ್ಪಷ್ಟಪಡಿಸಿದ್ದರು.

 ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ

ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣದುಬ್ಬರ ಪ್ರಮುಖ ಆದ್ಯತೆ ಏನಲ್ಲ ಎಂದು ಹೇಳಿದ್ದರು. ಆದರೆ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರವು ಏರಿಕೆಯಾಗಿದೆ. ಸತತ ಮೂರು ತಿಂಗಳುಗಳ ಕಾಲ ಇಳಿಕೆಯಾಗಿದ್ದ ರಿಟೇಲ್ ಹಣದುಬ್ಬರವು ಆಗಸ್ಟ್ ತಿಂಗಳಿನಲ್ಲಿ ಮತ್ತೆ ಹೆಚ್ಚಳವಾಗಿದೆ. ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಈ ನಡುವೆ ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 7ಕ್ಕೆ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಆಹಾರ ಹಣದುಬ್ಬರವು ಶೇಕಡ 7.62ಕ್ಕೆ ಹೆಚ್ಚಳವಾಗಿದೆ. ಜುಲೈನಲ್ಲಿ ಆಹಾರ ಹಣದುಬ್ಬರವು ಶೇಕಡ 6.69ರಷ್ಟಿತ್ತು. ಇನ್ನು ಕಳೆದ ವರ್ಷ ಅಂದರೆ 2021ರಲ್ಲಿ ಆಹಾರ ಹಣದುಬ್ಬವು ಶೇಕಡ 3.11 ರಷ್ಟಿತ್ತು. ಅದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

English summary

Many Countries Interested In Bilateral Rupee Trade Says Nirmala Sitharaman

Finance Minister Nirmala Sitharaman on Tuesday said many countries have evinced interest for bilateral trade in the rupee after the RBI announced a mechanism recently.
Story first published: Tuesday, September 13, 2022, 17:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X