For Quick Alerts
ALLOW NOTIFICATIONS  
For Daily Alerts

ಸ್ವಿಫ್ಟ್, ಡಿಜೈರ್, ಆಲ್ಟೋ ಕಾರುಗಳಿಗೆ 57 ಸಾವಿರದವರೆಗೆ ರಿಯಾಯಿತಿ

|

ಮಾರುತಿ ಸುಜುಕಿ ಭಾರತದಲ್ಲಿ ಅತಿ ಹೆಚ್ಚು ಕಾರು ತಯಾರಿಸಿ ಮಾರುವ ಕಂಪನಿ. ಎಲ್ಲಾ ಸ್ತರಗಳ ಕಾರು ಗ್ರಾಹಕರನ್ನು ಸೆಳೆಯಬಲ್ಲ ಕಾರುಗಳ ಆಯ್ಕೆ ಹೊಂದಿರುವ ಮಾರುತಿ ಸುಜುಕಿ ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ಭರ್ಜರಿ ಸೇಲ್ಸ್ ಪಡೆದಿದೆ. ಇದರ ಖುಷಿಯನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲೋ ಎಂಬಂತೆ ತನ್ನ ಕೆಲ ಕಾರುಗಳಿಗೆ 57,000 ರೂ ವರೆಗೆ ಡಿಸ್ಕೌಂಟ್ ಕೊಡುತ್ತಿದೆ. ಈ ನವೆಂಬರ್ ತಿಂಗಳಲ್ಲೇ ಈ ರಿಯಾಯಿತಿ ಸೇಲ್ಸ್ ನಡೆಯುತ್ತಿದೆ.

 

ಈ ಎಲ್ಲಾ ರಿಯಾಯಿತಿ ನಗದು ರೂಪದಲ್ಲಿ ಇರುವುದಿಲ್ಲ. ಕ್ಯಾಷ್ ಡಿಸ್ಕೌಂಟ್ ಜೊತೆಗೆ ಕಾರ್ಪೊರೇಟ್ ಡಿಸ್ಕೌಂಟ್‌ಗಳೂ ಇರುತ್ತವೆ. ಎಕ್ಸ್‌ಚೇಂಜ್ ಬೋನಸ್ ಕೂಡ ಒಳಗೊಂಡಿರುತ್ತದೆ.

ಮಾರುತಿ ಸುಜುಕಿಯ ಆಲ್ಟೋ ಕೆ10, ಆಲ್ಟೋ 800, ಸೆಲೇರಿಯೋ, ಎಸ್ ಪ್ರೆಸ್ಸೋ, ವ್ಯಾಗಾನ್ ಆರ್, ಸ್ವಿಫ್ಟ್ ಡಿಜೈರ್, ಸ್ವಿಫ್ಟ್ ಈ ಮಾಡೆಲ್‌ಗಳಿಗೆ ಡಿಸ್ಕೌಂಟ್ ಇದೆ. ಸಿಎನ್‌ಜಿ ಕಾರುಗಳ ಮೇಲೂ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಮಾರುತಿ ಸಜುಕಿ ಡಿಜೈರ್

ಮಾರುತಿ ಸಜುಕಿ ಡಿಜೈರ್

ಮಾರುತಿ ಸುಜುಕಿ ಡಿಜೈರ್ ಮತ್ತು ಎಎಂಟಿ ಮಾಡೆಲ್ ಕಾರುಗಳ ಮೇಲೆ 32 ಸಾವಿರ ರೂವರೆಗೆ ರಿಯಾಯಿತಿ ಮತ್ತು ಬೋನಸ್ ಸಿಗುತ್ತದೆ. ಇದರಲ್ಲಿ ಕ್ಯಾಷ್ ಡಿಸ್ಕೌಂಟೇ 15,000 ರೂ ಇದೆ. ಕಾರ್ಪೊರೇಟ್ ಡಿಸ್ಕೌಂಟ್ 7 ಸಾವಿರ ರೂ ಮತ್ತು ಎಕ್ಸ್‌ಚೇಂಜ್ ಇನ್ಸೆಂಟಿವ್ 10 ಸಾವಿರ ರೂ ಇದೆ.

ಇದರ ಜೊತೆಗೆ, ಮ್ಯಾನುಯಲ್ ಟ್ರಾನ್ಸ್‌ಮಿಷನ್ (ಕೈಯಿಂದ ಗೇರ್ ಬದಲಿಸಬೇಕು) ಡಿಜೈರ್ ಕಾರುಗಳನ್ನು 17 ಸಾವಿರ ರೂನಷ್ಟು ಕಡಿಮೆ ಬೆಲೆಗೆ ಮಾರಲಾಗುತ್ತಿದೆ.

ಇನ್ನು, ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಆಟೊಮ್ಯಾಟಿಕ್ ಮತ್ತು ಮ್ಯಾನುಯಲ್ ಟ್ರಾನ್ಸ್‌ಮಿಷನ್ ಈ ಎರಡೂ ವಿಧದ ಕಾರುಗಳಿಗೆ 30 ಸಾವಿರ ರೂ ರಿಯಾಯಿತಿ ನೀಡಲಾಗುತ್ತಿದೆ. ಸ್ವಿಫ್ಟ್‌ನ ಸಿಎನ್‌ಜಿ ಅರುಗಳಿಗೆ 8 ಸಾವಿರ ರೂ ಬೆಲೆ ಕಡಿತ ಮಾಡಲಾಗಿದೆ.

ಆಲ್ಟೋ ಕೆ10, ಆಲ್ಟೋ 800
 

ಆಲ್ಟೋ ಕೆ10, ಆಲ್ಟೋ 800

ಹೊಸದಾಗಿ ರೂಪಿಸಲಾಗಿರುವ ಮಾರುತಿ ಸುಜುಕಿ ಆಲ್ಟೋ ಕೆ10 ಮ್ಯಾನುಯಲ್ ಟ್ರಾನ್ಸ್‌ಮಿಷನ್ ಕಾರುಗಳು 57 ಸಾವಿರ ಡಿಸ್ಕೌಂಟ್‌ನಲ್ಲಿ ಮಾರಾಟವಾಗುತ್ತಿವೆ. ನಗದು ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಒಟ್ಟು 35 ಸಾವಿರ ರೂ ಇವೆ. ಇನ್ಸೆಂಟಿವ್ 7 ಸಾವಿರ ರೂ ಮತ್ತು ಎಕ್ಸ್‌ಚೇಂಜ್ ಬೋನಸ್ 15 ಸಾವಿರ ರೂ ಹೀಗೆ 22 ಸಾವಿರ ರೂ ಹೆಚ್ಚುವರಿ ಸೇವಿಂಗ್ ನೀಡುತ್ತದೆ. ಇದು ಆಲ್ಟೋ ಕೆ10ನ ಎಎಂಟಿ ವೇರಿಯೆಂಟ್‌ಗಳಿಗೆ ಮಾತ್ರ ಲಭ್ಯ ಇರುತ್ತದೆ.

ಇನ್ನು, ಮಾರುತಿ ಸುಜುಕಿ ಆಲ್ಟೋ 800 ಕಾರುಗಳಿಗೆ 36 ಸಾವಿರ ರೂವರೆಗೆ ಡಿಸ್ಕೌಂಟ್ ಇದೆ. ಆದರೆ ಆಲ್ಟೋ 800ನ ಬೇಸ್ ಮಾಡೆಲ್‌ಗಳಿಗೆ ರಿಯಾಯಿತಿ ಸಿಗುವುದು 11 ಸಾವಿರ ರೂ ಮಾತ್ರ. ಇನ್ನು, ಸಿಎನ್‌ಜಿ ವಾಹನಗಳಿಗೆ 30 ಸಾವಿರ ರೂ ರಿಯಾಯಿತಿ ಆಫರ್ ಕೊಡಲಾಗಿದೆ.

ಎಸ್ ಪ್ರೆಸ್ಸೋ

ಎಸ್ ಪ್ರೆಸ್ಸೋ

ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮಾಡೆಲ್‌ಗಳನ್ನು ಕೊಂಡರೆ 56 ಸಾವಿರ ರೂವರೆಗೆ ರಿಯಾಯಿತಿ ಸಿಗುತ್ತದೆ. 35,000 ರೂ ಕ್ಯಾಷ್ ಡಿಸ್ಕೌಂಟ್ ಇದೆ. ಕಾರ್ಪೊರೇಟ್ ಡಿಸ್ಕೌಂಟ್ 6 ಸಾವಿರ ರೂವರೆಗೂ ಇದೆ. ಎಕ್ಸ್‌ಚೇಂಜ್ ಇನ್ಸೆಂಟಿವ್ಸ್ 15 ಸಾವಿರ ರೂ ಇದೆ.

ವ್ಯಾಗಾನ್ ಆರ್

ವ್ಯಾಗಾನ್ ಆರ್

ಮಾರುತಿ ಸುಜುಕಿಯ ವ್ಯಾಗಾನ್ ಆರ್ ಬ್ರ್ಯಾಂಡ್‌ನ ZXi ಮತ್ತು ZXi+ ಮಾಡೆಲ್‌ಗಳ ಕಾರುಗಳಿಗೆ 41 ಸಾವಿರ ರೂ ಡಿಸ್ಕೌಂಟ್ ಇದೆ. ನಗದು ರಿಯಾಯಿತಿ 20 ಸಾವಿರ ರೂ, ಕಾರ್ಪೊರೇಟ್ ರಿಯಾಯಿತಿ 6 ಸಾವಿರ ರೂ ಮತ್ತು ಎಕ್ಸ್‌ಚೇಂಜ್ ಇನ್ಸೆಂಟಿವ್ 15 ಸಾವಿರ ರೂ ಆಫರ್ ಕೊಡಲಾಗುತ್ತಿದೆ.

ಇನ್ನು ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮಾಡೆಲ್‌ಗಳಾದ LXi ಮತ್ತು VXi ಮೇಲೆ 31 ಸಾವಿರ ರೂ ಡಿಸ್ಕೌಂಟ್ ನೀಡಲಾಗುತ್ತಿದೆ. ವ್ಯಾಗಾನ್ ಆರ್‌ನ ಸಿಎನ್‌ಜಿ ಮತ್ತು ಎಎಂಟಿ ಕಾರುಗಳ ಮೇಲೆ ಕ್ರಮವಾಗಿ 40 ಸಾವಿರ ಮತ್ತು 21 ಸಾವಿರ ರೂ ರಿಯಾಯಿತಿ ನೀಡಲಾಗುತ್ತಿದೆ.

ಸೆಲೇರಿಯೋ

ಸೆಲೇರಿಯೋ

ಮಾರುತಿ ಸುಜುಕಿ ಸೆಲೇರಿಯೋ 56 ಸಾವಿರ ರೂವರೆಗೆ ಡಿಸ್ಕೌಂಟ್‌ನಲ್ಲಿ ಮಾರಾಟವಾಗುತ್ತಿದೆ. ಇದು ಮಧ್ಯಮ ಶ್ರೇಣಿಯ VXi ಮ್ಯಾನುಯಲ್ ಕಾರುಗಳಿಗೆ ಅನ್ವಯವಾಗುತ್ತದೆ. ಕ್ಯಾಷ್ ಡಿಸ್ಕೌಂಟ್ 35 ಸಾವಿರ ರೂ, ಕಾರ್ಪೊರೇಟ್ ಡಿಸ್ಕೌಂಟ್ 6 ಸಾವಿರ ರೂ, ಎಕ್ಸ್‌ಚೇಂಜ್ ಇನ್ಸೆಂಟಿವ್ಸ್ 15 ಸಾವಿರ ರೂ ಇದೆ.

ಬೇರೆಲ್ಲಾ ಸೆಲೆರಿಯೋ ಕಾರುಗಳಿಗೆ 41 ಸಾವಿರ ರೂ ರಿಯಾಯಿತಿ ಇದೆ. ಇದರಲ್ಲಿ ಕ್ಯಾಷ್ ಡಿಸ್ಕೌಂಟ್ 20 ಸಾವಿರ ರೂ, ಕಾರ್ಪೊರೇಟ್ ಡಿಸ್ಕೌಂಟ್ 6 ಸಾವಿರ ರೂ, ಎಕ್ಸ್‌ಚೇಂಜ್ ಇನ್ಸೆಮಟಿವ್ 15 ಸಾವಿರ ರೂವರೆಗೂ ಕೊಡಲಾಗುತ್ತಿದೆ.

English summary

Maruti Suzuki Alto, Swift And Other Cars Upto Rs 57,000 Discounts

India's biggest car manufacturer Maruti Suzuki is selling some of its model cars on upto Rs 57,000 discount. This include Swift, Dzire, Alto K10, Alto 800, Celerio, WagonR models
Story first published: Sunday, November 6, 2022, 11:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X