For Quick Alerts
ALLOW NOTIFICATIONS  
For Daily Alerts

ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ

|

ಮಾರುತಿ ಸುಜುಕಿ ಇಂಡಿಯಾದಿಂದ ನವೆಂಬರ್ ನಲ್ಲಿ 4.33% ಉತ್ಪಾದನೆ ಹೆಚ್ಚಿಸಲಾಗಿದೆ. ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಸತತ ಒಂಬತ್ತು ತಿಂಗಳ ಕಾಲ ಉತ್ಪಾದನೆ ಕಡಿಮೆ ಮಾಡಿತ್ತು. ಒಂದು ವರ್ಷದ ಹಿಂದೆ ನವೆಂಬರ್ ತಿಂಗಳಿನಲ್ಲಿ ಒಟ್ಟಾರೆ 1,35,946 ಯೂನಿಟ್ ಉತ್ಪಾದನೆ ಮಾಡಿತ್ತು. ಈ ವರ್ಷ ನವೆಂಬರ್ ನಲ್ಲಿ 1,41,834 ಯೂನಿಟ್ ಉತ್ಪಾದಿಸಿದೆ.

ಪ್ರಯಾಣಿಕರ ವಾಹನಗಳ ಉತ್ಪಾದನೆ ಉತ್ಪಾದನೆ ಈ ವರ್ಷ ನವೆಂಬರ್ ನಲ್ಲಿ 1,39,084 ಇದ್ದು, 2018ರ ನವೆಂಬರ್ ನಲ್ಲಿ 1,34,149 ಯೂನಿಟ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 3.67% ಹೆಚ್ಚಳವಾಗಿದೆ. ಇನ್ನು ಆಲ್ಟೋ, ಹೊಸ ವ್ಯಾಗನ್ ಆರ್, ಸೆಲೆರಿಯೋ, ಇಗ್ನಿಸ್, ಸ್ವಿಫ್ಟ್, ಬಲೆನೋ ಮತ್ತು ಡಿಜೈರ್ ಕಾರುಗಳ ಮಾರಾಟ ಈ ನವೆಂಬರ್ ನಲ್ಲಿ 24,052 ಯೂನಿಟ್ ಆಗಿದೆ. ಕಳೆದ ವರ್ಷ 30,129 ಆಗಿತ್ತು. ಹೋಲಿಕೆ ಮಾಡಿದರೆ 20.16 ಪರ್ಸೆಂಟ್ ಇಳಿಕೆಯಾಗಿದೆ.

ಯುಟಿಲಿಟಿ ವಾಹನಗಳಾದ ವಿಟಾರಾ ಬ್ರಿಜಾ, ಎರ್ಟಿಗಾ, ಎಸ್ ಕ್ರಾಸ್ ಉತ್ಪಾದನೆ 18% ಹೆಚ್ಚಾಗಿದೆ. ಈ ವರ್ಷ 27,187 ಯೂನಿಟ್ ಉತ್ಪಾದನೆಯಾದರೆ, ಕಳೆದ ವರ್ಷ 23,038 ಉತ್ಪಾದನೆಯಾಗಿತ್ತು. ಸಿಯಾಜ್ ಕಾರುಗಳು ಈ ಬಾರಿ 1,830 ಯೂನಿಟ್ ಉತ್ಪಾದನೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ 1460 ಯೂನಿಟ್ ಆಗಿತ್ತು.

ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ

ಲಘು ವಾಣಿಜ್ಯ ವಾಹನಗಳು ನವೆಂಬರ್ ನಲ್ಲಿ 2750 ಯೂನಿಟ್ ಆಗಿದ್ದರೆ. ಕಳೆದ ವರ್ಷ ಇದೇ ಅವಧಿಗೆ 1750 ಯೂನಿಟ್ ಆಗಿತ್ತು. ಅಕ್ಟೋಬರ್ ತಿಂಗಳಲ್ಲಿ ಉತ್ಪಾದನೆಯನ್ನು 20.7 ಪರ್ಸೆಂಟ್ ಕಡಿಮೆ ಮಾಡಿ, 1,19,337 ಯೂನಿಟ್ ಉತ್ಪಾದಿಸಲಾಗಿತ್ತು. ಅದೇ ರೀತಿ ಸೆಪ್ಟೆಂಬರ್ ನಲ್ಲಿ 17.48% ಉತ್ಪಾದನೆ ಇಳಿಕೆ ಮಾಡಿ, 1,32,199 ಯೂನಿಟ್ ಉತ್ಪಾದಿಸಿತ್ತು.

English summary

Maruti Suzuki Production Increased In November

India's leading car manufacturer production increased after 9 months in November.
Story first published: Sunday, December 8, 2019, 20:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X