For Quick Alerts
ALLOW NOTIFICATIONS  
For Daily Alerts

ಕಳೆದ ವರ್ಷಕ್ಕಿಂತ 28 ಪರ್ಸೆಂಟ್ ಕಡಿಮೆ ಲಾಭ ದಾಖಲಿಸಿದ ಮಾರುತಿ ಸುಜುಕಿ

|

ಮಾರುತಿ ಸುಜುಕಿ ಬುಧವಾರದಂದು ಜನವರಿ- ಮಾರ್ಚ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ಒಟ್ಟಾರೆ ಕಳೆದ ವರ್ಷದ ಇದೇ ಆವಧಿಯಲ್ಲಿ ಆದ ಲಾಭಕ್ಕೆ ಹೋಲಿಸಿದರೆ 27.7 ಪರ್ಸೆಂಟ್ ಇಳಿಕೆಯಾಗಿ, 1322.3 ಕೊಟಿ ರುಪಾಯಿ ತಲುಪಿದೆ. ಇನ್ನು ಆದಾಯದಲ್ಲಿ 15.2 ಪರ್ಸೆಂಟ್ ಇಳಿಕೆಯಾಗಿ 18,207.7 ಕೋಟಿ ರುಪಾಯಿ ಆಗಿದೆ.

ಕಳೆದ ವರ್ಷ ಜನವರಿ- ಮಾರ್ಚ್ ಅವಧಿಯಲ್ಲಿ 21,473.1 ಕೋಟಿ ಆದಾಯ ಹಾಗೂ 1830.8 ಕೋಟಿ ಲಾಭ ಬಂದಿತ್ತು. 2020ರ ಜನವರಿಯಿಂದ ಮಾರ್ಚ್ ಮಧ್ಯೆ ಒಟ್ಟು 3,85,025 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,60,428 ವಾಹನ ಮಾರಾಟ ಆಗಿತ್ತು. ಈ ವರ್ಷ 16 ಪರ್ಸೆಂಟ್ ಮಾರಾಟ ಕುಸಿದಿದೆ. ವಾಹನ ರಫ್ತು ಪ್ರಮಾಣದಲ್ಲೂ ಇಳಿಕೆ ಆಗಿದೆ.

ಕಳೆದ ವರ್ಷಕ್ಕಿಂತ 28 ಪರ್ಸೆಂಟ್ ಕಡಿಮೆ ಲಾಭ ದಾಖಲಿಸಿದ ಮಾರುತಿ ಸುಜುಕಿ

ಆರ್ಥಿಕ ವರ್ಷ 2020ಕ್ಕೆ ಪ್ರತಿ ಷೇರಿಗೆ 60 ರುಪಾಯಿಯಂತೆ ಡಿವಿಡೆಂಡ್ ವಿತರಣೆ ಮಾಡಲು ಕಂಪೆನಿ ನಿರ್ದೇಶಕರು ಶಿಫಾರಸು ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಇರುವುದರಿಂದ ವಾಹನ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಅದಕ್ಕಿಂತ ಮುಂಚೆ ಆರ್ಥಿಕ ಹಿಂಜರಿತದಿಂದ ಸತತವಾಗಿ ವಾಹನ ಮಾರಾಟ ಇಳಿಕೆ ಆಗುತ್ತಾ ಸಾಗಿತ್ತು.

English summary

Maruti Suzuki Profit Falls 28 Percent on YOY For Jan- Mar 2020

Here is the Jan- Mar 2020 financial result of Maruti Suzuki.
Story first published: Wednesday, May 13, 2020, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X