For Quick Alerts
ALLOW NOTIFICATIONS  
For Daily Alerts

ಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭ

|

ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ ಐ) ಗುರುವಾರದಂದು ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭಿಸಿದೆ. ಮಾರುತಿ ಸುಜುಕಿ ಸಬ್ ಸ್ಕೈಬ್ ಬ್ರ್ಯಾಂಡ್ ಅಡಿಯಲ್ಲಿ ವೈಯಕ್ತಿಕ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದು. ಕಂಪೆನಿಯು ORIX ಆಟೋ ಇನ್ ಫ್ರಾಸ್ಟ್ರಕ್ಚರ್ ಸರ್ವೀಸಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಬ್ರ್ಯಾಂಡ್ ವಾಹನ ಕೊಳ್ಳುವ ಮುನ್ನ ಸೆಕೆಂಡ್ ಹ್ಯಾಂಡ್ ಬಗ್ಗೆಯೂ ಗಮನ ಇರಲಿಬ್ರ್ಯಾಂಡ್ ವಾಹನ ಕೊಳ್ಳುವ ಮುನ್ನ ಸೆಕೆಂಡ್ ಹ್ಯಾಂಡ್ ಬಗ್ಗೆಯೂ ಗಮನ ಇರಲಿ

ಜಪಾನ್ ನ ORIX ಕಾರ್ಪೊರೇಷನ್ ಅಂಗ ಸಂಸ್ಥೆಯಾದ ORIX ಆಟೋ ಇನ್ ಫ್ರಾಸ್ಟ್ರಕ್ಚರ್ ಸರ್ವೀಸಸ್ ಭಾರತದಲ್ಲಿ ಸಬ್ ಸ್ಕ್ರಿಪ್ಷನ್ ಸೇವೆ ಆರಂಭಿಸಲಿದೆ. ಬೆಂಗಳೂರು ಹಾಗೂ ಗುರುಗ್ರಾಮದಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಿದೆ. ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಜಾ, ಎರ್ಟಿಗಾವನ್ನು ಮಾರುತಿ ಸುಜುಕಿ ಅರೆನಾ ಮೂಲಕ ಹಾಗೂ ನೆಕ್ಸಾ ಮೂಲಕ ಬಲೆನೋ, ಸಿಯಾಜ್ ಹಾಗೂ XL6 ಒದಗಿಸಲಿದೆ.

ಮಾರುತಿ ಸುಜುಕಿಯಿಂದ  ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭ

ವಾಹನ ಉತ್ಪಾದನೆ ಕ್ಷೇತ್ರಕ್ಕೆ ಕೊರೊನಾದಿಂದ ಭಾರೀ ಪೆಟ್ಟಾಗಿದೆ. ಆದ್ದರಿಂದ ಕಾರು ಮಾರಾಟದ ಜತೆಗೆ ಪರ್ಯಾಯವಾಗಿ ಏನೇನು ಮಾಡಬಹುದು ಎಂಬ ಕಡೆಗೆ ಕೂಡ ಪ್ರಯತ್ನ ನಡೆಯುತ್ತಿದೆ. ಅದರದೇ ಭಾಗವಾಗಿ ಈಗ ಲೀಸ್ ಕೂಡ ನೀಡಲಾಗುತ್ತಿದೆ. ಮಾರುತಿ ಅಷ್ಟೇ ಅಲ್ಲ, ಇತರ ವಾಹನ ತಯಾರಿಕೆ ಸಂಸ್ಥೆಗಳು ಈ ಯೋಜನೆ ತಂದಿವೆ.

English summary

Maruti Suzuki To Launch Lease Subscription Service for Individual Customers

Maruti Suzuki India (MSI) to launch lease subscription service. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X