For Quick Alerts
ALLOW NOTIFICATIONS  
For Daily Alerts

5 ಲಕ್ಷದೊಳಗೆ 2 ಹೊಸ ಕಾರು ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

|

ದೇಶದ ಬೃಹತ್ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಎರಡು ಹೊಸ ಮಾದರಿಯ ಕಾರುಗಳನ್ನು ತಯಾರಿಸುತ್ತಿದ್ದು ಕಡಿಮೆ ಬೆಲೆಗೆ ಜನಸಾಮಾನ್ಯರನ್ನು ತಲುಪಲು ಪ್ರಯತ್ನ ನಡೆಸುತ್ತಿದೆ.

ಬಿಎಸ್‌ VI ಸಂಬಂಧಟ್ಟಂತೆ ಹೊಸ ಸುರಕ್ಷತಾ ನಿಯಮಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯಿಂದ ಕೂಡಿರುವ ಎರಡು ಕಾರುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು ಇವುಗಳ ಬೆಲೆ 5 ಲಕ್ಷ ರುಪಾಯಿಗಿಂತಕೂ ಕಡಿಮೆ ಇರುತ್ತದೆ ಎಂದು 'ಬಿಸಿನೆಸ್ ಟುಡೆ' ವರದಿ ಮಾಡಿದೆ.

ಎರಡು ಕಾರುಗಳಲ್ಲಿ ಒಂದು ಕಾರು 800 ಸಿಸಿ ಸಾಮರ್ಥ್ಯ ಹೊಂದಿದ್ದರೆ, ಎರಡನೆಯದ್ದು 1 ಲೀಟರ್ ಎಂಜಿನ್ ಸಾಮರ್ಥ್ಯ ಹೊಂದಿದೆ.

5 ಲಕ್ಷದೊಳಗೆ 2 ಹೊಸ ಕಾರು ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಸುಜುಕಿ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕವಾ ಈ ಬಗ್ಗೆ ಮಾಹಿತಿ ನೀಡಿ, 800 ಸಿಸಿ ಸಾಮರ್ಥ್ಯದ ಹೊಸ ಮಾದರಿಯ ಕಾರು ಅಭಿವೃದ್ಧಿಯ ಬಗ್ಗೆ ಕಂಪನಿ ಈಗಾಗಲೇ ಕೆಲಸ ಶುರು ಮಾಡಿದೆ, ಕಡಿಮೆ ವೆಚ್ಚದಲ್ಲಿ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡುವುದೇ ಸವಾಲಿನದ್ದು ಎಂದಿದ್ದಾರೆ. ಮೊದಲ ಕಾರು ಈ ವರ್ಷಾಂತ್ಯಕ್ಕೆ ಮತ್ತು ಎರಡನೇ ಮಾದರಿಯದ್ದು 2021ರಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮಾರುತಿ ಸುಜುಕಿ 2021 ರ ಹೊತ್ತಿಗೆ ಆಲ್ಟೋ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ. ಕಂಪನಿಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾದ ಮಾರುತಿ ಸುಜುಕಿ 800 ಸಿಸಿ ಆಗಿದ್ದು 1983ರಲ್ಲಿ ಪ್ರಾರಂಭಗೊಂಡು 2014ರಲ್ಲಿ ಉತ್ಪಾದನೆ ಸ್ಥಗಿತಗೊಂಡಿತು. ದೇಶದಲ್ಲಿ 2.66 ಮಿಲಿಯನ್ ಮಾರುತಿ 800 ಯೂನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಯಿತು.

English summary

Maruti Suzuki Two New Cars Price Undre 5 Lakh

Maruti Suzuki is planning to launch two new cars in the entry-level segment, both of which would be priced under Rs 5 lakh
Story first published: Wednesday, March 4, 2020, 10:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X