For Quick Alerts
ALLOW NOTIFICATIONS  
For Daily Alerts

Max ಗ್ರೂಪ್ ನಿಂದ 140 ಕೋಟಿ ಹೂಡಿಕೆ, 20 ಕೋಟಿ ಬಾಡಿಗೆ ಆದಾಯದ ನಿರೀಕ್ಷೆ

|

ವಾಣಿಜ್ಯ ರಿಯಲ್ ಎಸ್ಟೇಟ್ ವ್ಯವಹಾರದ ಭಾಗವಾಗಿ ದೆಹಲಿಯ ಓಖ್ಲಾದಲ್ಲಿ ಮ್ಯಾಕ್ಸ್ ಗ್ರೂಪ್ ಹೊಸದಾಗಿ ಕಚೇರಿಯ ಸಮುಚ್ಚಯ ಅಭಿವೃದ್ಧಿ ಪಡಿಸಿದೆ. ಅದಕ್ಕಾಗಿ 140 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಮ್ಯಾಕ್ಸ್ ಗ್ರೂಪ್ ನಿಂದ ಇದು ಎರಡನೇ ವಾಣಿಜ್ಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್. ಈಗಾಗಲೇ ನೋಯ್ಡಾದಲ್ಲಿ ಕಳೆದ ವರ್ಷ ಒಂದು ಪ್ರಾಜೆಕ್ಟ್ ಪೂರ್ತಿಗೊಳಿಸಿದ್ದು, ಅದಕ್ಕಾಗಿ 600 ಕೋಟಿ ಹೂಡಿಕೆ ಮಾಡಿದೆ.

ಮ್ಯಾಕ್ಸ್ ವೆಂಚರ್ಸ್ ಅಂಡ್ ಇಂಡಸ್ಟ್ರೀಸ್ ಅಂಗಸಂಸ್ಥೆ ಮ್ಯಾಕ್ಸ್ ಎಸ್ಟೇಟ್ಸ್. ಈಗಾಗಲೇ ಮ್ಯಾಕ್ಸ್ ಹೌಸ್ ನಿಂದ ಓಖ್ಲಾದಲ್ಲಿ ಮೊದಲ ಹಂತದ ವಾಣಿಜ್ಯ ಪ್ರಾಜೆಕ್ಟ್ ಮೊದಲ ಹಂತ ಪೂರ್ಣಗೊಂಡಿದೆ. ಇಲ್ಲಿ ಟವರ್ ನಲ್ಲಿ 1.05 ಲಕ್ಷ ಚದರಡಿಯ ಗ್ರೇಡ್ ಎ ಕಚೇರಿ ಸ್ಥಳ ಇದೆ. ಇದನ್ನು ಕಾರ್ಪೊರೇಟ್ ಗಳಿಗೆ ಲೀಸ್ ಗೆ ನೀಡಲಾಗುವುದು.

ವಾರ್ಷಿಕವಾಗಿ ಅಂದಾಜು 20 ಕೋಟಿ ಆದಾಯ ನಿರೀಕ್ಷೆ

ವಾರ್ಷಿಕವಾಗಿ ಅಂದಾಜು 20 ಕೋಟಿ ಆದಾಯ ನಿರೀಕ್ಷೆ

ಎರಡನೇ ಹಂತದ ಪ್ರಾಜೆಕ್ಟ್ ನಲ್ಲೂ ಇದೇ ಅಳತೆಯ ಸ್ಥಳಾವಕಾಶ ಇರುತ್ತದೆ. ಇದು 2022ರಲ್ಲಿ ಪೂರ್ಣಗೊಳ್ಳಲಿದೆ. ಮೊದಲ ಹಂತದ ಪ್ರಾಜೆಕ್ಟ್ ಆರಂಭವಾದ ಒಂದು ವರ್ಷದೊಳಗೆ ಲೀಸ್ ಗೆ ನೀಡಲಾಗುವುದು. ಒಂದು ತಿಂಗಳಿಗೆ ಚದರಡಿಗೆ 120 ರುಪಾಯಿಯಂತೆ ಆದಾಯ ಬರಲಿದೆ. ಈ ಪ್ರಾಜೆಕ್ಟ್ ಮೊದಲ ಹಂತದ ಹೂಡಿಕೆ 140 ಕೋಟಿ ರುಪಾಯಿ. ಲೀಸಿಂಗ್ ಮತ್ತು ಇತರ ಸೇವೆಗಳ ಮೂಲಕ ವಾರ್ಷಿಕವಾಗಿ ಅಂದಾಜು 20 ಕೋಟಿ ರುಪಾಯಿ ಬರುತ್ತದೆ.

ದೆಹಲಿ- ಎನ್ ಸಿಆರ್ ಕಚೇರಿ ಸ್ಥಳಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ

ದೆಹಲಿ- ಎನ್ ಸಿಆರ್ ಕಚೇರಿ ಸ್ಥಳಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ

ಮ್ಯಾಕ್ಸ್ ಗ್ರೂಪ್ ಸಂಸ್ಥೆಯ ಅಧಿಕಾರಿ ಪ್ರಕಾರ, ಕೊರೊನಾ ಬಿಕ್ಕಟ್ಟಿನಿಂದ ದೆಹಲಿ- ಎನ್ ಸಿಆರ್ ಕಚೇರಿ ಸ್ಥಳಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ. ಅಕ್ಟೋಬರ್- ಡಿಸೆಂಬರ್ ತ್ರೈ ಮಾಸಿಕದ ನಂತರ ಕಚೇರಿಗಳಿಗೆ ಇರುವ ಬೇಡಿಕೆ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಮ್ಯಾಕ್ಸ್ ಗ್ರೂಪ್ ನ ಮೊದಲ ವಾಣಿಜ್ಯ ಪ್ರಾಜೆಕ್ಟ್ ಮ್ಯಾಕ್ಸ್ ಟವರ್ಸ್ ನೋಯ್ಡಾ, ಉತ್ತರ ಪ್ರದೇಶದಲ್ಲಿ ಇದೆ. 6.15 ಲಕ್ಷ ಚದರಡಿ ಪ್ರಾಜೆಕ್ಟ್ ನಲ್ಲಿ 2.63 ಲಕ್ಷ ಚದರಡಿ ಈಗಾಗಲೇ ಮಾರಾಟ ಆಗಿದೆ. ಶೇಕಡಾ ಐವತ್ತಕ್ಕಿಂತ ಹೆಚ್ಚು ಪ್ರಮಾಣದ ಮ್ಯಾಕ್ಸ್ ಟವರ್ ಲೀಸ್ ಚದರಡಿಗೆ 100/ತಿಂಗಳಿಗೆ ಈಗಾಗಲೇ ಆಗಿದೆ.

300 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಕಂಪೆನಿ
 

300 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಕಂಪೆನಿ

ಮ್ಯಾಕ್ಸ್ ಗ್ರೂಪ್ ನಿಂದ ಲೈಫ್ ಇನ್ಷೂರೆನ್ಸ್, ಆರೋಗ್ಯ ಅದಕ್ಕೆ ಸಂಬಂಧಿಸಿದ ವ್ಯವಹಾರಗಳು ಮತ್ತು ಪ್ಯಾಕೇಜಿಂಗ್ ಬಿಜಿನೆಸ್ ನಲ್ಲಿ ತೊಡಗಿಕೊಳ್ಳಲಾಗಿದೆ. 300 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಈ ಕಂಪೆನಿಯದು ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸಸ್, ಮ್ಯಾಕ್ಸ್ ಇಂಡಿಯಾ ಮತ್ತು ಮ್ಯಾಕ್ VL ಎಂಬ ಮೂರು ಹೋಲ್ಡಿಂಗ್ ಕಂಪೆನಿಗಳಿವೆ. ಕಳೆದ ತಿಂಗಳು ಮ್ಯಾಕ್ಸ್ ಇಂಡಿಯಾದ ಅಂಗ ಸಂಸ್ಥೆ 'ಅಂತರ ಸೀನಿಯರ್ ಲಿವಿಂಗ್'ನಿಂದ ದೆಹಲಿ- ಎನ್ ಸಿಆರ್ ಮಾರ್ಕೆಟ್ ವ್ಯಾಪ್ತಿಯ ನೋಯ್ಡಾದಲ್ಲಿ ಹಿರಿಯರಿಗಾಗಿ ಹೊಸ ಹೌಸಿಂಗ್ ಪ್ರಾಜೆಕ್ಟ್ ಘೋಷಣೆ ಮಾಡಿದೆ. ಈ ಪ್ರಾಜೆಕ್ಟ್ ನಿಂದ ಮುಂದಿನ ನಾಲ್ಕು ವರ್ಷಗಳಲ್ಲಿ 550 ಕೋಟಿ ರುಪಾಯಿ ಆದಾಯವನ್ನು ನಿರೀಕ್ಷೆ ಮಾಡುತ್ತಿದೆ.

English summary

Max Group Investment In Commercial Real Estate, Expecting 20 Crore Rent Annually

Max group investment commercial real estate in Delhi, expecting 20 crore rental income annually.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X