For Quick Alerts
ALLOW NOTIFICATIONS  
For Daily Alerts

ಕಳೆದ ವಾರ ಟಾಪ್ 10: 5 ಕಂಪನಿಗಳ ಮೌಲ್ಯ ಭಾರಿ ಕುಸಿತ

|

ಮುಂಬೈ, ಆಗಸ್ಟ್ 21: ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಆಗಸ್ಟ್ 21ರ ತನಕ) 5 ಕಂಪನಿಗಳ ಮೌಲ್ಯ ಭಾರಿ ಕುಸಿತ ಕಂಡಿದ್ದು, ಒಟ್ಟಾರೆ 30,737.51 ಕೋಟಿ ರು ಇಳಿಕೆ ಕಂಡಿದೆ.

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ ಪೈಕಿ ಅತಿ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅತಿ ಹೆಚ್ಚು ನಷ್ಟ ಕಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬಜಾಜ್ ಫೈನಾನ್ಸ್ ಹೆಚ್ಚಿನ ನಷ್ಟ ಅನುಭವಿಸಿವೆ.

ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸವಾಗಿದೆ.

ರಜೆದಿನಗಳಿಂದ ತುಂಬಿದ್ದ ಕಳೆದ ವಾರದಲ್ಲಿ 30 ಷೇರುಗಳ ಬಾಂಬೆ ಮಾರುಕಟ್ಟೆ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 183.37ಅಂಕ ಅಥವಾ ಶೇಕಡ 0.30 ರಷ್ಟು ಏರಿಕೆಯನ್ನು ಕಂಡಿದೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಅತಿ ಹೆಚ್ಚು ಮೌಲ್ಯಯುತ ಕಂಪನಿ

ಅತಿ ಹೆಚ್ಚು ಮೌಲ್ಯಯುತ ಕಂಪನಿ

ಅತಿ ಹೆಚ್ಚು ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ 12,883.7 ಕೋಟಿ ರು ಇಳಿಕೆ ಕಂಡು17,68,144.77 ಕೋಟಿ ರುಗೆ ಇಳಿಕೆಯಾಗಿದೆ. ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರುಕಟ್ಟೆ ಮೌಲ್ಯವು 9,147.73 ಕೋಟಿ ರು ಇಳಿಕೆಯಾಗಿ 4,64,436.79 ಕೋಟಿ ರೂಪಾಯಿನಂತೆ ಇದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ದೇಶದ ಅತಿ ದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯವು ರೂಪಾಯಿ 5,323.92 ಕೋಟಿರು ಏರಿಕೆ ಕಂದು 12,38,680.37 ಕೋಟಿ ರು ಗೆ ಏರಿಕೆಯಾಗಿದೆ. ಐಸಿಐಸಿಐ ಬ್ಯಾಂಕ್ ಸಂಸ್ಥೆ ಮೌಲ್ಯ 2,922.03 ಕೋಟಿ ರು ಇಳಿಕೆ ಕಂಡು 6,05,807.09 ಕೋಟಿ ರು ಆಗಿದೆ.

ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯ

ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯ

ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯವು ರೂಪಾಯಿ 460.13 ಕೋಟಿ ರೂಪಾಯಿ ಹೆಚ್ಚಳ ಕಂಡು 4,42,035.99 ಕೋಟಿ ರುಗೆ ಏರಿಕೆಯಾಗಿದೆ. ಇನ್ನು ಹಿಂದೂಸ್ತಾನ್ ಯೂನಿಲಿವರ್ ಮಾರುಕಟ್ಟೆ ಮೌಲ್ಯವು 9,128.17 ಕೋಟಿ ರೂಪಾಯಿ ಏರಿಕೆಯಾಗಿ 6,18,894.09 ಕೋಟಿ ರು ಗೆ ತಲುಪಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌

ಎಚ್‌ಡಿಎಫ್‌ಸಿ ಬ್ಯಾಂಕ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಹಿಂದಿನ ಮಾರುಕಟ್ಟೆ ಮೌಲ್ಯಕ್ಕೆ 4,835.37ಕೋಟಿ ರೂಪಾಯಿ ಸೇರಿಸಿಕೊಂಡು 8,30,042.72 ಕೋಟಿ ರೂಪಾಯಿ ತಲುಪಿದೆ. ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ 18,679.93 ಕೋಟಿ ರೂಪಾಯಿ ಇಳಿಕೆಯಾಗಿ 4,45,759.90 ಕೋಟಿ ರು ಗೆ ತಲುಪಿದೆ.

ಇನ್ಫೋಸಿಸ್ ಕಂಪನಿ

ಇನ್ಫೋಸಿಸ್ ಕಂಪನಿ

ಎರಡನೇ ಅತಿದೊಡ್ದ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮಾರುಕಟ್ಟೆ ಮೌಲ್ಯ1,220.24ಕೋಟಿ ರು ಇಳಿಕೆ ಕಂಡು 6,72,140.88 ಕೋಟಿ ರುಗೇರಿದೆ.


ಈ ನಡುವೆ ಸತತವಾಗಿ ಕುಸಿತ ಕಾಣುತ್ತಿದ್ದ ಭಾರತದ ಅತೀ ದೊಡ್ಡ ಜೀವ ವಿಮಾ ಸಂಸ್ಥೆ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯವು ಏರಿಕೆಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು ಸುಮಾರು 2,308.62 ಕೋಟಿ ರು ಏರಿಕೆಯಾಗಿ 4,33,768.34 ಕೋಟಿ ರೂಪಾಯಿಗೆ ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಅದರ ಬಳಿಕ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್ ಹಾಗೂ ಎಲ್‌ಐಸಿ ಟಾಪ್ 10 ಕಂಪನಿಗಳು ಆಗಿದೆ

English summary

Mcap of five of top-10 firms declines Rs 30,737.51 cr last week

Five of the top-10 valued firms together lost Rs 30,737.51 crore in market valuation last week, with Reliance Industries Limited taking the biggest hit. In the holiday-shortened week, the Sensex advanced 183.37 points or 0.30 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X