For Quick Alerts
ALLOW NOTIFICATIONS  
For Daily Alerts

ಬುಕಿಂಗ್ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಕಾರುಗಳ ಮಾರಾಟ: ಎಂಜಿ ಆಸ್ಟರ್‌ಗೆ ಡಿಮ್ಯಾಂಡ್

|

ಬಹು ನಿರೀಕ್ಷಿತ ಎಂಜಿ ಆಸ್ಟರ್‌ಗಾಗಿ ಬುಕಿಂಗ್‌ಗಳನ್ನು ಇಂದು ಆರಂಭಿಸಲಾಗಿದೆ ಮತ್ತು ಬುಕ್ಕಿಂಗ್ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಈ ವರ್ಷಕ್ಕೆ ಸಂಪೂರ್ಣವಾಗಿ ಮಾರಾಟವಾಗಿದೆ.

 

ಹೌದು, ಎಂಜಿ ಆಸ್ಟರ್‌ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಪಡೆದಿದ್ದು, ಬುಕ್ಕಿಂಗ್‌ ಪಡೆದ ಕಾರುಗಳನ್ನು 2022 ರಲ್ಲಿ ಆರಂಭಿಸಲಾಗುವುದು. ಈ ವರ್ಷ ಕಂಪನಿಯು ಸುಮಾರು 5000 ಯುನಿಟ್ ಎಂಜಿ ಆಸ್ಟರ್ ಅನ್ನು ವಿತರಿಸಲಿದೆ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಅದರ ಬುಕಿಂಗ್ ತಕ್ಷಣವೇ ಪೂರ್ಣಗೊಂಡಿದೆ ಹಾಗೂ ಇದರ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಬಹುದು.

ಮುಂದಿನ 2-3 ತಿಂಗಳಲ್ಲಿ ಎಂಜಿ ಆಸ್ಟರ್‌ನ ಎಲ್ಲಾ ರೂಪಾಂತರಗಳನ್ನು ವಿತರಿಸಲಾಗುವುದು ಎಂದು ಕಂಪನಿ ಹೇಳಿದೆ. ನಿಮ್ಮ ವಿತರಣಾ ದಿನಾಂಕದ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ನೇರವಾಗಿ ಡೀಲರ್ ಅನ್ನು ಸಂಪರ್ಕಿಸಬಹುದು. ಇನ್ನು ಕಂಪನಿಯು ತನ್ನ ಬುಕಿಂಗ್ ಅನ್ನು ಮುಚ್ಚಿಲ್ಲ, ಅದರ ಬುಕಿಂಗ್ 2022 ಕ್ಕೆ ನಡೆಯುತ್ತಿದೆ, ಅಂದರೆ, ಈಗ ಯಾವುದೇ ಬುಕಿಂಗ್ ಮಾಡಡಿದರೂ, ಕಾರನ್ನು ಮುಂದಿನ ವರ್ಷ ಮಾತ್ರ ತಲುಪಿಸಲಾಗುವುದು.

ಬುಕಿಂಗ್ ಮಾಡಲು 21,000 ರೂಪಾಯಿ

ಬುಕಿಂಗ್ ಮಾಡಲು 21,000 ರೂಪಾಯಿ

21,000 ಮುಂಗಡ ಮೊತ್ತವನ್ನು ಪಾವತಿಸುವ ಮೂಲಕ ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ನಿಂದ ಎಂಜಿ ಆಸ್ಟರ್ ಬುಕಿಂಗ್ ಮಾಡಬಹುದು. ಈ ವರ್ಷದ ವಿತರಣೆಯ ನಂತರ ಪರಿಚಯಾತ್ಮಕ ಬೆಲೆಯನ್ನು ತೆಗೆದುಹಾಕಲಾಗುತ್ತದೆ. ಪ್ರಸ್ತುತ, ಹೊಸ ಎಂಜಿ ಆಸ್ಟರ್ ಅನ್ನು ರೂ 9.78 ಲಕ್ಷದಿಂದ ರೂ 17.38 ಲಕ್ಷದವರೆಗೆ (ಎಕ್ಸ್ ಶೋ ರೂಂ ದೆಹಲಿ) ಮಾರಾಟ ಮಾಡಲಾಗುತ್ತಿದೆ. ಆದಾಗ್ಯೂ, ಇದರ ನಂತರ ಅದರ ಬೆಲೆ ಎಷ್ಟು ಹೆಚ್ಚಾಗುತ್ತದೆ ಎಂಬುದರ ಕುರಿತು ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಬೆಲೆ 50,000 ರೂಪಾಯಿ ಹೆಚ್ಚಾಗಬಹುದು!

ಬೆಲೆ 50,000 ರೂಪಾಯಿ ಹೆಚ್ಚಾಗಬಹುದು!

ಮುಂದಿನ ವರ್ಷಕ್ಕೆ ಕಾರು ಪಡೆಯಲು ಬುಕ್ ಮಾಡುವ ಗ್ರಾಹಕರು ಈ ಎಸ್‌ಯುವಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಏಕೆಂದರೆ ಮುಂದಿನ ವರ್ಷ ಇದರ ಬೆಲೆಯನ್ನು 50,000 ರೂಗಳವರೆಗೆ ಹೆಚ್ಚಿಸಬಹುದು ಎಂದು ನಂಬಲಾಗಿದೆ. ಹೆಚ್ಚಿನ ಕಂಪನಿಗಳು ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವುಗಳನ್ನು ತ್ವರಿತವಾಗಿ ಮಾರಾಟ ಮಾಡಲು ಮತ್ತು ನಂತರ ಅವುಗಳ ಬೆಲೆಯನ್ನು ಹೆಚ್ಚಿಸಲು ಇಂತಹ ಪರಿಚಯಾತ್ಮಕ ಬೆಲೆ ಕೊಡುಗೆಗಳನ್ನು ನೀಡುತ್ತವೆ.

ಅತ್ಯಂತ ಆಕರ್ಷಕವಾಗಿದೆ ಎಂಜಿ ಆಸ್ಟರ್
 

ಅತ್ಯಂತ ಆಕರ್ಷಕವಾಗಿದೆ ಎಂಜಿ ಆಸ್ಟರ್

ಕಂಪನಿಯು ಈ ಎಸ್ಯುವಿಯನ್ನು ನಾಲ್ಕು ಟ್ರಿಮ್ ಶೈಲಿಗಳಲ್ಲಿ ತಂದಿದೆ, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಮತ್ತು ಅದರ ಉನ್ನತ ಮಾದರಿಯ ಬೆಲೆಯನ್ನು ರೂ 16.78 ಲಕ್ಷದಲ್ಲಿ ಇರಿಸಲಾಗಿದೆ. ಎಂಜಿ ಆಸ್ಟರ್‌ನ ಮೊದಲ ಎಂಜಿನ್ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಎರಡನೆಯದು 1.5 ಲೀಟರ್ ಸ್ವಾಭಾವಿಕವಾಗಿ ಪೆಟ್ರೋಲ್ ಎಂಜಿನ್, ಕ್ರಮವಾಗಿ 6 ​​ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು 6 ಸ್ಪೀಡ್ ಮ್ಯಾನುವಲ್ ಮತ್ತು 8 ಸ್ಪೀಡ್ ಸಿವಿಟಿ ಗೇರ್ ಬಾಕ್ಸ್ ಹೊಂದಿದೆ.

ಕಾರಿನ ಉದ್ದ 4323 ಮಿಮೀ, ಅಗಲ 1809 ಮಿಮೀ, ಎತ್ತರ 1650 ಮಿಮೀ ಆಗಿದೆ. ಈ ಎಸ್‌ಯುವಿಯನ್ನು 3 ವರ್ಷಗಳ ಅನಿಯಮಿತ ಕಿ.ಮಿ. ವಾರಂಟಿ, 3 ವರ್ಷಗಳ ಉಚಿತ ಸೇವೆಯೊಂದಿಗೆ ನೀಡಲಾಗುತ್ತಿದ್ದು, ಗ್ರಾಹಕರು ಇದನ್ನು 1 ವರ್ಷದೊಳಗೆ ಅಥವಾ 1 ಲಕ್ಷ ಕಿ.ಮೀ 5 ವರ್ಷಗಳವರೆಗೆ ವಿಸ್ತರಿಸಬಹುದು.

ಎಂಜಿ ಆಸ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ನಾಲ್ಕನೇ ಮಾದರಿಯಾಗಿದೆ. ಇದು ಪೆಟ್ರೋಲ್ ಆವೃತ್ತಿಯ ಇವಿ ಫೇಸ್‌ಲಿಫ್ಟ್ ಆಗಿದೆ. ಕಂಪನಿಯ ಈ ಎಸ್ ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ನಂತಹ ಮಾದರಿಗಳಿಗೆ ಪೈಪೋಟಿ ನೀಡಲಿದೆ.

 

English summary

MG Astor Bookings Open: First Batch Gets Sold Out Within 20 Mins

Bookings for the highly anticipated MG Aster have been launched today and the booking will go on sale this year in just a few hours.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X