For Quick Alerts
ALLOW NOTIFICATIONS  
For Daily Alerts

ಉದ್ಯೋಗ ಖಾತ್ರಿ ಯೋಜನೆ: ಜುಲೈನಲ್ಲಿ ಉದ್ಯೋಗ ಬೇಡಿಕೆ ಕುಸಿತ

|

ಮೇ ಮತ್ತು ಜೂನ್‌ನಲ್ಲಿ ಏರಿಕೆ ಕಂಡ ನಂತರ, ಜುಲೈನಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಯ ಅಡಿಯಲ್ಲಿ ಉದ್ಯೋಗ ಬೇಡಿಕೆ ಸ್ವಲ್ಪ ಕಡಿಮೆಯಾಗಿರುವುದು ಕಂಡು ಬಂದಿದೆ.

 

ಎಂಜಿಎನ್‌ಆರ್‌ಇಜಿಎ ವೆಬ್‌ಸೈಟ್‌ ಮೂಲದ ಪ್ರಕಾರ, ಜುಲೈ 31 ರವರೆಗೆ ಸುಮಾರು 31.5 ಮಿಲಿಯನ್ ಕುಟುಂಬಗಳು ಈ ಯೋಜನೆಯಡಿ ಕೆಲಸ ಅರಸಿದ್ದರು, ಇದು ಜೂನ್‌ನಲ್ಲಿನ ಕೆಲಸದ ಬೇಡಿಕೆಗಿಂತ ಶೇಕಡಾ 28 ರಷ್ಟು ಕಡಿಮೆಯಾಗಿದೆ.

 

ಆದರೆ, ಜುಲೈನಲ್ಲಿ ಕುಸಿತದ ನಂತರವೂ, ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ಮಾಡುವ ಒಟ್ಟು ಕುಟುಂಬಗಳ ಸಂಖ್ಯೆ 2019 ರ ಜುಲೈಗೆ ಹೋಲಿಸಿದರೆ 2020 ರ ಜುಲೈನಲ್ಲಿ ಸುಮಾರು 71 ಶೇಕಡಾ ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಉದ್ಯೋಗ ಖಾತ್ರಿ ಯೋಜನೆ: ಜುಲೈನಲ್ಲಿ ಉದ್ಯೋಗ ಬೇಡಿಕೆ ಕುಸಿತ

ಜುಲೈ 2019 ರಲ್ಲಿ, ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಸುಮಾರು 18.4 ಮಿಲಿಯನ್ ಕುಟುಂಬಗಳು ಉದ್ಯೋಗ ಅರಸಿದ್ದರೆ, ಜುಲೈ 2020 ರಲ್ಲಿ ಈ ಸಂಖ್ಯೆ 31.5 ಮಿಲಿಯನ್‌ಗೆ ಏರಿತು. ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಯೋಜನೆಯಡಿ ಕೆಲಸ ಮಾಡುವ ಭಾರಿ ಬೇಡಿಕೆಯನ್ನು ಇದು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

Read more about: jobs ಉದ್ಯೋಗ
English summary

MGNREGA work demand drops in July 2020 as labourers get jobs in farms

MGNREGA: Job Demand Declines In July
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X