For Quick Alerts
ALLOW NOTIFICATIONS  
For Daily Alerts

ಮೊಡವೆಗೆ ಚಿಕಿತ್ಸೆ ಸಿಗದೆ ಸ್ವಂತ ಬ್ರ್ಯಾಂಡ್ ಶುರು ಮಾಡಿ ಸಕ್ಸಸ್ ಆದ ಮಿಶೆಲ್

|

ನಮ್ಮದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ದೊಡ್ಡ ಯಶಸ್ಸಿನ ತುದಿಗೆ ಹೋಗಿ ಕೂರಬಹುದಾ? ಈ ವರದಿಯನ್ನು ಓದಿದ ಮೇಲೆ ನಿಮಗೆ ಏನನ್ನಿಸುತ್ತದೆ ಯೋಚಿಸಿ. ಬಿಬಿಸಿ ಸರಣಿಯಲ್ಲಿ ಬಂದ ಈ ವರದಿ ಬಹಳ ಆಸಕ್ತಿಕರ ಹಾಗೂ ಪ್ರೋತ್ಸಾಹದಾಯಕವಾಗಿದೆ. ಆಕೆ ಹೆಸರು ಮಿಶೆಲ್ ಡೋಹರ್ಟಿ. ತನ್ನ ಮುಖದ ಮೇಲಿನ ಮೊಡವೆ ನಿವಾರಿಸಿಕೊಳ್ಳಲು 14 ವರ್ಷಗಳ ಕಾಲ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಾಡದ ಪ್ರಯತ್ನಗಳಿಲ್ಲ.

ಟಿಕ್ ಟಾಕ್ ಗೆ ಸಡ್ಡು ಹೊಡೆಯುತ್ತಿರುವ 'ಚಿಂಗಾರಿ' ರೂಪಿಸಿದ್ದು ಈ ಯುವಕಟಿಕ್ ಟಾಕ್ ಗೆ ಸಡ್ಡು ಹೊಡೆಯುತ್ತಿರುವ 'ಚಿಂಗಾರಿ' ರೂಪಿಸಿದ್ದು ಈ ಯುವಕ

ವೈದ್ಯರು ಹೇಳಿದ ಔಷಧಗಳು, ಟೀ ಟ್ರೀ ಎಣ್ಣೆ ಮತ್ತು ಕೊನೆಗೆ ಮೊಡವೆ ಇದ್ದ ಜಾಗದಲ್ಲಿ ಹಲ್ಲು ತಿಕ್ಕುವ ಪೇಸ್ಟ್ ಕೂಡ ಹಾಕಿದ್ದಾರೆ. ಯಾವುದೇ ಪ್ರಯೋಜನ ಆಗಿಲ್ಲ. ಕೆಲವು ಭಯಂಕರ ಪ್ರಯತ್ನಗಳನ್ನು ಸಹ ಮಾಡಿದ್ದಾರೆ. ಅದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತೇ ವಿನಾ ಏನೂ ಉಪಯೋಗ ಆಗಲಿಲ್ಲ. ತನ್ನ 14ನೇ ವಯಸ್ಸಿನಿಂದ 28ರ ವರೆಗೆ ಆಕೆ ಮಾಡಿದ ಪ್ರಯತ್ನ, ಪಟ್ಟ ಪಾಡು ಎಲ್ಲವೂ ಹೊಳೆಯ ನೀರಿನಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ.

ಮೂಲತಃ ನ್ಯೂಜಿಲ್ಯಾಂಡ್ ನವರು

ಮೂಲತಃ ನ್ಯೂಜಿಲ್ಯಾಂಡ್ ನವರು

ಆಕೆ ಮೂಲತಃ ನ್ಯೂಜಿಲ್ಯಾಂಡ್ ನವರು. ಮೊಡವೆ ಸಮಸ್ಯೆ ನಿವಾರಿಸಿಕೊಳ್ಳಲು ಹನ್ನೊಂದು ವರ್ಷಗಳ ಕಾಲ ಆಂಟಿ ಬಯೋಟಿಕ್ಸ್ ಕೂಡ ತೆಗೆದುಕೊಂಡಿದ್ದಾರೆ. ಆಕ್ಲೆಂಡ್ ನಲ್ಲಿ ಹದಿನೈದನೇ ವಯಸ್ಸಿಗೆ ಶಾಲೆ ಬಿಟ್ಟ ಆಕೆ, ಕಾಸ್ಮೆಟಿಕ್ಸ್ ಸೇಲ್ಸ್ ಪರ್ಸನ್ ಆಗಿ ತಮ್ಮ ವೃತ್ತಿ ಆರಂಭಿಸಿದ್ದಾರೆ. ಜನರು ತನಗಿಂತ ಮೊಡವೆ ಕಡೆಗೆ ಮುಖ ಕಿವುಚಿಕೊಂಡು ನೋಡುತ್ತಾರೆ ಎಂಬುದು ಆಕೆಯನ್ನು ಖಿನ್ನತೆಗೆ ದೂಡುತ್ತದೆ. ಬ್ಯೂಟಿ ಸಲೂನ್ ಗಳಲ್ಲಿ ಇರುವ ಕ್ರೀಮ್ ಗಳು ಈಗಾಗಲೇ ಸುಂದರವಾದ ಚರ್ಮ ಇರುವವರಿಗಾಗಿ ಮಾತ್ರ. ಆದರೆ ಚರ್ಮ ಸಮಸ್ಯೆ ಇರುವವರು ಏನು ಮಾಡಬೇಕು ಎಂಬ ಪ್ರಶ್ನೆ ಮಿಶೆಲ್ ಅವರನ್ನು ಕಾಡುತ್ತದೆ. ತಮ್ಮ ಇಪ್ಪತ್ತೆಳನೇ ವಯಸ್ಸಿನಲ್ಲಿ ಕೊನೆಗೂ ಆಕೆ ಕಾಸ್ಮೆಟಿಕ್ಸ್ ಕಂಡುಹಿಡಿಯುತ್ತಾರೆ. ಅದರ ಮೂಲಕ ಮೊಡವೆ ಸಮಸ್ಯೆ ಸುಧಾರಿಸುತ್ತದೆ. ಹಾಗೆ ಸುಧಾರಿಸಲು ಕಾರಣವಾಗುವುದು ಗ್ಲೈಕೊಲಿಕ್ ಆಸಿಡ್.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ಸ್ಥಳಾಂತರ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ಸ್ಥಳಾಂತರ

ಇದು ಕಬ್ಬಿನಿಂದ ಹೊರಬರುವ ಅಂಶ. ಚರ್ಮದ ಮೇಲ್ಭಾಗದಿಂದ ಮೃತ ಸೆಲ್ಸ್ ಗಳನ್ನು ತೊಲಗಿಸುವುದಕ್ಕೆ ಇದನ್ನು ಬಳಸಲಾಗುತ್ತದೆ. ಇಂದಿಗೆ ಜಗತ್ತಿನಾದ್ಯಂತ ಕಾಸ್ಮೆಟಿಕ್ ಬ್ರ್ಯಾಂಡ್ ಗಳು ಇದನ್ನೇ ಬಳಸುತ್ತಿವೆ. ಸಾವಿರಾರು ಉತ್ಪನ್ನಗಳಲ್ಲಿ ಇದನ್ನು ಗಮನಿಸಬಹುದು. ಯಾವಾಗ ಈ ಆಸಿಡ್ ಬಳಕೆ ಮಾಡಿ, ಅದರಿಂದ ಫಲಿತಾಂಶ ಕಾಣಲು ಆರಂಭಿಸುತ್ತಾರೋ, ತನ್ನದೇ ಸ್ವಂತದ್ದೊಂದು ಚರ್ಮ ರಕ್ಷಣೆ ಬ್ರ್ಯಾಂಡ್ ಆರಂಭಿಸಲು ನಿರ್ಧರಿಸುತ್ತಾರೆ. ಅದಕ್ಕೆ ಅವರು ಬಳಸುವುದು ಇದೇ ವಸ್ತುಗಳುಳ್ಳ ಕ್ರೀಮ್. ಮುಂದಿನ ನಾಲ್ಕು ವರ್ಷಗಳ ಕಾಲ ಆಕೆ ಮತ್ತು ಆಕೆಯ ಗಂಡ ಈ ಉತ್ಪನ್ನದ ಅಭಿವೃದ್ಧಿಗೆ ಹಾಗೂ ಹಣ ಉಳಿತಾಯಕ್ಕೆ ಅಂತಲೇ ಮೀಸಲಿಡುತ್ತಾರೆ. 1995ರಲ್ಲಿ ಮಿಶೆಲ್ ಗೆ 32ನೇ ವರ್ಷವಿದ್ದಾಗ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ಸ್ಥಳಾಂತರ ಆಗಿ, ಅಲ್ಲಿ ಆಲ್ಫಾ- H ಆರಂಭಿಸುತ್ತಾರೆ. ಗ್ಲೈಕೋಲಿಕ್ ಆಸಿಡ್ ಎಂಬುದು ಆಲ್ಫಾ ಹೈಡ್ರೋಕ್ಸಿ ಆಸಿಡ್ಸ್ ಗುಂಪಿನಲ್ಲಿ ಒಂದಾಗಿರುತ್ತದೆ. ಆದ್ದರಿಂದ ಆ ಹೆಸರು ಇಡಲಾಗುತ್ತದೆ.

ದಿನಕ್ಕೆ 10 ಸಾವಿರ ಬಾಟಲ್ ಲಿಕ್ವಿಡ್ ಗೋಲ್ಡ್ ಉತ್ಪಾದನೆ

ದಿನಕ್ಕೆ 10 ಸಾವಿರ ಬಾಟಲ್ ಲಿಕ್ವಿಡ್ ಗೋಲ್ಡ್ ಉತ್ಪಾದನೆ

ಈ ದಂಪತಿ ಒಂದು ಗ್ಯಾರೇಜ್ ನಲ್ಲಿ ಆರಂಭಿಸಿದ ಈ ಸಾಹಸ, ಇಂದು ಕಂಪೆನಿಯಾಗಿ ಬೆಳೆದು, ವಾರ್ಷಿಕವಾಗಿ 7.7 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಆದಾಯ ತರುತ್ತಿದೆ. ಆಸ್ಟ್ರೇಲಿಯಾ ಗಾಯಕಿ ಹಾಗೂ ನಟಿ ಕೈಲಿ ಮಿನೋಗ್ ಈ ಉತ್ಪನ್ನಕ್ಕೆ ಅಭಿಮಾನಿ. ಜಾಗತಿಕವಾಗಿ ಇರುವ ಬೇಡಿಕೆ ಪೂರೈಸಲು ಈಗ ಕಂಪೆನಿ ದಿನಕ್ಕೆ 10 ಸಾವಿರ ಬಾಟಲ್ ಲಿಕ್ವಿಡ್ ಗೋಲ್ಡ್ ಉತ್ಪಾದನೆ ಮಾಡುತ್ತದೆ. ಎಲ್ಲವನ್ನೂ ಆಸ್ಟ್ರೇಲಿಯಾದಲ್ಲೂ ಉತ್ಪಾದಿಸಲಾಗುತ್ತಿದೆ. ಆರಂಭದಲ್ಲಿ ಇದನ್ನು ಫಾರ್ಮಸಿಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತಂತೆ. ಅದಕ್ಕೆ ಕಾರಣ ಅದರಲ್ಲಿ ಇದ ಪದ 'ಆಸಿಡ್'. ಸಲೂನ್ ಗಳಲ್ಲಿ ಈ ಪದ ಇದ್ದಲ್ಲಿ ಅದನ್ನು ಬಳಸುವುದಿಲ್ಲ. ಆದರೆ 2000ನೇ ಇಸವಿಯಲ್ಲಿ ಮಿಶೆಲ್ ಟೀವಿಯಲ್ಲಿ ಜಾಹೀರಾತು ನೀಡಲು ಆರಂಭಿಸಿದ ಮೇಲೆ ಭಾರೀ ಪ್ರಮಾಣದಲ್ಲಿ ಮಾರಾಟ ಹೆಚ್ಚಾಗುತ್ತದೆ. ಇತರ ಬ್ರ್ಯಾಂಡ್ ಗಳಿಗೆ ಅಚ್ಚರಿ ಆಗುತ್ತದೆ. ಮಿಶೆಲ್ ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಮಿಶೆಲ್ ಗೆ ಈಗ 57 ವರ್ಷ ವಯಸ್ಸು

ಮಿಶೆಲ್ ಗೆ ಈಗ 57 ವರ್ಷ ವಯಸ್ಸು

ಸಲೂನ್ ಗಳಲ್ಲಿ ಬಳಸುವಂಥ ಚರ್ಮ ರಕ್ಷಣೆ ಕ್ರೀಮ್ ತರುವುದು ನಮ್ಮ ಉದ್ದೇಶ ಆಗಿತ್ತು. ವೃತ್ತಿಪರರು ಕೂಡ ಬಗೆಹರಿಸಲಾಗದ ಚರ್ಮದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ನಮ್ಮ ಗುರಿ ಆಗಿತ್ತು ಎನ್ನುತ್ತಾರೆ ಮಿಶೆಲ್. ಅಂದ ಹಾಗೆ ಮಿಶೆಲ್ ಗೆ ಈಗ 57 ವರ್ಷ ವಯಸ್ಸು. ಆಕೆ ಈಗ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ತಮ್ಮ ಚರ್ಮದ ಸೌಂದರ್ಯ ಕಡಿಮೆ ಆಗಿಲ್ಲ ಎನ್ನುತ್ತಾರೆ. ಆರೋಗ್ಯದ ಸಮಸ್ಯೆ ಇರುವ ಕಾರಣಕ್ಕೆ ಕಳೆದ ವರ್ಷ ತಮ್ಮ ವ್ಯವಹಾರದಲ್ಲಿನ ಷೇರಿನ ಪಾಲನ್ನು ಮೊದಲ ಬಾರಿಗೆ ಜಾಗತಿಕ ಹೂಡಿಕೆ ಕಂಪೆನಿ ರಿವರ್ ಸೈಡ್ ಗೆ ಮಾರಿದ್ದಾರೆ. ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಈ ಕಂಪೆನಿಯಿಂದ ವೇತನ ಪಡೆಯುತ್ತಿರುವ 65 ಮಂದಿ ಸಿಬ್ಬಂದಿ ಇದ್ದಾರೆ. ಇನ್ನೂ ಬೇರೆ ವ್ಯವಹಾರ ಮಾಡಲು ಸಾಧ್ಯವಿದ್ದ ಮಿಶೆಲ್ ಆರೋಗ್ಯದ ಕಾರಣಕ್ಕೆ ಸುಮ್ಮನಾಗಿದ್ದಾಗಿ ಹೇಳುತ್ತಾರೆ.

English summary

Michelle Doherty Acne Skin Problem Inspired To Start A New Skin Care Brand

Michelle Doherty, boss of Alpha- H brand. Here is the her success story.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X