For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್ ಫೋನ್ ಕ್ಷೇತ್ರಕ್ಕೆ ಕಮ್ ಬ್ಯಾಕ್ ಘೋಷಿಸಿದ ಮೈಕ್ರೋಮ್ಯಾಕ್ಸ್

|

ದೇಶಿ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಮೈಕ್ರೋಮ್ಯಾಕ್ಸ್ ಮತ್ತೊಮ್ಮೆ ಸ್ಮಾರ್ಟ್ ಫೋನ್ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿರುವುದಾಗಿ ಘೋಷಿಸಿದೆ. ಮೈಕ್ರೋಮ್ಯಾಕ್ಸ್ ಸಂಸ್ಥೆ ತನ್ನ ಅಧಿಕೃತ ಟ್ವೀಟ್ ಮಾಡಿ ಹೊಸ ಆವೃತ್ತಿ ಸ್ಮಾರ್ಟ್ ಫೋನ್ ನೊಂದಿಗೆ ಮರು ಪ್ರವೇಶ ಪಡೆಯಲು ಸಂಸ್ಥೆ ಬಯಸಿದೆ ಎಂದು ಹೇಳಿದೆ.

ಸಂಸ್ಥೆಯ ಸಹ ಸ್ಥಾಪಕ ರಾಹುಲ್ ಶರ್ಮ ಅವರು ಈ ಬಗ್ಗೆ ಸುಳಿವು ನೀಡಿದ್ದರೂ ಮೈಕ್ರೋಮ್ಯಾಕ್ಸ್ ಸಂಸ್ಥೆ ಇನ್ನೂ ವಿವರಗಳನ್ನು ಹಂಚಿಕೊಂಡಿಲ್ಲ. ಆಗಸ್ಟ್ 15ರಂದು coming back soon ಎಂದು ಟ್ವೀಟ್ ಮಾಡಿದ್ದ ಸಂಸ್ಥೆ ಮತ್ತೆ ಕಾಣಿಸಿಕೊಂಡಿರಲಿಲ್ಲ. ಕೊರೊನಾವೈರಸ್ ಸೋಂಕಿನಿಂದ ಸ್ಮಾರ್ಟ್ ಫೋನ್ ಮಾರಾಟ ಕ್ಷೇತ್ರಕ್ಕೂ ಹೊಡೆತ ಬಿದ್ದರೂ ಕೇಂದ್ರ ಸರ್ಕಾರದ ಸ್ಥಳೀಯ ಸಂಸ್ಥೆಗೆ ಆದ್ಯತೆ ನೀತಿ ಮೂಲಕ ಹಲವು ಕಂಪನಿಗಳು ಮರು ಪ್ರವೇಶದ ಹಾದಿಯಲ್ಲಿವೆ.

ಸ್ಮಾರ್ಟ್ ಫೋನ್ ಕ್ಷೇತ್ರಕ್ಕೆ ಕಮ್ ಬ್ಯಾಕ್ ಘೋಷಿಸಿದ ಮೈಕ್ರೋಮ್ಯಾಕ್ಸ್

 

ಎಕಾನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಮೈಕ್ರೋಮ್ಯಾಕ್ಸ್ ಶರ್ಮ ಅವರು ಸಂಸ್ಥೆಯ ಭವಿಷ್ಯದ ಯೋಜನೆ ಬಗ್ಗೆ ಮಾತನಾಡಿ ಸುಮಾರು 500 ಕೋಟಿ ರು ಹೂಡಿಕೆ ಮಾಡಿ ಸ್ಥಳೀಯವಾಗಿ ಹ್ಯಾಂಡ್ ಸೆಟ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವು ಜೊತೆಗಿರಲಿದೆ ಎಂದಿದ್ದಾರೆ. ಚೀನಾದ ಬ್ರ್ಯಾಂಡ್ ಗಳ ಗುಣಮಟ್ಟಕ್ಕೆ ಸ್ಪರ್ಧೆಯೊಡ್ಡಬಲ್ಲ ವಿನ್ಯಾಸ, ಕಾರ್ಯಕ್ಷಮತೆಯನ್ನು ನಮ್ಮ ಉತ್ಪನ್ನಗಳು ಹೊಂದಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನೀತಿ ಬದಲಾಗುತ್ತಿದ್ದಂತೆ ಮುಂದಿನ ಆರ್ಥಿಕ ವರ್ಷ ಅಂತ್ಯಕ್ಕೆ ಮೈಕ್ರೋಮ್ಯಾಕ್ಸ್ ಸೇರಿದಂತೆ ಸುಮಾರು 20ಕ್ಕೂ ಅಧಿಕ ಬೃಹತ್ ದೇಶಿ ಉತ್ಪಾದಿತ ಸಂಸ್ಥೆಗಳು ಮರು ಜೀವ ಪಡೆಯಲಿವೆ.

English summary

Micromax announces comeback in Indian smartphone market with "In"

Home-grown smartphone company Micromax will soon be launching a new range of “In” smartphones in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X