For Quick Alerts
ALLOW NOTIFICATIONS  
For Daily Alerts

ಒಂದು ದಶಕದಲ್ಲಿಯೇ ಆಲೂಗಡ್ಡೆ ಮಾಸಿಕ ಸರಾಸರಿ ಬೆಲೆ ಅಧಿಕ

|

ನವದೆಹಲಿ, ಅಕ್ಟೊಬರ್ 31: ಈರುಳ್ಳಿ ಬೆಲೆಯ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಆಘಾತ ಎದುರಾಗಿದೆ. ದೇಶದಾದ್ಯಂತ ಆಲೂಗಡ್ಡೆ ಮಾಸಿಕ ಸರಾಸರಿ ಚಿಲ್ಲರೆ ದರವು ಪ್ರತಿ ಕೆಜಿಗೆ 39.30 ರೂಗೆ ಏರಿಕೆಯಾಗಿದೆ. ಇದು ಕಳೆದ 130 ತಿಂಗಳಿನಲ್ಲಿಯೇ ಅತ್ಯಧಿಕ ಎಂದು ರಾಜ್ಯ ನಾಗರಿಕ ಪೂರೈಕೆಗಳ ಇಲಾಖೆಯ ಅಧಿಕೃತ ದಾಖಲೆಗಳು ತಿಳಿಸಿವೆ.

 

ಭಾರತದ ಇತರೆ ಪ್ರದೇಶಗಳಿಗಿಂತ ದೆಹಲಿಯಲ್ಲಿ ಈ ತಿಂಗಳು ಆಲೂಗಡ್ಡೆಯ ಸರಾಸರಿ ಚಿಲ್ಲರೆ ದರವು ಕೆಜಿಗೆ 40.11 ರೂ. ತಲುಪಿದೆ. 2010ರ ಜನವರಿಯಿಂದ, ಅಂದರೆ ಸುಮಾರು 11 ವರ್ಷಗಳಲ್ಲಿ ಇದು ಅತ್ಯಧಿಕ ದರವಾಗಿದೆ.

2019ರ ಅಕ್ಟೋಬರ್‌ನಲ್ಲಿದ್ದ ಪ್ರತಿ ಕೆಜಿ ಆಲೂಗಡ್ಡೆ ಮೇಲಿನ ಅಖಿಲ ಭಾರತ ಸರಾಸರಿ ದರಕ್ಕೆ ಹೋಲಿಸಿದರೆ ಈ ಬಾರಿಯ ಬೆಲೆ ದುಪ್ಪಟ್ಟಾಗಿದೆ. ಕಳೆದ ವರ್ಷ ಆಲೂಗಡ್ಡೆ ಸರಾಸರಿ ದರ 20.57 ರೂ ಇತ್ತು. ಹಾಗೆಯೇ ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷ ಇದೇ ವೇಳೆಗೆ ಕೆಜಿಗೆ 25 ರೂ. ಇತ್ತು. ಅದೀಗ ಶೇ 60ರಷ್ಟು ಹೆಚ್ಚಳವಾಗಿದೆ.

ಒಂದು ದಶಕದಲ್ಲಿಯೇ ಆಲೂಗಡ್ಡೆ ಮಾಸಿಕ ಸರಾಸರಿ ಬೆಲೆ ಅಧಿಕ

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಹಂಚಿಕೆ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇರುವ 2010ರ ಜನವರಿಯಲ್ಲಿ ದಾಖಲಿಸಿಕೊಂಡಿರುವ ದಾಖಲೆಯೇ ಈಗಿನ ದರದೊಂದಿಗೆ ಹೋಲಿಸಲು ಇರುವ ಅಂತಿಮ ದಾಖಲೆಯಾಗಿದೆ.

ಅವಧಿಪೂರ್ಣ ವಾತಾವರಣದಲ್ಲಿನ ಬದಲಾವಣೆಗಳ ಕಾರಣದಿಂದ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಆಲೂಗಡ್ಡೆಯ ಚಿಲ್ಲರೆ ಮಾರಾಟ ದರವು ಸಾಮಾನ್ಯವಾಗಿ ಹೆಚ್ಚಳವಾಗುತ್ತದೆ. ಪ್ರಸಕ್ತ ವರ್ಷ ಇದು ಫೆಬ್ರವರಿ-ಮಾರ್ಚ್‌ನಿಂದಲೇ ಏರಿಕೆಯಾಗತೊಡಗಿತ್ತು. ಆಗ ಮಾಸಿಕ ಸರಾಸರಿ ಚಿಲ್ಲರೆ ದರವು ಕೆಜಿಗೆ 23ರವರೆಗೆ ತಲುಪಿತ್ತು.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ದಾಖಲೆಗಳ ಪ್ರಕಾರ ಈ ವರ್ಷ ಶೈತ್ಯ ಸಂಗ್ರಹಾಗಾರದಲ್ಲಿ 214.25 ಲಕ್ಷ ಟನ್ ಆಲೂಗಡ್ಡೆ ಇದೆ. 2018-19ನೇ ಸಾಲಿನಲ್ಲಿ ಈ ವೇಳೆಗೆ 238.50 ಲಕ್ಷ ಟನ್ ಸಂಗ್ರಹವಿತ್ತು.

English summary

Monthly Average Price Of Potato Highest Since 2010 January

The All India Monthly Average retail price of potato rises to Rs 39.30 per KG, is the highest since 2010 January.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X