For Quick Alerts
ALLOW NOTIFICATIONS  
For Daily Alerts

ಕಷ್ಟದಲ್ಲಿದೆ ಕುವೈತ್, ತೈಲ ರಾಷ್ಟ್ರದಲ್ಲಿ ಈಗ ಆಡಳಿತದ ಜತೆ ಹಣಕಾಸು ಸಮಸ್ಯೆ

|

ಮೂಡೀಸ್ ನಿಂದ ಕುವೈತ್ ರೇಟಿಂಗ್ ಇಳಿಸಲಾಗಿದೆ. ಇದೇ ಮೊದಲ ಬಾರಿಗೆ ಕುವೈತ್ ಅನ್ನು ಡೌನ್ ಗ್ರೇಡ್ ಮಾಡಲಾಗಿದೆ. ಹೆಚ್ಚಿದ ನಗದು ಅಪಾಯ, ದುರ್ಬಲ ಆಡಳಿತ ಹಾಗೂ ಸಾಂಸ್ಥಿಕ ಬಲ, ತೈಲ ಬೆಲೆಯಲ್ಲಿನ ಇಳಿಕೆಯಿಂದ ಗಲ್ಫ್ ರಾಷ್ಟ್ರವನ್ನು ಅಲುಗಾಡಿಸಿಬಿಟ್ಟಿದೆ. ಜತೆಗೆ ಅಂತರರಾಷ್ಟ್ರೀಯ ಮಟ್ಟದಿಂದ ಸಾಲ ಪಡೆಯಲು ಕಾನೂನು ಹೊರಡಿಸುವುದಕ್ಕೆ ಹೆಣಗಾಡುತ್ತಿದೆ.

ಕುವೈತ್ ಉದ್ಯೋಗದ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್

ಫ್ಯೂಚರ್ ಜನರೇಷನ್ ಫಂಡ್ ನಲ್ಲಿ ಇರುವ ಸವರನ್ ವೆಲ್ತ್ ಫಂಡ್ ಮೇಲೆ ಸಾಲ ಪಡೆಯುವುದಕ್ಕೆ ಕಾನೂನು ಒಪ್ಪಿಗೆ ಸಿಗುತ್ತಿಲ್ಲ. ಸದ್ಯಕ್ಕೆ ಸಿಗುತ್ತಿರುವ ನಗದು ಸಂಪನ್ಮೂಲ ಕರಗುತ್ತಾ ಬರುತ್ತಿದೆ. ಕುವೈತ್ ನ ಅಸಾಮಾನ್ಯ ಆರ್ಥಿಕ ಸಾಮರ್ಥ್ಯದ ಹೊರತಾಗಿಯೂ ನಗದು ಅಪಾಯವು ತೆರೆದುಕೊಳ್ಳುತ್ತಿದೆ ಎಂದು ಮೂಡೀಸ್ ಹೇಳಿದೆ.

A1ನಿಂದ Aa2ಗೆ ರೇಟಿಂಗ್ ಇಳಿಸಲಾಗಿದೆ
 

A1ನಿಂದ Aa2ಗೆ ರೇಟಿಂಗ್ ಇಳಿಸಲಾಗಿದೆ

ಮೂಡೀಸ್ ನಿಂದ ಕುವೈತ್ ರೇಟಿಂಗ್ ಅನ್ನು A1ನಿಂದ Aa2ಗೆ ಇಳಿಸಲಾಗಿದೆ. ಕೊನೆಯದಾಗಿ ಕುವೈತ್ ನಿಂದ ಅಂತರರಾಷ್ಟ್ರೀಯ ಮಾರ್ಕೆಟ್ ನಲ್ಲಿ ಸಾಲದ ಬಾಂಡ್ ವಿತರಣೆ ಆಗಿದ್ದು 2017ರಲ್ಲಿ. ಆ ಬಾಂಡ್ ಈಗ ವಿತರಿಸಿದಂತೆಯೇ ಅಬುಧಾಬಿಯಲ್ಲಿ ವಹಿವಾಟು ನಡೆಸುತ್ತಿದೆ. ಈ ಭಾಗದಲ್ಲಿ ಅತ್ಯಂತ ಸುರಕ್ಷಿತ ಸಾಲ ಎಂದು ಪರಿಗಣಿಸಲಾಗಿದೆ. ದೊಡ್ಡ ಮಟ್ಟದಲ್ಲಿ ತೈಲದಿಂದ ಬರುವ ಆದಾಯದ ಕಾರಣಕ್ಕೆ ಹೂಡಿಕೆದಾರರಲ್ಲಿ ಭರವಸೆ ನೀಡಿತ್ತು. ಆದರೆ, 14 ಸಾವಿರ ಕೋಟಿ ಅಮೆರಿಕನ್ ಡಾಲರ್ ಆರ್ಥಿಕತೆಯ ಕುವೈತ್ ಈಗ 4600 ಕೋಟಿ ಡಾಲರ್ ಕೊರತೆ ಎದುರಿಸುತ್ತಿದೆ. ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿದು. ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಸರ್ಕಾರ ಮತ್ತು ಸಂಸತ್ ಮಧ್ಯೆ ಹೊಸ ಸಾಲದ ಕಾನೂನು ವಿಚಾರದಲ್ಲಿನ ತಿಕ್ಕಾಟದಿಂದ ಸಮಸ್ಯೆ ಎದುರಾಗಿದೆ.

ಬಜೆಟ್ ನಲ್ಲಿ 300 ಕೋಟಿ ಅಮೆರಿಕನ್ ಡಾಲರ್ ಕಡಿತ

ಬಜೆಟ್ ನಲ್ಲಿ 300 ಕೋಟಿ ಅಮೆರಿಕನ್ ಡಾಲರ್ ಕಡಿತ

ಕುವೈತ್ ನ ಸಾಂಸ್ಥಿಕ ಬಲವನ್ನು ಅಳೆಯುವುದಕ್ಕೆ ಸಂಸತ್ ಹಾಗೂ ಸರ್ಕಾರದ ಮಧ್ಯೆ ಸಂಬಂಧ ಹಾಳಾಗಿರುವುದು ಅತಿ ದೊಡ್ಡ ತಡೆ ಎಂದು ಮೂಡೀಸ್ ಹೇಳಿದೆ. ಆದರೆ ಹಣಕಾಸು ಸಂಗ್ರಹದ ವಿಷಯಕ್ಕೆ ಬಂದರೆ ಕುವೈತ್ ನ ಶಾಸಕಾಂಗ, ಅಧಿಕಾಸ್ಥ ಸಂಸ್ಥೆಗಳು ಹಾಗೂ ನೀತಿಗಳ ಪರಿಣಾಮವು ಈ ಹಿಂದೆ ಮೌಲ್ಯಮಾಪನ ಮಾಡಿದ್ದಕ್ಕಿಂತ ಇನ್ನೂ ಕೆಳ ಮಟ್ಟದಲ್ಲಿದೆ ಎಂದಿದೆ. ಹಣ ಉಳಿತಾಯ ಮಾಡಬೇಕು ಎಂಬ ಕಾರಣಕ್ಕೆ ಈ ತಿಂಗಳ ಆರಂಭದಲ್ಲಿ 2020- 21ರ ಬಜೆಟ್ ನಲ್ಲಿ 300 ಕೋಟಿ ಅಮೆರಿಕನ್ ಡಾಲರ್ ಕಡಿತ ಮಾಡಿತ್ತು ಕುವೈತ್.

ಕುವೈತ್ ಗೆ ಬರುವ ಆದಾಯದಲ್ಲಿ ಶೇಕಡಾ 89ರಷ್ಟು ತೈಲದಿಂದಲೇ

ಕುವೈತ್ ಗೆ ಬರುವ ಆದಾಯದಲ್ಲಿ ಶೇಕಡಾ 89ರಷ್ಟು ತೈಲದಿಂದಲೇ

ಸರ್ಕಾರವು ತರಲು ಹೊರಟಿರುವ ಸಾಲದ ಕಾನೂನು ಈಗಿನ ಸಾಲ ಪಡೆಯುವ ಮಿತಿಯನ್ನು ಹೆಚ್ಚಳ ಮಾಡಿ, ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಸೆಳೆಯಲು ಸಹಾಯ ಮಾಡುತ್ತದೆ. ಆದರೆ ಜನಪ್ರತಿನಿಧಿಗಳು ಮೊದಲಿಗೆ ಆರ್ಥಿಕ ಸುಧಾರಣೆ ಆಗಲಿ ಎಂದು ಯೋಜನೆ ರೂಪಿಸುತ್ತಿದ್ದಾರೆ. ಜತೆಗೆ ತೈಲದ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುವುದಕ್ಕೆ ಆಲೋಚಿಸುತ್ತಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಆದಾಯದಲ್ಲಿ ಶೇಕಡಾ 89ರಷ್ಟು ತೈಲದಿಂದಲೇ ಬಂದಿದೆ.

English summary

Moody's Downgrades Kuwait For The First Time

Due to higher liquidity risks and weaker governance and institutional strength, Moody's downgraded Kuwait's rating.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X