For Quick Alerts
ALLOW NOTIFICATIONS  
For Daily Alerts

ಕೊರೊನಾ ಕಾಲದಲ್ಲಿ ಜೀವನ ನಿರ್ವಹಣೆ ವೆಚ್ಚ ದುಬಾರಿ ನಗರಗಳ ಪಟ್ಟಿಯಲ್ಲಿ ದೆಹಲಿ

By ಅನಿಲ್ ಆಚಾರ್
|

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಿಯವರೆಗೆ ವರ್ಕ್ ಫ್ರಮ್ ಹೋಮ್ ಇರುತ್ತದೋ ಅಲ್ಲಿಯ ತನಕ ಹೊಸ ನಗರಗಳಿಗೆ ಸ್ಥಳಾಂತರ ಆಗಲು ಯೋಜನೆ ರೂಪಿಸಿಕೊಂಡಿದ್ದರೆ ಈ ವರದಿಯನ್ನು ಒಮ್ಮೆ ಓದಿಕೊಂಡುಬಿಡಿ. ಯಾವ ನಗರ ನಿಮಗೆ ಸೂಕ್ತ ಅನ್ನೋದನ್ನು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ತಿಳಿಸುತ್ತದೆ.

ಹೊಸ ಸಂಶೋಧನೆಯ ಪ್ರಕಾರ, ಇಐಯು ನೀಡಿರುವ ಶ್ರೇಯಾಂಕಗಳನ್ನು ಗಮನಿಸಿದಲ್ಲಿ ಹಾಂಕಾಂಗ್, ಪ್ಯಾರಿಸ್ ಹಾಗೂ ಜ್ಯೂರಿಚ್ ನಲ್ಲಿ ಜೀವನ ನಿರ್ವಹಣೆ ವೆಚ್ಚ ವಿಪರೀತ ಹೆಚ್ಚಂತೆ. ಇವು ಮೊದಲ ಮೂರು ಸ್ಥಾನದಲ್ಲಿ ಇವೆ. ಈ ಪಟ್ಟಿಯಲ್ಲಿ 133 ನಗರಗಳಿದ್ದು, ಅದರಲ್ಲಿ ನ್ಯೂಯಾರ್ಕ್ ಮತ್ತು ದೆಹಲಿ ಸಹ ಇದೆ.

ಬೋನಿನಂತೆ ಇರುವ ಮನೆಗಳು, ಬಾಡಿಗೆ ಮಾತ್ರ ತಿಂಗಳಿಗೆ 17 ರಿಂದ 22 ಸಾವಿರ ರುಪಾಯಿಬೋನಿನಂತೆ ಇರುವ ಮನೆಗಳು, ಬಾಡಿಗೆ ಮಾತ್ರ ತಿಂಗಳಿಗೆ 17 ರಿಂದ 22 ಸಾವಿರ ರುಪಾಯಿ

138 ವಸ್ತುಗಳ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಜತೆಗೆ ಕೊರೊನಾ ಕಾರಣಕ್ಕೆ ಏರಿಕೆ ಮತ್ತು ಇಳಿಕೆ ಕಾಣುತ್ತಿರುವ ಆ ದೇಶದ ಕರೆನ್ಸಿಯನ್ನೂ ಪರಿಗಣಿಸಲಾಗಿದೆ. ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಇಳಿಕೆ ಕಂಡ ಕಾರಣಕ್ಕೆ ಅಮೆರಿಕನ್ ಮತ್ತು ಆಫ್ರಿಕನ್ ನಗರಗಳಲ್ಲಿ ಜೀವನ ನಡೆಸುವುದು ಅಷ್ಟೇನೂ ವೆಚ್ಚದಾಯಕ ಆಗಿಲ್ಲ. ಪಶ್ಚಿಮ ಯುರೋಪ್ ದೇಶಗಳಿಗೆ ಹೋಲಿಸಿದಲ್ಲಿ ಅವು ಕಡಿಮೆ ಖರ್ಚಿನವಾಗಿವೆ.

ಜೀವನ ನಿರ್ವಹಣೆ ವೆಚ್ಚ ದುಬಾರಿ ನಗರಗಳ ಪಟ್ಟಿಯಲ್ಲಿ ದೆಹಲಿ

ಯುರೋಪಿಯನ್ ನಗರಗಳಲ್ಲಿ ಕೊರೊನಾ ಬಿಕ್ಕಟ್ಟಿನ ವಿರುದ್ಧ ಸೂಕ್ತ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ಯುರೋ ಮೌಲ್ಯ ಉತ್ತಮ ಗಳಿಕೆ ಕಂಡಿದೆ. ಇಐಯುನ ಉಪಾಸನಾ ದತ್ತಾ ಮಾತನಾಡಿ, ಗ್ರಾಹಕ ಎಲೆಕ್ಟ್ರಾನಿಕ್ಸ್ ಗಳ ಬೆಲೆ ಹೆಚ್ಚಳ, ಮನೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜೀವನ ನಿರ್ವಹಣೆ ವೆಚ್ಚವನ್ನು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

English summary

Most Expensive Global Cities During Corona Pandemic According To EIU

Here is the list of most expensive global cities during corona pandemic according to Economist Intelligence Unit (EIU).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X