For Quick Alerts
ALLOW NOTIFICATIONS  
For Daily Alerts

2019ರಲ್ಲಿ ಮುಕೇಶ್ ಅಂಬಾನಿ ಪ್ರತಿ ಗಂಟೆಗೆ ಗಳಿಸಿದ್ದು 7 ಕೋಟಿ ರುಪಾಯಿ

|

ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 2019ರಲ್ಲಿ ಪ್ರತಿ ಗಂಟೆಗೆ 7 ಕೋಟಿ ರುಪಾಯಿ ಆದಾಯ ಗಳಿಸಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ಪ್ರತಿ ತಿಂಗಳು ಮೂವರು ಶತಕೋಟ್ಯಧಿಪತಿಗಳನ್ನು ಸೇರ್ಪಡೆಯಾಗಿದ್ದು, ಇದೀಗ ಆ ಸಂಖ್ಯೆಯು 138ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಲಿಸ್ಟ್‌ನಲ್ಲಿ ಭಾರತವು ಮೂರನೇ ಸ್ಥಾನದಲ್ಲಿದ್ದು, ಚೀನಾ ಮತ್ತು ಅಮೆರಿಕಾ ಮೊದಲೆರಡು ಸ್ಥಾನದಲ್ಲಿವೆ. ಚೀನಾದಲ್ಲಿ 799 ಬಿಲಿಯನೇರ್‌ಗಳಿದ್ದು, ಅಮೆರಿಕಾದಲ್ಲಿ 626 ಶತಕೋಟ್ಯಧಿಪತಿಗಳಿದ್ದಾರೆ.

ಒಟ್ಟಾರೆಯಾಗಿ, ಭಾರತವು 34 ಹೊಸ ಶತಕೋಟ್ಯಧಿಪತಿಗಳನ್ನು ಪಡೆದುಕೊಂಡಿದ್ದು, 138 ಕ್ಕೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 67 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

2019ರಲ್ಲಿ ಮುಕೇಶ್ ಅಂಬಾನಿ ಪ್ರತಿ ಗಂಟೆಗೆ ಗಳಿಸಿದ್ದು 7 ಕೋಟಿ ರುಪಾಯಿ

ಮುಕೇಶ್ ಅಂಬಾನಿಯು ಕಳೆದ ವರ್ಷ(2019)ರಲ್ಲಿ ಪ್ರತಿ ಗಂಟೆಗೆ 7 ಕೋಟಿ ರುಪಾಯಿಗಳನ್ನು ಆದಾಯಗಳಿಸಿದ್ದಾರೆ. ವಿದೇಶದಲ್ಲಿರುವ ಭಾರತೀಯ ಮೂಲದ ಬಿಲಯನೇರ್‌ಗಳು ಸೇರಿದರೆ ಒಟ್ಟು ಸಂಖ್ಯೆಯು 170 ಕ್ಕೆ ಏರುತ್ತದೆ.

ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2020ರ ಒಂಬತ್ತನೇ ಆವೃತ್ತಿಯ ಪ್ರಕಾರ, ವಿಶ್ವದಲ್ಲಿ 1 ಬಿಲಿಯನ್ ಯುಎಸ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿರುವ 2,817 ವ್ಯಕ್ತಿಗಳ ಪಟ್ಟಿಯನ್ನು ಹೊಂದಿದೆ. ಅಲ್ಲದೆ 2019 ರಲ್ಲಿ ವಿಶ್ವವು 480 ಶತಕೋಟ್ಯಧಿಪತಿಗಳನ್ನು ಕಂಡಿದೆ. ಇದರಲ್ಲಿ ಚೀನಾದಲ್ಲಿ ವಾರಕ್ಕೆ ಮೂರಕ್ಕಿಂತ ಹೆಚ್ಚು ಜನರು ಸೇರ್ಪಡೆಯಾದರೆ, ಭಾರತದಲ್ಲಿ ತಿಂಗಳಿಗೆ ಮೂವರು ಶತಕೋಟ್ಯಧಿಪತಿಗಳನ್ನು ಸಂಪಾದಿಸಿದೆ.

English summary

Mukesh Ambani Earned 7 Crore Every Hour In 2019

Reliance Industries owner Mukesh Ambani minting 7 crore every hour in 2019
Story first published: Wednesday, February 26, 2020, 21:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X