For Quick Alerts
ALLOW NOTIFICATIONS  
For Daily Alerts

ಮುಕೇಶ್ ಅಂಬಾನಿ ನಿವ್ವಳ ಸಂಪತ್ತು 100 ಬಿಲಿಯನ್ ಡಾಲರ್ ಸಮೀಪಿಸಿದೆ!

|

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮಾರುಕಟ್ಟೆಯ ಬಂಡವಾಳದ ಆಧಾರದಲ್ಲಿ ದೇಶದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿ ತೀವ್ರ ಏರಿಕೆಯಾದ ನಂತರ ಅಧ್ಯಕ್ಷ ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯವು 92.6 ಬಿಲಿಯನ್ ಡಾಲರ್‌ಗೆ ಏರಿದೆ.

ಮಂಗಳವಾರದಂದು ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರುಗಳು ಬಲವಾಗಿ ಏರಿಕೆಯಾಗುತ್ತಲೇ ಇದ್ದವು. ಇಂದು ಕಂಪನಿಯ ಷೇರುಗಳು ರೂ. 2441.30 ಅಥವಾ ಶೇಕಡಾ 0.69ರಷ್ಟು ಲಾಭದೊಂದಿಗೆ ಮುಕ್ತಾಯಗೊಂಡವು. ಕಳೆದ ಕೆಲವು ಟ್ರೇಡಿಂಗ್ ಸೆಷನ್‌ಗಳಲ್ಲಿ ರಿಲಯನ್ಸ್ ಷೇರುಗಳು ಶೇಕಡಾ 9 ರಷ್ಟು ಏರಿಕೆಯಾಗಿದ್ದು, ಮುಖೇಶ್ ಅಂಬಾನಿಯ ಸಂಪತ್ತಿಗೆ ಭಾರಿ ಏರಿಕೆ ನೀಡಿದೆ.

ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್

ಷೇರುಗಳಲ್ಲಿ ಸುಮಾರು $ 16 ಬಿಲಿಯನ್ ಏರಿಕೆ ಆಗಿದ್ದು, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸಂಪತ್ತು ಮತ್ತಷ್ಟು ಏರಿಕೆಗೊಂಡಿದೆ. ಈ ವಾರ ಅವರ ನಿವ್ವಳ ಮೌಲ್ಯದಲ್ಲಿ $ 15.9 ಬಿಲಿಯನ್ ಏರಿಕೆಯಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅಂಬಾನಿ ಈಗ ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಕೇಶ್ ಅಂಬಾನಿಯವರ ವೈಯಕ್ತಿಕ ಸಂಪತ್ತು ಶೀಘ್ರದಲ್ಲೇ 100 ಶತಕೋಟಿ ಡಾಲರ್ ತಲುಪಬಹುದು.

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 07ರ ಮಾರುಕಟ್ಟೆ ದರಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 07ರ ಮಾರುಕಟ್ಟೆ ದರ

ಷೇರು ಬೆಲೆ ಏಕೆ ಹೆಚ್ಚುತ್ತಿದೆ?

ಷೇರು ಬೆಲೆ ಏಕೆ ಹೆಚ್ಚುತ್ತಿದೆ?

ಕೊರೊನಾದ ಎರಡನೇ ತರಂಗದ ನಂತರ ರಿಲಯನ್ಸ್ ಗ್ರೂಪ್‌ನ ಚಿಲ್ಲರೆ ಮತ್ತು ಇಂಧನ ವ್ಯವಹಾರದ ಪುನರುಜ್ಜೀವನದಿಂದಾಗಿ ರಿಲಯನ್ಸ್ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಆಗಸ್ಟ್ 1 ರಿಂದ ಷೇರು ಶೇ. 18 ರಷ್ಟು ಲಾಭ ಗಳಿಸಿದೆ. ಕಂಪನಿಯ ಷೇರು ಕೂಡ ಅಧಿಕವಾಗಿದ್ದು, ರಿಲಯನ್ಸ್ ಜಿಯೋ ತನ್ನ ಕೈಗೆಟುಕುವ ಫೋನ್ ಅನ್ನು ಸೆಪ್ಟೆಂಬರ್ 10 ರಂದು ಬಿಡುಗಡೆ ಮಾಡಬಹುದು. ಸೌದಿ ಅರಾಮ್ಕೋ ಜೊತೆಗಿನ ಒಪ್ಪಂದದಲ್ಲಿನ ಪ್ರಗತಿ ಮತ್ತು ಹಸಿರು ಶಕ್ತಿಯ ಮೇಲೆ ರಿಲಯನ್ಸ್ ಗಮನ ಕೇಂದ್ರೀಕರಿಸುವುದು ಸಹ ಅದರ ಷೇರುಗಳ ಜಿಗಿತದ ಹಿಂದಿನ ಎರಡು ಕಾರಣಗಳಾಗಿವೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ವಿವಿಧ ನಗರಗಳ ಸೆ. 07ರ ಬೆಲೆ ತಿಳಿದುಕೊಳ್ಳಿಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ವಿವಿಧ ನಗರಗಳ ಸೆ. 07ರ ಬೆಲೆ ತಿಳಿದುಕೊಳ್ಳಿ

ವಿಶ್ವದ ಶ್ರೀಮಂತರ ಪಟ್ಟಿ

ವಿಶ್ವದ ಶ್ರೀಮಂತರ ಪಟ್ಟಿ

1. ಜೆಫ್ ಬೆಜೋಸ್ ($ 201 ಬಿಲಿಯನ್)
2. ಎಲಾನ್ ಮಸ್ಕ್ ($ 199 ಬಿಲಿಯನ್)
3. ಬರ್ನಾರ್ಡ್ ಅರ್ನಾಲ್ಟ್ ($ 164 ಬಿಲಿಯನ್)
4. ಬಿಲ್ ಗೇಟ್ಸ್ ($ 154 ಬಿಲಿಯನ್)
5. ಮಾರ್ಕ್ ಜುಕರ್‌ಬರ್ಗ್ ($ 140 ಬಿಲಿಯನ್)
6. ಲ್ಯಾರಿ ಪೇಜ್ ($ 128 ಶತಕೋಟಿ)
7. ಸೆರ್ಗೆ ಬ್ರಿನ್ ($ 124 ಬಿಲಿಯನ್)
8. ಸ್ಟೀವ್ ಬಾಲ್ಮರ್ ($ 108 ಶತಕೋಟಿ)
9. ಲ್ಯಾರಿ ಎಲಿಸನ್ ($ 104 ಬಿಲಿಯನ್)
10. ವಾರೆನ್ ಬಫೆಟ್ ($ 103 ಬಿಲಿಯನ್)

52 ವಾರಗಳ ಗರಿಷ್ಠ ಮಟ್ಟ

52 ವಾರಗಳ ಗರಿಷ್ಠ ಮಟ್ಟ

ರಿಲಯನ್ಸ್‌ನ ಸ್ಟಾಕ್‌  ಕೊನೆಯ 52 ವಾರಗಳ ಗರಿಷ್ಠ ಮಟ್ಟ ರೂ 2,479.85 ಮತ್ತು ಕನಿಷ್ಠ ರೂ 1,830.00 ಕಂಡಿದೆ. ಒಂದು ಅಂದಾಜಿನ ಪ್ರಕಾರ, ವರ್ಷದ ಅಂತ್ಯದ ವೇಳೆಗೆ ಕಂಪನಿಯ ಷೇರು ರೂ 2,700 ತಲುಪಬಹುದು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರಿಲಯನ್ಸ್ ರಿಟೇಲ್ ಹಬ್ಬದ ಸೀಸನ್ ಗೆ ಮುಂಚಿತವಾಗಿ ಎಥ್ನಿಕ್ ಉಡುಗೆ ಮತ್ತು ಸೀರೆಗಳನ್ನು ಮಾರಾಟ ಮಾಡುವ ಅವಂತ್ರಾ ಬ್ರಾಂಡ್ ಹೆಸರಿನಲ್ಲಿ ಅಂಗಡಿಗಳ ಸರಪಳಿಯನ್ನು ಆರಂಭಿಸಲು ಸಜ್ಜಾಗಿದೆ. ಈ ಹೊಸ ವಿಭಾಗಗಳನ್ನು ಅದರ ಬಂಡವಾಳಕ್ಕೆ ಸೇರಿಸುವುದರಿಂದ ಅದರ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

English summary

Mukesh ambani Net Worth Nears 100 Billion Dollar As Reliance Share Rally

Reliance Industries Limited (RIL) chairman Mukesh Ambani may soon join the elite $100 billion club, following a sharp surge in his net worth over the past week.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X