ಮುತ್ತೂಟ್ ಫೈನಾನ್ಸ್‌ ಲಾಭ ಶೇ. 23ರಷ್ಟು ಏರಿಕೆ: 3,722 ಕೋಟಿ ರೂಪಾಯಿ

ಭಾರತದ ಅತಿದೊಡ್ಡ ಚಿನ್ನದ ಹಣಕಾಸು ಕಂಪನಿಯಾದ ಮುತ್ತೂಟ್ ಫೈನಾನ್ಸ್‌ ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ರ ಹಣಕಾಸು ವರ್ಷದಲ್ಲಿ ಲಾಭವು ಶೇಕಡಾ 23ರಷ್ಟು ಏರಿಕೆಯಾಗಿ 3,722 ಕೋಟಿ ರೂಪಾಯಿಗೆ ತಲುಪಿದೆ.

2019-20ರ ಹಣಕಾಸು ವರ್ಷದಲ್ಲಿ ಮುತ್ತೂಟ್ ಫೈನಾನ್ಸ್ ನಿವ್ವಳ ಲಾಭವು 3,018 ಕೋಟಿ ರೂಪಾಯಿಗಳಷ್ಟಿದ್ದು, 2020-21ರಲ್ಲಿ ಶೇಕಡಾ 23ರಷ್ಟು ವೃದ್ಧಿಯಾಗಿದೆ. ಇದರ ಜೊತೆಗೆ ಕಂಪನಿಯ ಸಾಲದ ಆಸ್ತಿಗಳು ಹಿಂದಿನ ವರ್ಷದ ಮಾರ್ಚ್ 31 ರ ವೇಳೆಗೆ 41,611 ಕೋಟಿ ರೂ.ಗಳಾಗಿದ್ದು, ಇದು ಮಾರ್ಚ್ 31, 2021 ರ ವೇಳೆಗೆ 52,622 ಕೋಟಿ ರೂ.ಗಳಾಗಿದ್ದು, ವರ್ಷದ ಆಧಾರದ ಮೇಲೆ ಶೇಕಡಾ 26 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಮುತ್ತೂಟ್ ಫೈನಾನ್ಸ್‌ ಲಾಭ ಶೇ. 23ರಷ್ಟು ಏರಿಕೆ: 3,722 ಕೋಟಿ ರೂಪಾಯಿ

ಇನ್ನು ಮುತ್ತೂಟ್ ಫೈನಾನ್ಸ್‌ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 995.6 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 815.1 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇಕಡಾ 22.1 ಬೆಳವಣಿಗೆ ಸಾಧಿಸಿದೆ.

2020-21 ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯವು 1,829.5 ಕೋಟಿ ರೂ.ಗಳಷ್ಟಿದ್ದು, ಇದು ವರ್ಷದಿಂದ ವರ್ಷದ ಆಧಾರದ ಮೇಲೆ ಶೇಕಡಾ 15.7 ರಷ್ಟು ಹೆಚ್ಚಾಗಿದೆ. ಕಂಪನಿಯ 2019-20ರ Q4 ನಿವ್ವಳ ಬಡ್ಡಿ ಆದಾಯ 1,580.6 ಕೋಟಿ ರೂ. ನಷ್ಟಿತ್ತು.

ಕಂಪನಿಯು 2020-21ರ ಆರ್ಥಿಕ ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಲಾಭಾಂಶವನ್ನು(ಡಿವೆಡೆಂಡ್) ಘೋಷಿಸಿದ್ದು, ಒಟ್ಟು 2021 ಏಪ್ರಿಲ್‌ನಲ್ಲಿ 802 ಕೋಟಿ ರೂ. ಷೇರುದಾರರಿಗೆ ನೀಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+