For Quick Alerts
ALLOW NOTIFICATIONS  
For Daily Alerts

ಅತಿ ದೊಡ್ಡ ಇ ಕಾಮರ್ಸ್ ಸಂಸ್ಥೆ ಮಿಂತ್ರಾ.ಕಾಂನ ಸಿಇಒ ಹುದ್ದೆ ತೊರೆದ ಅಮರ್ ನಗರಮ್

|

ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿ ಮಿಂತ್ರಾ.ಕಾಂನ ಸಿಇಒ ಸ್ಥಾನಕ್ಕೆ ಅನಂತ್ ನಾರಾಯಣ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

 

ಅನಂತ್ ನಾರಾಯಣ್ ಅವರು ತೊರೆದ ಸಿಇಒ ಸ್ಥಾನಕ್ಕೆ ಫ್ಲಿಪ್‌ಕಾರ್ಟ್‌ನಿಂದ ಬಂದ ಅಮರ್ ನಗರಮ್ ಅವರನ್ನು 2018ರಲ್ಲಿ ನೇಮಿಸಲಾಗಿತ್ತು. ಫ್ಲಿಪ್ ಕಾರ್ಟ್ ಒಡೆತನದ ಮಿಂತ್ರಾ ವಿಭಾಗದ ಉನ್ನತಾಧಿಕಾರಿಗಳ ಬದಲಾವಣೆಯಾಗುತ್ತಲೇ ಇದೆ.

ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸಂಸ್ಥೆಯ ಅಧಿಕಾರಿಯಾಗಿದ್ದ ಕಲ್ಯಾಣ್ 2016ರ ಜೂನ್ ತಿಂಗಳಿನಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆ ಸೇರಿ ಹೊಸ ಸಿಇಒ ಆಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅತಿ ದೊಡ್ಡ ಇ ಕಾಮರ್ಸ್ ಸಂಸ್ಥೆ ಮಿಂತ್ರಾ.ಕಾಂನ ಸಿಇಒ ರಾಜೀನಾಮೆ

ಮಿಂತ್ರಾದ ವ್ಯವಹಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿದ್ದ ಆರ್ ಅಯ್ಯಪ್ಪನ್ ಅವರಿಗೆ ಕ್ಲಿಯರ್ ಟ್ರಿಪ್ ನಿರ್ವಹಣೆ ನೀಡಲಾಗಿದೆ. ಆನ್ ಲೈನ್ ಟ್ರಾವೆಲ್ ಬುಕ್ಕಿಂಗ್ ಕಂಪನಿ ಕ್ಲಿಯರ್ ಟ್ರಿಪ್ ಸಂಸ್ಥೆಯನ್ನು ಫ್ಲಿಪ್ ಕಾರ್ಟ್ ಸಂಸ್ಥೆ ಕಳೆದ ಏಪ್ರಿಲ್ ತಿಂಗಳಲ್ಲಿ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಯ್ಯಪ್ಪನ್ ಅವರ ಸ್ಥಾನಕ್ಕೆ ಶರೋನ್ ಪಯಿಸ್ ಎಂಬುವರನ್ನು ತಂದು ಕೂರಿಸಲಾಗಿದೆ. ಈ ಹಿಂದೆ ಸಿಇಒ ಸ್ಥಾನದಲ್ಲಿದ್ದ ಆನಂತ್ ನಾರಾಯಣನ್ ಅವರು ಹುದ್ದೆ ತೊರೆಯುವ ವೇಳೆಗೆ ವಾಲ್ ಮಾರ್ಟ್ ತೆಕ್ಕೆಗೆ ಫ್ಲಿಪ್ ಕಾರ್ಟ್ ಪೂರ್ತಿಯಾಗಿ ಬಿದ್ದಿತ್ತು.

ಫ್ಲಿಪ್ ಕಾರ್ಟ್ ಮೊದಲು ಕಲ್ಯಾಣ್ ಕೃಷ್ಣಮೂರ್ತಿ ಜೊತೆಗೆ ನಗರಮ್ ಅವರು ಕಾರ್ಯ ನಿರ್ವಹಿಸಿದ್ದರು. ಫ್ಯಾಷನ್ ಇ ಕಾಮರ್ಸ್ ಕ್ಷೇತ್ರ ಹಾಗೂ ಆನ್ ಲೈನ್ ಶಾಪಿಂಗ್ ನಲ್ಲಿ ರಿಲಯನ್ಸ್ ಒಡೆತನದ ಆಜಿಯೋ.ಕಾಂ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಿಂತ್ರಾ ಸಿಇಒ ಬದಲಾವಣೆಯಾಗಿದೆ.

ಫ್ಲಿಪ್ ಕಾರ್ಟ್ ಖರೀದಿಗೂ ಮುನ್ನ ಮಿಂತ್ರಾ ಕೂಡಾ ಸಣ್ಣ ಪುಟ್ಟ ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಕ್ಲೌಡ್ ತಂತ್ರಜ್ಞಾನ ಬಳಸಿ ಕ್ರಾಸ್ ಪ್ಲಾಟ್ ಫಾರ್ಮ್ ಅಪ್ಲಿಕೇಷನ್ ಡೆವಲಪ್ಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದ ಬೆಂಗಳೂರಿನ ನೆಟಿವ್ 5 ಸಂಸ್ಥೆಯ ಪ್ರತಿಭೆಗಳನ್ನು ಮಿಂತ್ರಾ ಸೆಳೆದುಕೊಂಡಿತ್ತು. ಮನೀಷ್ ಅವರನ್ನು ಬಿಟ್ಟು ಉಳಿದ ಎಲ್ಲಾ ಸ್ಥಾಪಕರು ಮಿಂಟ್ರಾ.ಕಾಂ ಸೇರಿದ್ದರು.

ಅತಿ ದೊಡ್ಡ ಇ ಕಾಮರ್ಸ್ ಸಂಸ್ಥೆ ಮಿಂತ್ರಾ.ಕಾಂನ ಸಿಇಒ ರಾಜೀನಾಮೆ

ಮಿಂತ್ರಾ ಖರೀದಿ ಇತಿಹಾಸ: 2014ರಲ್ಲಿ ಮಾರುಕಟ್ಟೆ ಮೂಲಗಳ ಪ್ರಕಾರ ಸುಮಾರು 1,800 ದಿಂದ 2,000 ಕೋಟಿ ರು ಡೀಲ್ ಮೂಲಕ ಫ್ಲಿಪ್ ಕಾರ್ಟ್ ತೆಕ್ಕೆಗೆ ಮಿಂತ್ರಾ.ಕಾಂ ಬಿದ್ದಿತ್ತು. ಆದರೆ, ಮಿಂತ್ರಾ ತನ್ನ ಫ್ಯಾಷನ್ ವಿಭಾಗವನ್ನು ಅದೇ ಹೆಸರಿನಲ್ಲಿ ಉಳಿಸಿಕೊಂಡಿತ್ತು. ಆ ಸಮಯಕ್ಕೆ ಮಿಂತ್ರಾ ಕೊಳ್ಳಲು ಸಿಯಾಟಲ್ ಮೂಲದ ಅಮೆಜಾನ್.ಕಾಂ ಸಂಸ್ಥೆ ಕೂಡಾ ಯತ್ನಿಸಿ ವಿಫಲವಾಗಿತ್ತು.

 

ಮಿಂತ್ರಾ.ಕಾಂ ಖರೀದಿಗೂ ಮುನ್ನ ಫ್ಲೈಟ್, ಲೆಟ್ಸ್ ಬೈ.ಕಾಂ, ಚಂಪಕ್.ಕಾಂ ಮುಂತಾದ ಆನ್ ಲೈನ್ ಶಾಪಿಂಗ್ ತಾಣಗಳನ್ನು ತನ್ನ ಬುಟ್ಟಿಗೆ ಫ್ಲಿಪ್ ಕಾರ್ಟ್ ಹಾಕಿಕೊಂಡಿತ್ತು. 2021ರ ವೇಳೆಗೆ ಇ ಕಾಮರ್ಸ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿ ಫ್ಲಿಫ್ ಕಾರ್ಟ್ ಬೆಳೆದಿದೆ. ಫ್ಲಿಪ್ ಕಾರ್ಟ್ ಒಡೆತನದ ಫ್ಯಾಷನ್ ಇ ರಿಟೇಲರ್ ಮಿಂತ್ರಾ 2021ರಲ್ಲಿ ಭಾರಿ ವಿವಾದಕ್ಕೆ ತುತ್ತಾಗಿ, ತನ್ನ ಲೋಗೋ ಬದಲಾಯಿಸಿತ್ತು.

ಮಿಂತ್ರಾ ಲೋಗೋದಿಂದ ಮಹಿಳೆಯರಿಗೆ ಅಪಮಾನವಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮಹಿಳಾ ಸಂಘಟನೆಗಳ ಆಕ್ಷೇಪಕ್ಕೆ ಸಮ್ಮತ ವ್ಯಕ್ತಪಡಿಸಿದ ಮಿಂತ್ರಾ ಸಂಸ್ಥೆ ತನ್ನ ಲೋಗೋದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಈಗ ವೆಬ್ ಸೈಟ್, ಆಪ್, ಪ್ಯಾಕೇಜಿಂಗ್ ಪದಾರ್ಥ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಲೋಗೋ ಕಾಣಿಸಿಕೊಂಡಿದೆ.

ಹಳೆ ಲೋಗೋ ನೋಡಿದರೆ ಮಹಿಳೆಯೊಬ್ಬರು ನಗ್ನವಾಗಿ ಕಾಲು ಚಾಚಿ ಮಲಗಿಕೊಂಡಂತೆ ಭಾಸವಾಗುತ್ತಿದ್ದು, ಈ ಬಗ್ಗೆ ದೂರುಗಳು ಕೇಳಿ ಬಂದಿದ್ದರಿಂದ ಸರ್ಕಾರೇತರ ಸಂಸ್ಥೆ ಅವೆಸ್ತಾ ಫೌಂಡೇಷನ್ ಈ ವಿಷಯವನ್ನು ಪೊಲೀಸ್ ಠಾಣೆ ತನಕ ತೆಗೆದುಕೊಂಡು ಹೋಗಬೇಕಾಯಿತು.

ಅವೆಸ್ತಾ ಸಂಸ್ಥೆಯ ನಾಜ್ ಪಟೇಲ್ ಅವರು ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಸಿಇಒ ಅನಂತ್ ನಾರಾಯಣ್ ಸೂಕ್ಷ್ಮವಾಗಿ ಸಂಭಾಳಿಸಿದ್ದರು.

English summary

Myntra CEO Amar Nagaram resigns

Myntra CEO Amar Nagaram has put in his papers three years after he was elevated to the top post at the country’s largest online fashion retailer, according to two people with direct knowledge of the development.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X