For Quick Alerts
ALLOW NOTIFICATIONS  
For Daily Alerts

ನೆಸ್ಲೆ ಇಂಡಿಯಾ ತ್ರೈಮಾಸಿಕ ಲಾಭ ಶೇ. 14.6ರಷ್ಟು ಏರಿಕೆ: 602 ಕೋಟಿ ರೂಪಾಯಿ

|

ನೆಸ್ಲೆ ಇಂಡಿಯಾ ತ್ರೈಮಾಸಿಕ ಲಾಭವು ನಿರೀಕ್ಷೆಗಿಂತ ಹೆಚ್ಚಾಗಿ ಶೇಕಡಾ 14.6 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದು, 602.25 ಕೋಟಿ ರೂ. ದಾಖಲಾಗಿದೆ. ಈ ಮೂಲಕ ಎರಡಂಕಿಯ ಬೆಳವಣಿಗೆ ಸಾಧಿಸಿರುವ ನೆಸ್ಲೆ ಅಂದಾಜಿಗಿಂತ ಹೆಚ್ಚಿನ ಲಾಭಗಳಿಸಿದೆ.

 

ಮಾರ್ಚ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 8.6 ರಷ್ಟು ಏರಿಕೆಯಾಗಿ 3,610.82 ಕೋಟಿ ರೂ. ತಲುಪಿದೆ.

ನೆಸ್ಲೆ ಇಂಡಿಯಾ ತ್ರೈಮಾಸಿಕ ಲಾಭ 602 ಕೋಟಿ ರೂಪಾಯಿ ದಾಖಲು

ನೆಸ್ಲೆ ಕಂಪನಿಯ ಮನೆಬಳಕೆಯ ಉತ್ಪನ್ನಗಳಲ್ಲಿ ಬಳಕೆ ಹೆಚ್ಚಿರುವ ಪರಿಣಾಮ ಎರಡು-ಅಂಕಿಯ ಬೆಳವಣಿಗೆಯನ್ನು ದಾಖಲಿಸಿದೆ. ಇ-ಕಾಮರ್ಸ್ ವಿಭಾಗವು ಶೇಕಡಾ 66 ರಷ್ಟು ಏರಿಕೆಯಾಗಿದೆ ಮತ್ತು ದೇಶೀಯ ಮಾರಾಟದಲ್ಲಿ ಶೇಕಡಾ 3.8 ರಷ್ಟು ಕೊಡುಗೆ ನೀಡಿದೆ ಎಂದು ನೆಸ್ಲೆ ಹೇಳಿದೆ.

ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ ಪ್ರಕಾರ ತ್ರೈಮಾಸಿಕ ಲಾಭ 600 ಕೋಟಿ ರೂ. ವರ್ಷದಿಂದ ವರ್ಷದ ಆದಾಯವು 3,602 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಆದಾಯ ಹರಿದುಬಂದಿದೆ.

"ಮ್ಯಾಗಿ ನೂಡಲ್ಸ್, ಕಿಟ್ಕಾಟ್, ನೆಸ್ಕಾಫೆ ಕ್ಲಾಸಿಕ್, ಮ್ಯಾಗಿ ಸಾಸ್, ಮಿಲ್ಕ್‌ಮೇಡ್‌, ಮ್ಯಾಗಿ ಮಸಾಲಾ-ಎಇ-ಮ್ಯಾಜಿಕ್ ಮುಂತಾದ ಪ್ರಮುಖ ಬ್ರಾಂಡ್‌ಗಳ ಬಗ್ಗೆ ಗ್ರಾಹಕರ ನಂಬಿಕೆ ಮತ್ತು ಪ್ರೀತಿಯನ್ನು ನೋಡಲು ಇದು ಹೆಮ್ಮೆಯ ಕ್ಷಣವಾಗಿದೆ" ಎಂದು ಕಂಪನಿ ತಿಳಿಸಿದೆ.

ನೆಸ್ಲೆ ಇಂಡಿಯಾ ಪ್ರತಿ ಷೇರಿಗೆ 25 ರೂಪಾಯಿ ಮಧ್ಯಂತರ ಲಾಭಾಂಶ(interim dividend) ಘೋಷಿಸಿದೆ.

English summary

Nestle India Q1 Profit Up 14.6 Percent To Rs 602 Crore

Nestle India on April 20 reported a 14.6 percent year-on-year growth in the first-quarter profit at Rs 602.25 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X