For Quick Alerts
ALLOW NOTIFICATIONS  
For Daily Alerts

ಏಪ್ರಿಲ್- ಆಗಸ್ಟ್ ಮಧ್ಯೆ ನಿವ್ವಳ ನೇರ ತೆರಿಗೆ ಸಂಗ್ರಹ 31% ಇಳಿಕೆ

|

ನಿವ್ವಳ ನೇರ ತೆರಿಗೆ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಕಳೆದ ವರ್ಷಕ್ಕಿಂತ 31.1% ಕಡಿಮೆ ಆಗಿವೆ. ಇಲ್ಲಿಯ ತನಕ 1.92 ಲಕ್ಷ ಕೋಟಿ ರುಪಾಯಿಗಿಂತ ಸ್ವಲ್ಪ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ನೀಡಿದ ದತ್ತಾಂಶಗಳಿಂದ ತಿಳಿದುಬಂದಿದೆ.

ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಗೆ ನಿವ್ವಳ ನೇರ ತೆರಿಗೆ ಸಂಗ್ರಹವು 2.79 ಲಕ್ಷ ಕೋಟಿ ರುಪಾಯಿಗಿಂತ ಹೆಚ್ಚಿಗೆ ಆಗಿತ್ತು. ಇದೇ ಅವಧಿಯ ನಿವ್ವಳ ಪರೋಕ್ಷ ತೆರಿಗೆ ಸಂಗ್ರಹವು 11.23% ಇಳಿಕೆ ಆಗಿ, 3.42 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 3.86 ಲಕ್ಷ ಕೋಟಿ ರುಪಾಯಿ ಸಂಗ್ರಹ ಆಗಿತ್ತು.

 

ಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವ ಪ್ರಯತ್ನಕ್ಕೆ 7 ವರ್ಷ ತನಕ ಜೈಲು

"ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದಲ್ಲಿ 2020- 21ರ ಆರ್ಥಿಕ ವರ್ಷದಲ್ಲಿ ಇಳಿಕೆ ಹಾದಿಯಲ್ಲಿ ಸಗಟು ಜಿಎಸ್ ಟಿ ಸಂಗ್ರಹ ಸಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಹೇರಿದ ಲಾಕ್ ಡೌನ್ ಮತ್ತು ಸರ್ಕಾರವು ತೆರಿಗೆ ಪಾವತಿದಾರರಿಗೆ ನೀಡಿದ ವಿನಾಯಿತಿಗಳಿಂದ ಹೀಗಾಗಿದೆ" ಎಂದು ಅನುರಾಗ್ ಠಾಕೂರ್ ಲಿಖಿತ ಉತ್ತರದಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಏಪ್ರಿಲ್- ಆಗಸ್ಟ್ ಮಧ್ಯೆ ನಿವ್ವಳ ನೇರ ತೆರಿಗೆ ಸಂಗ್ರಹ 31% ಇಳಿಕೆ

ತೆರಿಗೆ ನಿಯಮಗಳನ್ನು ಉತ್ತಮಗೊಳಿಸುವುದಕ್ಕೆ ಸರ್ಕಾರ ಹಲವು ಬಗೆಯಲ್ಲಿ ಪ್ರಯತ್ನಿಸಿದೆ. ಕಂಪ್ಯೂಟರ್ ಮೂಲಕವೇ ಸಿದ್ಧವಾಗುವ ಹಾಗೂ ವಿಶ್ಲೇಷಿಸುವ ವರದಿಗಳನ್ನು ರಾಜ್ಯ ಹಾಗೂ ಕೇಂದ್ರ ತೆರಿಗೆ ಅಧಿಕಾರಿಗಳ ಜತೆಗೆ ಹಂಚಿಕೊಳ್ಳಲಾಗಿದೆ. ತೆರಿಗೆ ಕದಿಯುತ್ತಿರುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

English summary

Net Direct Tax Collection Declined By 31 Percent For FY21 April- August Period

FY21 April to August net direct tax collection declined by 31.1% compared to last financial year of same period.
Company Search
COVID-19