For Quick Alerts
ALLOW NOTIFICATIONS  
For Daily Alerts

ಕೋವಿಡ್‌ ಹೊಸ ರೂಪಾಂತರ ಭೀತಿ: ಸೆನ್ಸೆಕ್ಸ್ ಪಾತಾಳಕ್ಕೆ ಕುಸಿತ

|

ಜಾಗತಿಕವಾಗಿ ಕೊರೊನಾ ವೈರಸ್‌ನ ಹೊಸ ರೂಪಾಂತರವು ಬಹಳ ಸದ್ದು ಮಾಡುತ್ತಿದೆ. ಕೋವಿಡ್‌ ಹೊಸ ರೂಪಾಂತರದ ಹಿನ್ನೆಲೆಯಿಂದಾಗಿ ಮತ್ತೆ ಹೊಸ ಕೋವಿಡ್‌ ಅಲೆಯ ಭೀತಿ ಉಂಟಾಗಿದೆ. ಈ ನಡುವೆ ಈ ಹೊಸ ರೂಪಾಂತರವು ಜಾಗತಿಕವಾಗಿ ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮವನ್ನು ಬೀರಿದೆ.

ಹೌದು ಶುಕ್ರವಾರ ಮುಂಜಾನೆಯೇ ಎಸ್‌ಪಿ ಹಾಗೂ ಬಿಎಸ್ಇ ಸೆನ್ಸೆಕ್ಸ್‌ 1400 ಅಂಕಕ್ಕಿಂತಲೂ ಅಧಿಕ ಪಾತಾಳಕ್ಕೆ ಕುಸಿದಿದೆ. ಈ ನಡುವೆ ನಿಫ್ಟಿ 50 ಸೂಚ್ಯಂಕ 419 ಪಾಯಿಂಟ್ ನಷ್ಟದೊಂದಿಗೆ 17,100ರ ಮಟ್ಟಕ್ಕೆ ಕುಸಿದು ವಹಿವಾಟು ಕೊನೆಯಾಗಿದೆ. ಪ್ರಮುಖವಾಗಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‌ನ ಸೆನ್ಸೆಕ್ಸ್‌ ಕುಸಿತ ಹೊಂದಿದೆ.

ಡೆಲ್ಟಾಗಿಂತ ಅತೀ ಪರಿಣಾಮಕಾರಿಯಾದ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ದಕ್ಷಿಣ ಆಫ್ರಿಕಾ, ಹಾಂಗ್‌ಕಾಂಗ್‌, ಬೋಟ್ಸ್ವಾನದಲ್ಲಿ ಕಾಣಿಸಿಕೊಂಡಿದೆ. ಈ ಹೊಸ ರೂಪಾಂತರವು ಕೋವಿಡ್‌ ಲಸಿಕೆಗಳಿಗೂ ಪ್ರತಿರೋಧ ಒಡ್ಡುವ ಸಾಧ್ಯತೆಗಳು ಇದೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಈ ನಡುವೆ ಹೂಡಿಕೆದಾರರು ಯೆನ್‌ ಮತ್ತು ಡಾಲರ್‌ ಬಾಂಡ್‌ಗಳ ಸುರಕ್ಷತೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಈ ಹಿನ್ನೆಲೆಯಿಂದಾಗಿ ಕಳೆದ ಎರಡು ತಿಂಗಳಿನಲ್ಲಿಯೇ ಏಷ್ಯಾದ ಷೇರುಗಳು ಶುಕ್ರವಾರ ಭಾರೀ ಕುಸಿತ ಕಂಡಿದೆ.

ಕೋವಿಡ್‌ ಹೊಸ ರೂಪಾಂತರ ಭೀತಿ: ಸೆನ್ಸೆಕ್ಸ್ ಪಾತಾಳಕ್ಕೆ ಕುಸಿತ

ಸುಮಾರು 6.5 ಲಕ್ಷ ಕೋಟಿ ರೂ ಹೂಡಿಕೆದಾರರ ಸಂಪತ್ತನ್ನು ಷೇರುಪೇಟೆ ಕಳೆದುಕೊಂಡಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಬಿಎಸ್‌ಇ ಮಾರುಕಟ್ಟೆ ಬಂಡವಾಳ ಮಾಪನದ ಪ್ರಕಾರ, ಹೂಡಿಕೆದಾರರ ಸಂಪತ್ತು ಒಂದು ದಿನದ ಹಿಮದೆ 265.66 ಲಕ್ಷ ಕೋಟಿ ರೂ ಇತ್ತು. ಇದು ಶುಕ್ರವಾರ 259.11 ಲಕ್ಷ ಕೋಟಿ ರೂಗೆ ಇಳಿದಿದೆ. ಅಂದರೆ 6.55 ಲಕ್ಷ ಕೋಟಿ ರೂ ನಷ್ಟವಾಗಿದೆ.

ಫಾರ್ಮಾ ಷೇರುಗಳು ಏರಿಕೆ

ರಿಯಲ್‌ ಎಸ್ಟೇಟ್‌ ವಲಯ ಹಾಗೂ ಲೋಹಕ್ಕೆ ಸಂಬಂಧಿಸಿದ ಷೇರುಗಳು ಶೇಕಡ 5 ರಿಂದ ಶೇಕಡ 6 ರಷ್ಟು ಕುಸಿತ ಹೊಂದಿದೆ. ಅನಿಲ, ತೈಲ, ಇಂಧನ, ಆಟೊ ಮೊಬೈಲ್‌ ಹಾಗೂ ಬ್ಯಾಂಕಿಂಗ್‌ ಷೇರುಗಳು ಶೇಕಡ 3 ರಿಂದ 4 ರಷ್ಟು ಕುಸಿತ ಹೊಂದಿದೆ. ಆದರೆ ಈ ನಡುವೆ ಫಾರ್ಮಾ ಷೇರುಗಳು ಶೇಕಡ ಎರಡರಷ್ಟು ಏರಿಕೆ ಹೊಂದಿದೆ. ಅರಬಿಂದೋ ಫಾರ್ಮಾ ಎನ್‌ಎಸ್‌ಬಿ ಶೇಕಡ ಲಿಮಿಟೆಡ್ ಷೇರುಗಳು ಶೇಕಡ 2.84ರಷ್ಟು ಏರಿಕೆ ಕಂಡು 688.25 ರೂ.ಗಳಿಗೆ ತಲುಪಿದೆ. ಡಾ ರೆಡ್ಡೀಸ್ ಲ್ಯಾಬ್, ದಿವಿಸ್ ಲ್ಯಾಬ್ಸ್, ಸಿಪ್ಲಾ, ಸನ್ ಫಾರ್ಮಾ, ಕೋಲ್ ಇಂಡಿಯಾ ಹಾಗೂ ಪವರ್ ಗ್ರಿಡ್ ಷೇರುಗಳು ಏರಿಕೆ ಹೊಂದಿದೆ.

ಇನ್ನು ಈ ನಡುವೆ ರಿಲಯನ್ಸ್‌, ಟಾಟಾ ಮೋಟಾರ್ಸ್, ಮಾರುತಿ ಸುಜುಲಿ ಇಂಡಿಯಾ, ಎಸ್‌ಬಿಐ, ಟೈಟಾನ್‌, ಟಾಟಾ ಸ್ಟೀಲ್‌ ಸೇರಿದಂತೆ ಬಹುತೇಕ ಷೇರುಗಳು ಕುಸಿತ ಕಂಡಿದೆ. ಜಪಾನ್‌ನ ಹೊರಭಾಗದಲ್ಲಿನ ಎಂಎಸ್‌ಸಿಐನ ಅತಿ ದೊಡ್ಡ ಸೂಚ್ಯಂಕ ಏಷ್ಯಾ-ಪೆಸಿಫಿಕ್ ಶೇ 1.3ರಷ್ಟು ಕುಸಿತವಾಗಿದೆ. ಹಾಂಕಾಂಗ್‌ನಲ್ಲಿ ಕ್ಯಾಸಿನೋ ಮತ್ತು ಪಾನೀಯಗಳ ಷೇರುಗಳ ಮಾರಾಟವಾಗಿವೆ. ಸಿಡ್ನಿಯಲ್ಲಿ ಟ್ರಾವೆಲ್ ಷೇರುಗಳು ಕುಸಿತ ಕಂಡಿವೆ.

ಗುರುವಾರ ಸೆನ್ಸೆಕ್ಸ್‌ 454 ಅಂಕ ಏರಿಕೆ ಕಂಡಿತ್ತು. ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಕಂಡಿತ್ತು, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಷೇರುಗಳು ದೊಡ್ಡ ಪ್ರಮಾಣದಲ್ಲಿ ಗಳಿಕೆ ದಾಖಲಿಸಿದ್ದೇ ಈ ಏರಿಕೆಗೆ ಪ್ರಮುಖ ಕಾರಣವಾಗಿತ್ತು. ಸೆನ್ಸೆಕ್ಸ್‌ ಪ್ಯಾಕ್‌ನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಗರಿಷ್ಠ ಗಳಿಕೆ ದಾಖಲಿಸಿದ್ದು, ಷೇರು ಮೌಲ್ಯ ಶೇ. 6ರಷ್ಟು ಏರಿಕೆ ಕಂಡಿತು. ಐಟಿಸಿ, ಇನ್ಫೋಸಿಸ್‌, ಟೆಕ್‌ ಮಹೀಂದ್ರಾ, ಟೈಟಾನ್‌, ಭಾರ್ತಿ ಏರ್‌ಟೆಲ್‌ ಮತ್ತು ಪವರ್‌ಗ್ರಿಡ್‌ ಷೇರುಗಳೂ ಗಳಿಕೆ ದಾಖಲಿಸಿದವು.

English summary

New Covid Strain Fear: Sensex sheds 1400 points

Sensex sheds 1400 points over new Covid-19 Strain Fear.
Story first published: Friday, November 26, 2021, 17:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X