For Quick Alerts
ALLOW NOTIFICATIONS  
For Daily Alerts

ಬದಲಾಗಲಿದೆ EPF ನಿಯಮ : 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅನುಕೂಲ

|

ಉದ್ಯೋಗಿಗಳಿಗೆ ಸಹಾಯ ಆಗಲೆಂದೇ ಹೊಸ ಇಪಿಎಫ್(ನೌಕರರ ಭವಿಷ್ಯ ನಿಧಿ) ನಿಯಮ ಜಾರಿಗೆ ಬರಲಿದ್ದು, ಹೆಚ್ಚುವರಿ 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೆರವಾಗಲಿದೆ. ಯಾರಿಗೆ ಪಿಎಫ್(ಭವಿಷ್ಯ ನಿಧಿ) ಹಣ ಕಡಿತಗೊಳಿಸಲಾಗುತ್ತಿಲ್ಲ ಅಂತವರಿಗೆ ಈ ಹೊಸ ನಿಯಮದಿಂದ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಮಿಕ ಸಚಿವಾಲಯವು ಹೊಸ ನಿಯಮವನ್ನು ಜಾರಿಗೆ ತರಲು ಅಧಿಸೂಚನೆ ಹೊರಡಿಸಿದೆ. ಇದು 2020 ಜನವರಿ 1 ರಿಂದ ಜಾರಿಯಾಗಲಿದ್ದು, ಪ್ರಸ್ತುತ ಉದ್ಯೋಗಿಗಳ ಜೊತೆಗೆ ಹೆಚ್ಚುವರಿಯಾಗಿ 50 ಲಕ್ಷ ಉದ್ಯೋಗಿಗಳಿಗೆ ವರದಾನವಾಗಲಿದೆ.

ಬದಲಾಗಲಿದೆ EPF ನಿಯಮ : 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅನುಕೂಲ

ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಯಾರಿಗೆ ಇನ್ನೂ ಪಿಎಫ್ ಕಡಿತಗೊಳಿಸಲಾಗುತ್ತಿಲ್ಲ, ಅಂತವರಿಗೆ ಭವಿಷ್ಯ ನಿಧಿ ಯೋಜನೆಯನ್ನು ವಿಸ್ತರಿಸಲು ಕಾರ್ಮಿಕ ಸಚಿವಾಲಯವು ಮುಂದಾಗಿದೆ.

ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಇಪಿಎಫ್ ನಿಯಮಗಳ ಪ್ರಕಾರ ಯಾವುದೇ ಸಂಸ್ಥೆ, ಕಚೇರಿ 20ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ್ದಲ್ಲಿ ಪಿಎಫ್ ಅನ್ವಯವಾಗುತ್ತದೆ. ಆದರೆ ಈಗ ನಿಯಮ ಬದಲಾವಣೆಯಿಂದ 10 ಜನರು ಕೆಲಸ ಮಾಡುವ ಕಚೇರಿಗಳಲ್ಲಿಯೂ ಪಿಎಫ್ ಕಡಿತಗೊಳಿಸಬೇಕು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಾರ್ಮಿಕ ಇಲಾಖೆಗಳಲ್ಲಿನ ಬದಲಾವಣೆಗೆ ಸಂಸತ್ತಿನಿಂದ ಯಾವುದೇ ಅನುಮೋದನೆ ಅಗತ್ಯವಿಲ್ಲ. ಇದೇ ರೀತಿಯಲ್ಲಿ 2008ರಲ್ಲಿ ಇಪಿಎಫ್ಒ ಅನುಮೋದಿಸಿತು. ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿಯೂ ಹೊಸ ನಿಯಮ ಅನ್ವಯವಾಗಲಿದೆ.

English summary

New EPFO Rule To Be Changed, 50 Lakh More Employees To Benefit

To bring added benefits to employees EPFO are going to change soon. New EPFO rule will benefit 50 lakh more employees.
Story first published: Monday, November 18, 2019, 12:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X