For Quick Alerts
ALLOW NOTIFICATIONS  
For Daily Alerts

ನ್ಯೂಜಿಲ್ಯಾಂಡ್ ನ ಅತಿ ದೊಡ್ಡ ಮಾಧ್ಯಮ ಸಂಸ್ಥೆ 1 ಡಾಲರ್ ಗೆ ಮಾರಾಟ

|

ನ್ಯೂಜಿಲ್ಯಾಂಡ್ ನ ಅತಿ ದೊಡ್ಡ ಮಾಧ್ಯಮ ಸಂಸ್ಥೆಯನ್ನು ಅದರ ಚೀಫ್ ಎಕ್ಸ್ ಕ್ಯೂಟಿವ್ ಗೆ 1 ಡಾಲರ್ ಗೆ ಮಾರಾಟ ಮಾಡಲಾಗಿದೆ ಎಂದು ಮಾಲೀಕರು ಸೋಮವಾರ ಘೋಷಣೆ ಮಾಡಿದ್ದಾರೆ. ಈ ಸಂಸ್ಥೆಯು ದೇಶದ ಹಲವು ವೃತ್ತಪತ್ರಿಕೆ ಮತ್ತು ಹೆಸರಾಂತ ವೆಬ್ ಸೈಟ್ ಅನ್ನು ಅದೇ ಹೆಸರಿನಲ್ಲಿ ನಡೆಸುತ್ತಿದೆ. ಸಂಸ್ಥೆಯಲ್ಲಿ 400 ಪತ್ರಕರ್ತರೂ ಸೇರಿ 900 ಸಿಬ್ಬಂದಿಯಷ್ಟು ಕಾರ್ಯ ನಿರ್ವಹಿಸುತ್ತಾರೆ.

ಆಸ್ಟ್ರೇಲಿಯಾದ ನೈನ್ ಎಂಟರ್ ಟೇನ್ ಮೆಂಟ್ ಮಾಲೀಕತ್ವದಲ್ಲಿ ಈ ಸಂಸ್ಥೆ ಇದೆ. ಕೊರೊನಾ ವೈರಾಣು ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಜಾಹೀರಾತು ಆದಾಯದಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಆಗಿದೆ. ಆಸ್ಟ್ರೇಲಿಯಾ ಷೇರು ಮಾರ್ಕೆಟ್ ಗೆ ಹೇಳಿಕೆ ನೀಡಲಾಗಿದೆ. ಸಿಇಒ ಸೈನೀಡ್ ಬೌಷರ್ ಗೆ ಮಾರಾಟ ಮಾಡುವ ವ್ಯವಹಾರವು ಈ ತಿಂಗಳ ಕೊನೆಯೊಳಗೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಅಮೆರಿಕದ ಶತಕೋಟ್ಯಧಿಪತಿಗಳ ಆಸ್ತಿ ಮೌಲ್ಯ 32,55,000 ಕೋಟಿ ಏರಿಕೆಅಮೆರಿಕದ ಶತಕೋಟ್ಯಧಿಪತಿಗಳ ಆಸ್ತಿ ಮೌಲ್ಯ 32,55,000 ಕೋಟಿ ಏರಿಕೆ

ಸ್ಥಳೀಯ ಮಾಲೀಕತ್ವ ಇರುವುದು ಬಹಳ ಅಗತ್ಯ. ಇದು ನಮ್ಮ ಸಂಸ್ಥೆಯ ದೃಷ್ಟಿಕೋನ. ನ್ಯೂಜಿಲ್ಯಾಂಡ್ ನ ಸ್ಪರ್ಧಾತ್ಮಕತೆ ಮತ್ತು ಗ್ರಾಹಕರಿಗೆ ಇದರಿಂದ ಒಳ್ಳೆಯದಾಗಲಿದೆ ಎಂದು ನೈನ್ ಸಿಇಒ ಹ್ಯೂ ಮಾರ್ಕ್ಸ್ ಹೇಳಿದ್ದಾರೆ. ಈ ಖರೀದಿ ಬಗ್ಗೆ ದೊರೆಯುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಅತ್ಯಂತ ಸಂತೋಷವಾಗಿದೆ ಎಂದು ಬೌಷರ್ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ನ ಅತಿ ದೊಡ್ಡ ಮಾಧ್ಯಮ ಸಂಸ್ಥೆ 1 ಡಾಲರ್ ಗೆ ಮಾರಾಟ

49 ವರ್ಷದ ಬೌಷರ್ ಕ್ರೈಸ್ಟ್ ಚರ್ಚ್ ನ ದ ಪ್ರೆಸ್ ವೃತ್ತಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ವೃತ್ತಿ ಆರಂಭಿಸಿದವರು. ಆ ನಂತರ ಕಂಪೆನಿಯ ಕೆಲವು ಡಿಜಿಟಲ್ ಆವಿಷ್ಕಾರಗಳನ್ನು ಮುನ್ನಡೆಸುವಲ್ಲಿ ಸಹಾರ ಮಾಡಿದವರು. ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಅಥವಾ ಪತ್ರಿಕೆಗಳನ್ನು ಮುಚ್ಚುವ ಯೋಜನೆ ತಕ್ಷಣಕ್ಕೆ ಇಲ್ಲ ಎಂದು ಆಕೆ ಹೇಳಿದ್ದಾರೆ. "ಸ್ಟಫ್" ಇತರ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳು ಸುಲಭವಾಗಿ ಬಗೆಹರಿಸಬಹುದಾದಂಥದ್ದು ಅಲ್ಲ ಎಂದಿದ್ದಾರೆ.

ಲಿಮಿಟೆಡ್ ಲಯಬಿಲಿಟಿ ಕಂಪೆನಿ ಎಂಬಂತೆ "ಸ್ಟಫ್" ಖರೀದಿ ಮಾಡುತ್ತಿದ್ದಾರೆ ಬೌಷರ್. ಸಿಬ್ಬಂದಿಗೆ ಕಂಪೆನಿಯ ಪಾಲುದಾರರಾಗಿ ಷೇರು ವಿತರಣೆ ಮಾಡುವ ಆಲೋಚನೆ ಅವರಿಗಿದೆ. ಕೊರೊನಾ ನಂತರ ನ್ಯೂಜಿಲ್ಯಾಂಡ್ ನಲ್ಲಿ ಹಲವು ಮಾಧ್ಯಮಗಳು ಸಂಕಷ್ಟದಲ್ಲಿ ಇವೆ. "ಸ್ಟಫ್" ನಿಂದ ವೇತನ ಕಡಿತಕ್ಕೆ ಘೋಷಣೆ ಮಾಡಿದ್ದರೆ, ಅದರ ಪ್ರತಿಸ್ಪರ್ಧಿ NZME ಇನ್ನೂರು ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಕಳೆದ ತಿಂಗಳು ಜರ್ಮನ್ ಕಂಪೆನಿ ಬೌರ್ ಮೀಡಿಯಾವು ನ್ಯೂಜಿಲ್ಯಾಂಡ್ ನಲ್ಲಿ ಕಾರ್ಯ ಚಟುವಟಿಕೆ ನಿಲ್ಲಿಸಿದೆ. ದೇಶದ ಹಲವು ನಿಯತಕಾಲಿಕೆ ನಿಲ್ಲಿಸಿದೆ. ಇನ್ನು ಮೀಡಿಯಾವರ್ಕ್ಸ್ ನಿಂದ 130 ಹುದ್ದೆ ಕಡಿತದ ಬಗ್ಗೆ ತಿಳಿಸಲಾಗಿದೆ.

English summary

New Zealand's Biggest Media Firm Being Sold For 1 Dollar

Coronavirus effect: New Zealand's media firm 'stuff' being sold for $ 1 to CEO.
Story first published: Monday, May 25, 2020, 11:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X