For Quick Alerts
ALLOW NOTIFICATIONS  
For Daily Alerts

2 ವರ್ಷದಲ್ಲಿ ಮೊದಲ ಬಾರಿ 20 ಸಾವಿರ ಗಡಿ ದಾಟಿದ ನಿಫ್ಟಿ ಮಿಡ್ ಕ್ಯಾಪ್ 100

By ಅನಿಲ್ ಆಚಾರ್
|

ಕಳೆದ ಎರಡು ವರ್ಷದಲ್ಲಿ ಇದೇ ಮೊದಲ ಬಾರಿಗೆ ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು 20,000 ಗಡಿಯನ್ನು ದಾಟಿದೆ. ಬುಧವಾರದಂದು 0.5% ಏರಿಕೆ ಕಂಡಿದೆ. ಮಾರ್ಚ್ ತಿಂಗಳ ಕನಿಷ್ಠ ಮಟ್ಟದಲ್ಲಿ ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ಪ್ರಬಲವಾಗಿ ಪುಟಿದೆದ್ದಿದೆ. ಈ ವರ್ಷದ ಏಪ್ರಿಲ್ 1ರಿಂದ ಈಚೆಗೆ 70% ಏರಿಕೆ ಆಗಿದೆ.

ಮಾರ್ಕೆಟ್ ನಲ್ಲಿ ಮೂಲಭೂತವಾಗಿ ಗಟ್ಟಿಯಾಗಿರುವ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಟ್ರೇಡಿಂಗ್ ಅಥವಾ ಹೂಡಿಕೆಯಲ್ಲಿ ಏರಿಕೆ- ಚಲನೆ ಮುಂದುವರಿಯಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ಮಾರುಕಟ್ಟೆಯಲ್ಲಿನ ಮಿಡ್ ಕ್ಯಾಪ್ ಸೆಗ್ಮೆಂಟ್ ನಲ್ಲಿನ ಷೇರುಗಳ ಚಲನೆಯನ್ನು ಹಿಡಿದಿಡುತ್ತದೆ.

Gold And Silver Rate: MCXನಲ್ಲಿ ಇಳಿಕೆ ಕಂಡ ಚಿನ್ನ, ಬೆಳ್ಳಿGold And Silver Rate: MCXನಲ್ಲಿ ಇಳಿಕೆ ಕಂಡ ಚಿನ್ನ, ಬೆಳ್ಳಿ

ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (ಎನ್ ಎಸ್ ಇ) ಲಿಸ್ಟೆಡ್ ಆಗಿರುವ 100 ಷೇರುಗಳು ಒಳಗೊಂಡಿವೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಬೆಂಚ್ ಮಾರ್ಕಿಂಗ್ ಫಂಡ್ ಪೋರ್ಟ್ ಫೋಲಿಯೋಗಳು, ಸೂಚ್ಯಂಕದ ಫಂಡ್ ಆರಂಭಕ್ಕೆ, ಇಟಿಎಫ್ ಮತ್ತು ರಚನಾತ್ಮಕ ಉತ್ಪನ್ನಗಳಿಗಾಗಿ ಬಳಸಲಾಗುತ್ತದೆ.

2 ವರ್ಷದಲ್ಲಿ ಮೊದಲ ಬಾರಿ 20000 ಗಡಿ ದಾಟಿದ ನಿಫ್ಟಿ ಮಿಡ್ ಕ್ಯಾಪ್ 100

"ಸದ್ಯಕ್ಕೆ ನಿಫ್ಟಿ 13000 ಪಾಯಿಂಟ್ ಮೇಲಿದೆ. ಇದೀಗ ಹೆಚ್ಚು ಅಥವಾ ಕಡಿಮೆ ಕಂಫರ್ಟ್ ಜೋನ್ ನ ಮೇಲ್ತುದಿಯಲ್ಲಿದೆ. ಮೌಲ್ಯಮಾಪನ 20XFY22Eಯಲ್ಲಿದೆ. ಆದ್ದರಿಂದ ನಗದು ಮತ್ತು ಚಲನೆ ಬೆಂಬಲ ಇದ್ದರೂ ಸೂಚ್ಯಂಕದ ಬಗ್ಗೆ ಎಚ್ಚರಿಕೆಯಿಂದ ಇದ್ದೇವೆ. ಆದರೆ ಎಂಎಸ್ ಸಿಐ ಪುನರ್ ಸಮತೋಲನ ಹಾಗೂ ವರ್ಷದ ಕೊನೆಗೆ ಎಫ್ ಪಿಐ ಹರಿವು ಸಹಜವಾದ ಮೇಲೆ ಇದು ಸಹಜ ಸ್ಥಿತಿಗೆ ಮರಳುತ್ತದೆ," ಎಂದು ವಿಶ್ಲೇಷಕರು ಹೇಳುತ್ತಾರೆ.

English summary

Nifty Mid Cap 100 Index Crossed 20 Thousand Mark First Time In Two Years

Indian stock market Nifty mid cap 100 index crossed 20,000 points on Wednesday, first time in 2 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X