For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಗ್ರಾಹಕರು ಭಯ ಪಡಬೇಕಿಲ್ಲ: ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿ

|

ಯೆಸ್ ಬ್ಯಾಂಕ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ(ಮಾರ್ಚ್‌ 06)ದಂದು ಸುದ್ದಿಗೋಷ್ಟಿ ನಡೆಸಿದ್ದಾರೆ. ಯೆಸ್‌ ಬ್ಯಾಂಕ್‌ನಲ್ಲಿ ಹಣ ಇಟ್ಟ ಯಾವುದೇ ಗ್ರಾಹಕರು ಭಯ ಪಡಬೇಕಿಲ್ಲ. ನಿಮ್ಮ ಹಣ ಸೇಫ್ ಆಗಿದೆ ಎಂದಿದ್ದಾರೆ.

2017ರಿಂದಲೂ ಯೆಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿಗಾ ಇಟ್ಟಿದೆ. ಯೆಸ್‌ ಬ್ಯಾಂಕ್‌ನ ಅಧ್ಯಕ್ಷರು ಅಕ್ರಮ ಎಸಗಿದ್ದಾರೆ. ಹೀಗಾಗಿ 2018ರಲ್ಲಿ ಹೊಸ ಸಿಇಒ ನೇಮಕ ಮಾಡಲಾಗಿತ್ತು. 2019ರಿಂದಲೇ ಅವರು ಆರ್‌ಬಿಐ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.

ಯೆಸ್ ಬ್ಯಾಂಕ್ ಗ್ರಾಹಕರು ಭಯ ಪಡಬೇಕಿಲ್ಲ: ನಿರ್ಮಲಾ ಸೀತಾರಾಮನ್

ಯೆಸ್‌ ಬ್ಯಾಂಕ್‌ನಲ್ಲಿ ಈ ಸಮಸ್ಯೆಯನ್ನು ಹಿಂದಿನಿಂದಲೇ ಗುರುತಿಸಿ ಸಿಇಓ ನೇಮಕ ಮಾಡಲಾಗಿತ್ತು. ಮಾರ್ಚ್‌ನಲ್ಲಿ 1 ಕೋಟಿ ರುಪಾಯಿ ದಂಡ ಕೂಡ ವಿಧಿಸಲಾಗಿತ್ತು. ಆದರೆ ಸಮಸ್ಯೆ ಯಾವಾಗ ಮಿತಿ ಮೀರುತ್ತಿದೆ ಎಂದು ತಿಳಿಯುತೋ ಆಗ ಬ್ಯಾಂಕ್ ಮೇಲೆ ನಿರ್ಬಂಧ ಹೇರಲಾಯಿತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಯೆಸ್‌ ಬ್ಯಾಂಕ್ ಮತ್ತೆ ಪುನರುಜ್ಜೀವನಗೊಳಿಸಲು ಆರ್‌ಬಿಐ ಪ್ರಯತ್ನಿಸುತ್ತಿದ್ದು, ಗ್ರಾಹಕರ ಹಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಗುರುವಾರ ಆರ್‌ಬಿಐ ಯೆಸ್‌ ಬ್ಯಾಂಕ್‌ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ವಿತ್‌ಡ್ರಾ ಮಿತಿ ಮೇಲೆ ನಿರ್ಬಂಧ ಹೇರಿತ್ತು. ಒಂದು ತಿಂಗಳವರೆಗೆ ಕ್ಯಾಶ್ ವಿತ್‌ಡ್ರಾ ಮಿತಿ 50,000 ರುಪಾಯಿಗೆ ಸೀಮಿತಗೊಳಿಸಿದೆ.

English summary

Nirmala Sitharaman press meet About Yes Bank Financial Crisis

Financial minister Nirmala Sitharaman pressmeet about yes bank financial crisis
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X