For Quick Alerts
ALLOW NOTIFICATIONS  
For Daily Alerts

ಪರಾರಿಯಾಗಿದ್ದ ಘೋಸ್ನ್ ಜಪಾನ್ ಕಾನೂನು ವ್ಯವಸ್ಥೆ ಬಗ್ಗೆ ಹೇಳಿದ್ದೇನು?

|

ಜಪಾನ್ ನಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಬೇಕಿದ್ದಾಗಲೇ ಅಚ್ಚರಿಯ ರೀತಿಯಲ್ಲಿ ಪರಾರಿಯಾಗಿದ್ದ್ ನಿಸಾನ್ ಕಂಪೆನಿಯ ಮಾಜಿ ಮುಖ್ಯಸ್ಥ ಕಾರ್ಲೋಸ್ ಘೋಸ್ನ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಬೈರೂತ್ ನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಘೋಸ್ನ್, ಜಪಾನ್ ನಲ್ಲಿ ನಡೆದಿದ್ದು ನನ್ನ ವಿರುದ್ಧದ ಪಿತೂರಿ ಮತ್ತು ನನ್ನನ್ನು ವಶಕ್ಕೆ ಪಡೆದಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.

ಕಳೆದ ತಿಂಗಳು ಜಪಾನ್ ನಿಂದ ಪರಾರಿಯಾಗಿದ್ದ ಘೋಸ್ನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಜಪಾನ್ ನಲ್ಲಿ ಘೋಸ್ನ್ ಮೇಲೆ ಹಣಕಾಸು ಅವ್ಯವಹಾರದ ಆರೋಪ ಬಂದಿತ್ತು. ಆ ಆರೋಪದ ವಿಚಾರಣೆಯನ್ನು ಎದುರಿಸುತ್ತಿದ್ದರು. "ಅದು ನನ್ನ ಜೀವನದ ಅತ್ಯಂತ ಕಷ್ಟಕರ ದಿನಗಳು" ಎಂದು ಅವರು ಹೇಳಿದ್ದಾರೆ.

ತನ್ನ ವಿರುದ್ಧ ಎಲ್ಲ ಆರೋಪಗಳು ಸುಳ್ಳು ಎಂದ ಘೋಸ್ನ್, ನನ್ನನ್ನು ಬಂಧಿಸಬಾರದಿತ್ತು ಎಂದಿದ್ದಾರೆ. ನಾನು ಕಾನೂನಿಗಿಂತ ಮೇಲಿನವನಲ್ಲ. ಸತ್ಯ ಹೊರಗೆ ಬರುವ ಯಾವುದೇ ಅವಕಾಶ ಇದ್ದರೂ ಅದನ್ನು ಸ್ವಾಗತಿಸುತ್ತೇನೆ ಮತ್ತು ನನ್ನ ಮೇಲಿನ ಆರೋಪದಿಂದ ಮುಕ್ತನಾಗಬೇಕು ಎಂದು ಹೇಳಿದ್ದಾರೆ.

ಪರಾರಿಯಾಗಿದ್ದ ಘೋಸ್ನ್ ಜಪಾನ್ ಕಾನೂನು ವ್ಯವಸ್ಥೆ ಬಗ್ಗೆ ಹೇಳಿದ್ದೇನು?

ಘೋಸ್ನ್ ಹುಟ್ಟಿ- ಬೆಳೆದದ್ದು ಲೆಬನಾನ್ ನಲ್ಲಿ. ಅಲ್ಲಿನ ಜನರು ಘೋಸ್ನ್ ನನ್ನು ರಾಷ್ಟ್ರೀಯ ಹೀರೋ ಎಂದು ಪರಿಗಣಿಸುತ್ತಾರೆ. ಆ ದೇಶದ ರಾಜಧಾನಿ ಬೈರೂತ್ ಗೆ ಟೋಕಿಯೋದ ಗೃಹಬಂಧನದಿಂದ ಕಣ್ಣುತಪ್ಪಿಸಿ ಬಂದಿದ್ದರು ಘೋಸ್ನ್. ಎಂಥ ಬಿಗಿ ಕಣ್ಗಾವಲಿನ ಮಧ್ಯೆಯೂ ಘೋಸ್ನ್ ಕಣ್ಣು ತಪ್ಪಿಸಿ, ದೇಶದಿಂದ ಪರಾರಿಯಾಗಿದ್ದು ಜಪಾನ್ ಅಧಿಕಾರಿಗಳಿಗೆ ಭಾರೀ ಮುಜುಗರ ಉಂಟು ಮಾಡುತ್ತಿದೆ.

ನಿಸಾನ್ ಮತ್ತು ರೆನಾಲ್ಟ್ ವಿಲೀನ ಆಗಬೇಕು ಎಂಬ ನಿರ್ಧಾರದ ಪರವಾಗಿದ್ದರು ಘೋಸ್ನ್. ಆದರೆ ಇದೇ ವಿಚಾರಕ್ಕೆ ತನ್ನ ವಿರುದ್ಧ ಪಿತೂರಿ ನಡೆದಿದೆ ಎಂದಿದ್ದಾರೆ. ಜಪಾನಿನ ಕಠಿಣ ಕಾನೂನು ವ್ಯವಸ್ಥೆಯ ರಾಜಕೀಯ ಕಿರುಕುಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪರಾರಿ ಆಗಬೇಕಾಯಿತು ಎಂದು ಹೇಳಿದ್ದಾರೆ.

English summary

Nissan Ex Chairman Carlos Ghosn Blames Japan Justice System

Nissan ex chairman Carlos Ghosn first time appeared first time on Wednesday and blames Japan justice system.
Story first published: Wednesday, January 8, 2020, 21:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X