For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರಿ ನೌಕರರಿಗೆ ಇನ್ನು ಒಂದು ವರ್ಷ ಡಿ.ಎ. ಏರಿಕೆ ಇಲ್ಲ

|

ಕೇಂದ್ರ ಸರ್ಕಾರಿ ನೌಕರರಿಗೆ ಇನ್ನು ಒಂದು ವರ್ಷ ಡಿ.ಎ. (ತುಟ್ಟಿ ಭತ್ಯೆ) ಏರಿಕೆ ಮಾಡುವುದಿಲ್ಲ ಎಂದು ಕೇಂದ್ರದಿಂದ ಗುರುವಾರ ಘೋಷಣೆ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ 4 ಪರ್ಸೆಂಟ್ ಹೆಚ್ಚಿಸುವ ಮೂಲಕ 21 ಪರ್ಸೆಂಟ್ ಗೆ ಡಿ.ಎ. ಏರಿಕೆ ಮಾಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು. ಆದರೆ ಈಗ ಕೇಂದ್ರ ಸರ್ಕಾರಿ ನೌಕರರು ಹಾಗೂ ಪೆನ್ಷನ್ ದಾರರಿಗೆ 17 ಪರ್ಸೆಂಟ್ ಡಿ.ಎ., ಡಿಯರ್ ನೆಸ್ ರಿಲೀಫ್ ಮುಂದುವರಿಯಲಿದೆ.

 

ಇನ್ನು ಜನವರಿ 1, 2020ರಿಂದ ಜೂನ್ 30, 2021ರ ಅವಧಿಗೆ ಯಾವುದೇ ಬಾಕಿಯನ್ನು ಸಹ ನೀಡುವುದಿಲ್ಲ ಎಂದು ತಿಳಿಸಲಾಗಿದೆ. ಜುಲೈ 1, 2021ಕ್ಕೆ ಆಗಬೇಕಿರುವ ಡಿಎ ಪರಿಷ್ಕರಣೆಯನ್ನು ಈ ಹಿಂದಿನ ಏರಿಕೆ ಎಂದೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರವು ಸಿಬ್ಬಂದಿ ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಏರಿಕೆಯನ್ನು ತಡೆಹಿಡಿಯಲಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

 

ಕೊರೊನಾ ಪ್ರಭಾವ: ಸರ್ಕಾರಿ ಸಿಬ್ಬಂದಿಯ ತುಟ್ಟಿ ಭತ್ಯೆ ಏರಿಕೆಗೆ ಬ್ರೇಕ್ಕೊರೊನಾ ಪ್ರಭಾವ: ಸರ್ಕಾರಿ ಸಿಬ್ಬಂದಿಯ ತುಟ್ಟಿ ಭತ್ಯೆ ಏರಿಕೆಗೆ ಬ್ರೇಕ್

ಈಗ ಬಂದಿರುವ ಆದೇಶದ ಪ್ರಕಾರ, ಜನವರಿ 1, 2020ಕ್ಕೆ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಬಾಕಿ ಇರುವ ಡಿ.ಎ. ಕೂಡ ಪಾವತಿ ಮಾಡುವುದಿಲ್ಲ. ಅದರ ಜತೆಗೆ ಜನವರಿ, ಜುಲೈನಿಂದ ಪಾವತಿಯಾಗಬೇಕಾದದ್ದನ್ನು ಕೂಡ ನೀಡುವುದಿಲ್ಲ. ಆದರೆ ಈಗ ನಿಗದಿ ಮಾಡಿರುವ ದರವನ್ನೇ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಇನ್ನು ಒಂದು ವರ್ಷ ಡಿ.ಎ. ಏರಿಕೆ ಇಲ್ಲ

ಡಿ.ಎ. ಏರಿಕೆ ಬಗ್ಗೆ ಮಾರ್ಚ್ ನಲ್ಲಿ ಘೋಷಣೆ ಮಾಡಲಾಗಿತ್ತು. ಅದು ಜನವರಿ 1, 2020ರಿಂದಲೇ ಪೂರ್ವಾನ್ವಯ ಆಗಬೇಕಿತ್ತು. ಅಂದ ಹಾಗೆ ಸರ್ಕಾರದ ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ನೌಕರರು, ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ಆದಾಯದ ಮೇಲೆ ಪ್ರಭಾವ ಆಗುತ್ತದೆ.

ತುಟ್ಟಿ ಭತ್ಯೆ ಅಂದರೇನು?
ಏರುವ ಹಣದುಬ್ಬರಕ್ಕೆ ಪರಿಹಾರ ಎಂಬಂತೆ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಎರಡು ಬಾರಿ- ಜನವರಿ ಹಾಗೂ ಜುಲೈನಲ್ಲಿ ಡಿ.ಎ. ಪರಿಷ್ಕರಣೆ ಆಗುತ್ತದೆ.

ಈಚೆಗಷ್ಟೇ ಸರ್ಕಾರವು ಸಂಸದರು, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ವೇತನವನ್ನು ಕಡಿತ ಮಾಡಿ ಆದೇಶ ನೀಡಿದೆ.

English summary

No DA Hike For Central Government Employees For 1 Year

No DA hike for employees and DR hike for pensioners next one year by central government.
Story first published: Thursday, April 23, 2020, 14:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X