For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದ ಏರ್ ಇಂಡಿಯಾ

|

ವಾಯುಯಾನ ಕ್ಷೇತ್ರದಾದ್ಯಂತ ಕರೊನವೈರಸ್ ಸೃಷ್ಠಿಸಿರುವ ಬಿಕ್ಕಟ್ಟಿನ ನಡುವೆಯೂ ಸರ್ಕಾರಿ ಸ್ವಾಮ್ಯದ ಏರ್‌ಲೈನ್ಸ್ 'ಏರ್ ಇಂಡಿಯಾ' ತನ್ನ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದು ಗುರುವಾರ ಹೇಳಿದೆ.

ಏರ್ ಇಂಡಿಯಾ ಮಂಡಳಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆ ತನ್ನ ಅಧಿಕೃತ ಟ್ವೀಟ್‌ನಲ್ಲಿ ತಿಳಿಸಿದೆ. ಯಾವುದೇ ವರ್ಗದ ಉದ್ಯೋಗಿಗಳಿಗೆ ಮೂಲ ವೇತನ, ಡಿಎ ಮತ್ತು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಕಡಿಮೆಯಾಗುವುದಿಲ್ಲ ಎಂದು ಏರ್ ಇಂಡಿಯಾ ಹೇಳಿದೆ.

ಏರ್ ಇಂಡಿಯಾ ಸಿಬ್ಬಂದಿಗೆ ಸಂಬಳ ಇಲ್ಲದೆ ಐದು ವರ್ಷದ ತನಕ ಕಡ್ಡಾಯ ರಜಾಏರ್ ಇಂಡಿಯಾ ಸಿಬ್ಬಂದಿಗೆ ಸಂಬಳ ಇಲ್ಲದೆ ಐದು ವರ್ಷದ ತನಕ ಕಡ್ಡಾಯ ರಜಾ

ಆದಾಗ್ಯೂ, ಕೆಲವು ಭತ್ಯೆಗಳನ್ನು ಪುನರ್‌ ರಚಿಸುವಿಕೆಯನ್ನು ಜಾರಿಗೆ ತರಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ, ವಿಮಾನಯಾನ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಿದ ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ.

ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದ ಏರ್ ಇಂಡಿಯಾ

ಕಳೆದ ವಾರ, ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೀವ್ ಬನ್ಸಾಲ್ ಅವರು, ಸಾಲ, ವಿಮಾನ ಗುತ್ತಿಗೆ ಬಾಡಿಗೆಗಳು, ಜೊತೆಗೆ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡಲು ಏರ್‌ಲೈನ್ಸ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು.

English summary

No Lay Off No Salary Cut For Air India Employees

No Lay Off No Salary Cut For Air India Employees
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X