For Quick Alerts
ALLOW NOTIFICATIONS  
For Daily Alerts

ವಿಮಾನ ಹಾರಾಟ ಶುರುವಾದರೂ ಕೆಲ ದಿನಗಳು ಊಟ ಕೊಡಲ್ಲ: ಇಂಡಿಗೋ

|

ದೇಶದಲ್ಲಿ ಕೊರೊನಾಯಿಂದಾಗಿ ಹೇರಿರುವ ನಿಷೇಧವು ತೆರವುಗೊಂಡ ಬಳಿಕ ವಿಮಾನಯಾನ ಶುರುವಾದ ಸಂದರ್ಭದಲ್ಲಿ ಕೆಲವು ದಿನಗಳ ಕಾಲ ಪ್ರಯಾಣಿಕರಿಗೆ ಯಾವುದೇ ಆಹಾರ ನೀಡದೇ ಇರಲು ಇಂಡಿಗೋ ವಿಮಾನ ಯಾನ ಸಂಸ್ಥೆ ನಿರ್ಧರಿಸಿದೆ.

ಸಂಸ್ಥೆಯ ಸಿಇಒ ರೊನೊಜೊಯ್‌ ದತ್ತ ನೌಕರರಿಗೆ ಕಳಿಸಿದ ಇ ಮೇಲ್‌ ಸಂದೇಶದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಇದರ ಜತೆಗೆ ಸ್ವಚ್ಛತೆಯ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವಿಮಾನ ಹಾರಾಟ ಶುರುವಾದರೂ ಕೆಲ ದಿನಗಳು ಊಟ ಕೊಡಲ್ಲ: ಇಂಡಿಗೋ

"ಲಾಕ್‌ಡೌನ್ ಅನ್ನು ಯಾವಾಗ ತೆಗೆದುಹಾಕಲಾಗುತ್ತದೆ ಎಂದು ನಮಗೆ ತಿಳಿದಿಲ್ಲ ಆದರೆ ನಮ್ಮ ಮುಂದಿನ ಯೋಜನೆಯಲ್ಲಿ ವಿಮಾನಯಾನವನ್ನು ಮೊದಲಿಗೆ ನಿಧಾನವಾಗಿ ಪ್ರಾರಂಭಿಸುವುದು ಮತ್ತು ಕ್ರಮೇಣ ಸಾಮರ್ಥ್ಯವನ್ನು ಹೆಚ್ಚಿಸುವುದು. ನಾವು ಯಾವಾಗಲೂ ಸುರಕ್ಷತಾ ಪ್ರಜ್ಞೆ ಹೊಂದಿದ್ದೇವೆ , ಜೊತೆಗೆ ಈಗ ನಾವು ಆರೋಗ್ಯ ಪ್ರಜ್ಞೆಯನ್ನು ಹೊಂದಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಅನೇಕ ಕಾರ್ಯ ವಿಧಾನಗಳನ್ನು ಬದಲಾಯಿಸಲು ನಾವು ನೋಡುತ್ತಿದ್ದೇವೆ'' ಎಂದು ಇಂಡಿಗೊ ಸಿಇಒ ರೊನೋಜಾಯ್ ದತ್ತಾ ಅವರು ಶುಕ್ರವಾರ ಉದ್ಯೋಗಿಗಳಿಗೆ ಬರೆದ ಇ ಮೇಲ್‌ನಲ್ಲಿ ತಿಳಿಸಿದ್ದಾರೆ.

ಕೊರೊನಾವೈರಸ್ ಎಫೆಕ್ಟ್: ಉದ್ಯೋಗಿಗಳ ವೇತನ ಕಡಿತಗೊಳಿಸಿದ ಇಂಡಿಗೊಕೊರೊನಾವೈರಸ್ ಎಫೆಕ್ಟ್: ಉದ್ಯೋಗಿಗಳ ವೇತನ ಕಡಿತಗೊಳಿಸಿದ ಇಂಡಿಗೊ

ಇನ್ನು ಮುಂದೆ ವಿಮಾನವನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು, ಕ್ಯಾಬಿನ್‌ನಲ್ಲಿ ಶುಚಿತ್ವ ಕಾಪಾಡಲು ಆಹಾರ ಸರಬರಾಜನ್ನೂ ತಡೆ ಹಿಡಿಯುವುದರ ಜತೆಗೆ ಹಲವು ಮಾರ್ಪಾಡುಗಳನ್ನು ಸಂಸ್ಥೆಯು ತನ್ನ ಯಾನದ ಸಂದರ್ಭದಲ್ಲಿ ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದೆ.

English summary

No Meals On Board Indigo Flights After Lockdown Clear

IndiGo airlines will deep clean its aircraft more frequently, stop in-flight meal service for a brief period
Story first published: Saturday, April 11, 2020, 11:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X