2,000 ರುಪಾಯಿ ನೋಟು ಹಿಂದಕ್ಕೆ ಪಡೆಯುವುದಿಲ್ಲ: ಅನುರಾಗ್ ಠಾಕೂರ್

ಎಟಿಎಂಗಳಲ್ಲಿ ಸಿಗದೆ ಕಾಣೆಯಾದಂತಿರುವ 2,000 ರುಪಾಯಿ ನೋಟುಗಳನ್ನು ರದ್ದು ಮಾಡುವುದಿಲ್ಲ ಅಥವಾ ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ.

ಲಿಖಿತ ಉತ್ತರದಲ್ಲಿ ತಿಳಿಸಿರುವ ಅನುರಾಗ್ ಠಾಕೂರ್ ಹಲವಾರು ಬ್ಯಾಂಕುಗಳ ಎಟಿಎಂಗಳಲ್ಲಿ ಈ ನೋಟುಗಳನ್ನು ವಿತರಿಸಲಾಗುತ್ತಿದೆ. ಆದರೂ ಈ ನೋಟುಗಳಿಗೆ ಸುಲಭವಾಗಿ ಚಿಲ್ಲರೆ ದೊರೆಯದ ಕಾರಣಕ್ಕೆ ಎಟಿಎಂಗಳಿಂದ 200 ಮತ್ತು 500 ರುಪಾಯಿ ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ವಿತರಿಸಲು ಬ್ಯಾಂಕುಗಳು ಕ್ರಮ ಕೈಗೊಂಡಿವೆ ಎಂದು ಠಾಕೂರ್ ಹೇಳಿದ್ದಾರೆ.

2,000 ರುಪಾಯಿ ನೋಟು ಹಿಂದಕ್ಕೆ ಪಡೆಯುವುದಿಲ್ಲ: ಅನುರಾಗ್ ಠಾಕೂರ್

ಎಸ್‌ಬಿಐ ಹಾಗೂ ಇಂಡಿಯನ್ ಬ್ಯಾಂಕ್ ಈಗಾಗಲೇ ಚಿಲ್ಲರೆ ಸಮಸ್ಯೆಯನ್ನು ತಗ್ಗಿಸಲು 500 ಮತ್ತು 200 ರುಪಾಯಿ ನೋಟುಗಳನ್ನು ಎಟಿಎಂಗಳಲ್ಲಿ ನೀಡುತ್ತಿದೆ. ಆರ್‌ಬಿಐ ಸಲಹೆ ಮೇರೆಗೆ ನೋಟುಗಳ ಮುದ್ರಣವನ್ನು ಸರ್ಕಾರ ಮಾಡಿದೆ ಎಂದು ಠಾಕೂರ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ 2,000 ರುಪಾಯಿ ನೋಟುಗಳ ಚಲಾವಣೆ ಕಡಿಮೆಯಾಗಿದ್ದರಿಂದ ಸರ್ಕಾರ ಅವುಗಳನ್ನು ಹಿಂಪಡೆಯಲಿದೆ ಎಂಬ ಸುದ್ದಿಗಳು ಹರಡಿದ್ದವು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+