ಭಾರತದಲ್ಲಿ ನೋಕಿಯಾ ಪವರ್ ಈಯರ್‍ಬಡ್ಸ್ ಲೈಟ್ಸ್ ಮಾರಾಟ
ಬೆಂಗಳೂರು, ಫೆಬ್ರವರಿ 28: ಎಚ್‍ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಫೋನ್ ಇಂದು ನೋಕಿಯಾ ಪವರ್ ಈಯರ್‍ಬಡ್ಸ್ ಲೈಟ್ ಭಾರತದಲ್ಲಿ ಫೆಬ್ರವರಿ 27ರಿಂದ ಖರೀದಿಗೆ ಲಭ್ಯ. ಖರೀದಿ ಬೆಲೆ ರೂ. 3599 ಆಗಿದ್ದು, ಒಂದು ವರ್ಷದ ವಾರೆಂಟಿಯೊಂದಿಗೆ ಅಮೆಜಾನ್ ಹಾಗೂ ನೋಕಿಯಾ ಸ್ಟೋರ್ ಗಳಲ್ಲಿ ಮಾರಾಟವಾಗುತ್ತಿದೆ.
ನೋಕಿಯಾ ಪವರ್ ಈಯರ್‍ಬಡ್ ಲೈಟ್, ಪ್ರಿಮಿಯಮ್ ನೊರ್ಯಾಡಿಕ್ ವಿನ್ಯಾಸವನ್ನು ಹೊಂದಿದ್ದು, ಜೇಬಿನ ಗಾತ್ರದ ಚಾರ್ಜಿಂಗ್ ಕೇಸ್‍ಗಳನ್ನು ಹೊಂದಿರುತ್ತದೆ. ಪರಿಸರದಿಂದ ಸ್ಫೂರ್ತಿ ಪಡೆದ ಎರಡು ನೊರ್ಯಾಡಿಕ್ ಬಣ್ಣಗಳಿಂದ ಸ್ಫೂರ್ತಿ ಪಡೆದಿದ್ದು, ಹಿಮ ಮತ್ತು ಕಲ್ಲಿದ್ದಲು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇವು ಶೇಕಡ 100ರಷ್ಟು ಮರುಬಳಕೆ ಮಾಡಬಹುದಾದದ ಕಾಗದದಿಂದ ಸ್ಫೂರ್ತಿ ಪಡೆದಿರುತ್ತದೆ. ಸಾಮಾನ್ಯವಾಗಿ ಹೊರಾಂಗಣದಲ್ಲಿ ಇರುವ ಸಂಗೀತಪ್ರಿಯರನ್ನು ಗಮನದಲ್ಲಿರಿಸಿಕೊಂಡು, ನೋಕಿಯಾ ಪವರ್ ಈಯರ್‍ಬಡ್ ಲೈಟ್, ಸಾರ್ವತ್ರಿಕ ಬ್ಲೂಟೂತ್ ಹೊಂದಿದ್ದು, ಸಾರ್ವತ್ರಿಕ ಬ್ಲೂಟೂತ್ ಹೊಂದಾಣಿಕೆಗೆ ಅವಕಾಶ ಮಾಡಿಕೊಡುತ್ತದೆ.
ಈ ಮೂಲಕ ತಲ್ಲೀನಗೊಳಿಸುವ ಧ್ವನಿ ಅನುಭವವನ್ನು ಮತ್ತು ಸುಸ್ಪಷ್ಟವಾದ ಶ್ರವ್ಯ ಫಲಿತಾಂಶವನ್ನು ಒದಗಿಸಲಿದೆ. ಪರಿಪೂರ್ಣವಾಗಿ ಮತ್ತು ಆರಾಮದಾಯಕವಾಗಿ ಇದು ಹೊಂದಾಣಿಕೆಯಾಗಲಿದೆ. ಇದನ್ನು ಸರಳವಾಗಿ ನಿಯಂತ್ರಿಸಲು ಅವಕಾಶವಿದೆ. 35 ಗಂಟೆಗಳ ನಿರಂತರ ಪ್ಲೇಟೈಮ್ ಹೊಂದಿದ್ದು, ನೀವು ಚಿಂತಾಮುಕ್ತರಾಗಿ ಒಳಾಂಗಣ ಅಥವಾ ಹೊರಾಂಗಣದಲ್ಲೂ, ಮಳೆ ಅಥವಾ ಮಳಖೆ ಇಲ್ಲದಾಗಲೂ ಸಂಗೀತವನ್ನು ಆಸ್ವಾದಿಸಲು ಅವಕಾಶ ಮಾಡಿಕೊಡಲಿದೆ. ಇದಕ್ಕಾಗಿಯೇ ಐಪಿಎಕ್ಸ್7 ನೀರು ನಿರೋಧಕ ರೇಟಿಂಗ್ ಹೊಂಇದ್ದು, ಇದು ಬೆವರು ಮತ್ತು ನೀರಿನ ನಿರೋಧಕ ಶಕ್ತಿಯನ್ನು ಹೊಂದಿದ್ದು, 30 ನಿಮಿಷಗಳವರೆಗೆ ಒಂದು ಮೀಟರ್ ನೀರನ್ನು ಕೂಡಾ ತಡೆದುಕೊಳ್ಳಬಹುದಾಗಿದೆ.
ಸಾರ್ವತ್ರಿಕ ಬ್ಲೂಟೂಥ್ 5.0 ಹೊಂದಿಕೆಯೊಂದಿಗೆ ಜೇಬಿನ ಗಾತ್ರದ ಈಯರ್‍ಬಡ್ಸ್, ನೀವು ಎಲ್ಲಿ ಪ್ರಯಾಣಿಸುವಾಗ ಕೂಡಾ ನಿಮ್ಮ ಫೇವರಿಟ್ ಹಾಡುಗಳನ್ನು ನಿಮ್ಮೊಂದಿಗೆ ಒಯ್ಯಲು ಸಹಕಾರಿಯಾಗಿವೆ. ನೋಕಿಯಾ ಪವರ್ ಈಯರ್‍ಬಡ್ಸ್ ಲೈಡ್ 50 ಎಂಎಎಚ್ ಬ್ಯಾಟರಿಯನ್ನು ಪ್ರತಿ ಈಯರ್‍ಬಡ್‍ಗೆ ಹೊಂದಿದ್ದು, ಚಾರ್ಜಿಂಗ್ ಕೇಸ್‍ಗೆ 350 ಎಂಎಎಚ್ ಬ್ಯಾಟರಿ ನೆರವು ಇರುತ್ತದೆ. 35 ಗಂಟೆಗಳ ನಿರಂತರ ಹಾಡು ಆಲಿಸುವ ಸಾಮಥ್ರ್ಯ ಹೊಂದಿವೆ.
ನೋಕಿಯಾ ಪವರ್ ಈಯರ್‍ಬಡ್ಸ್ ಲೈಟ್‍ಗೆ ಸಂಬಂಧಿಸಿದಂತೆ, ಇವು ಕೇವಲ ಸುಂದರ ಮತ್ತು ಜೇಬಿನಲ್ಲಿ ಇರಿಸಿಕೊಳ್ಳಲು ಯೋಗ್ಯವಾಗಿರುವುದು ಮಾತ್ರವಲ್ಲದೇ,ಶೇಕಡ 100ರಷ್ಟು ಮರುಬಳಕೆಯ ಕಾಗದದಿಂದ ಸುಸ್ಥಿರ ಪ್ಯಾಕೇಜಿಂಗ್‍ನಿಂದ ಸುತ್ತಲ್ಪಟ್ಟಿದೆ. ಈ ಮೂಲಕ ತನ್ನ ವಹಿವಾಟು ಮತ್ತು ಉತ್ಪನ್ನಗಳು ಪರಿಸರದ ಮೇಲೆ ಪರಿಣಾಮ ಬೀರದಂತೆ ತಡೆಯುವ ನಿಟ್ಟಿಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಐಪಿಎಕ್ಸ್7 ಪ್ರಮಾಣಪತ್ರವು ಈ ಈಯರ್‍ಬಡ್‍ಗಳು 1 ಮೀಟರ್ ನೀರಿನಲ್ಲೂ 30 ನಿಮಿಷಗಳ ಕಾಲ ಪ್ರತಿರೋಧ ಒಡ್ಡುವ ಸಾಮಥ್ರ್ಯ ಹೊಂದುವಂತೆ ಮಾಡಿದೆ. ಅಂದರೆ ನಿವು ಜಿಮ್‍ನಲ್ಲಿ ಬೆವರಿದಾಗ ಹಾಗೂ ಮಳೆಯಲ್ಲಿ ಸುಲಭವಾಗಿ ಭಯಮುಕ್ತವಾಗಿ ಓಡಾಡಲು ಅನುವು ಮಾಡಿಕೊಡುತ್ತದೆ. 6 ಎಂಎಂ ಗ್ರಾಫೇನ್ ಸ್ಪೀಕರ್ ಚಾಲನೆಯು ಸುಸ್ಪಷ್ಟವಾದ ನಿರ್ದಿಷ್ಟ ಧ್ವನಿಯನ್ನು ಖಾತರಿಪಡಿಸುತ್ತದೆ.