For Quick Alerts
ALLOW NOTIFICATIONS  
For Daily Alerts

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಹೆಚ್ಚಳ

|

ದೆಹಲಿ: ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಬುಧವಾರದಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ. ಮೆಟ್ರೋ ನಗರಗಳಿಗೆ ಮಾತ್ರ ಈ ಹೆಚ್ಚಳ ಅನ್ವಯವಾಗಲಿದೆ.

ಇದು ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿ ಹೆಚ್ಚಳವಾಗಿದೆ. ಜುಲೈ 1 ರಿಂದ ಜಾರಿಗೆ ಬರುವಂತೆ, ಸಬ್ಸಿಡಿ ರಹಿತ ಎಲ್‌ಪಿಜಿಯ ಬೆಲೆಯನ್ನು ದೆಹಲಿಯಲ್ಲಿ 1 ರುಪಾಯಿ, ಕೋಲ್ಕತ್ತಾದಲ್ಲಿ 4.50 ರು, ಮುಂಬೈನಲ್ಲಿ 3.50 ರೂ. ಮತ್ತು ಚೆನ್ನೈನಲ್ಲಿ 4 ರು ಹೆಚ್ಚಿಸಲಾಗಿದೆ.

ಈ ಮೂಲಕ 14.2 ಕಿಲೋಗ್ರಾಂ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ ದೆಹಲಿಯಲ್ಲಿ 594 ರು, ಕಲ್ಕತ್ತಾ 620 ರು, ಮುಂಬೈ 594 ರು ಮತ್ತು ಚೆನ್ನೈನಲ್ಲಿ 610 ರುಪಾಯಿಗೆ ಮಾರಾಟವಾಗುತ್ತಿದೆ.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಹೆಚ್ಚಳ

ಫೆಬ್ರವರಿಯಲ್ಲಿ, ಎಲ್ಪಿಜಿ ಸಿಲಿಂಡರ್ ದರವು 858 ರುಪಾಯಿವರೆಗೆ ಏರಿತ್ತು. ಆದರೆ , ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಕಚ್ಚಾ ತೈಲದ ಬೇಡಿಕೆ ಕಡಿಮೆ ಆಗಲು ಪ್ರಾರಂಭಿಸಿದಾಗ 581 ಕ್ಕೆ ಇಳಿಸಲಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನವೂ ಪರಿಷ್ಕರಿಸಿದರೆ, ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ದರವನ್ನು ಪರಿಷ್ಕರಿಸಲಾಗುತ್ತದೆ..

English summary

Non Subsidised LPG Price Hiked In Metro Cities

Non Subsidised LPG Price Hiked In Metro Cities
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X