ಭಾರತದಲ್ಲಿ ಈಗ ಆರ್ಥಿಕ ಕುಸಿತ ಅಧಿಕೃತ; 7.5% ಕುಗ್ಗಿದ ಜಿಡಿಪಿ
ಭಾರತದ ಆರ್ಥಿಕತೆಯು ಅಧಿಕೃತವಾದ ಆರ್ಥಿಕ ಕುಸಿತವನ್ನು ತಲುಪಿದೆ. ಎರಡನೇ ತ್ರೈಮಾಸಿಕದಲ್ಲಿ, ಅಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳಲ್ಲಿ 7.5% ಕುಸಿತ ಕಂಡಿದೆ. ಸತತವಾಗಿ ಎರಡು ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರ ಕುಸಿತವಾದರೆ ಅದನ್ನು ಆರ್ಥಿಕ ಕುಸಿತ ಎನ್ನಲಾಗುತ್ತದೆ. ಆ ಮೂಲಕ ಭಾರತದಲ್ಲಿ ಆರ್ಥಿಕ ಕುಸಿತ ಇದೆ ಎಂಬಂತಾಗಿದೆ.
ಜಿಡಿಪಿ ಫಲಿತಾಂಶದ ನಿರೀಕ್ಷೆಯಲ್ಲಿ ಇಳಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ
ಇನ್ನು ಅಕ್ಟೋಬರ್ ತಿಂಗಳಲ್ಲಿ ಎಂಟು ಮುಖ್ಯ ಕೈಗಾರಿಕೆಗಳ ಉತ್ಪಾದನೆ -2.5% ಇದೆ. ಸೆಪ್ಟೆಂಬರ್ ನಲ್ಲಿ ಈ ಪ್ರಮಾಣ -0.1% ಇತ್ತು. 2019ರ ಅಕ್ಟೋಬರ್ ಗೆ ಹೋಲಿಸಿದರೆ -5.5% ಆಗುತ್ತದೆ.
ಕಲ್ಲಿದ್ದಲು: 11.6%
ಕಚ್ಚಾ ತೈಲ: -6.2%
ನೈಸರ್ಗಿಕ ಅನಿಲ: -8.6%
ರೀಫೈನರಿ ಉತ್ಪನ್ನಗಳು: -17%
ಗೊಬ್ಬರ: 6.3%
ಉಕ್ಕು: -2.7%
ಸಿಮೆಂಟ್: 2.8%
ವಿದ್ಯುತ್: 10.5%
ಭಾರತದ ವಿತ್ತೀಯ ಕೊರತೆ FY21ರಲ್ಲಿ ಏಪ್ರಿಲ್- ಅಕ್ಟೋಬರ್ ಅವಧಿಯಲ್ಲಿ 119.7% ಇದೆ. ಬಜೆಟ್ ಗುರಿ 7.96 ಲಕ್ಷ ಕೋಟಿ ರುಪಾಯಿ ಇತ್ತು. ಆದರೆ ವಾಸ್ತವದಲ್ಲಿ ಕೊರತೆ 9.53 ಲಕ್ಷ ಕೋಟಿ ರುಪಾಯಿ ಇದೆ.