For Quick Alerts
ALLOW NOTIFICATIONS  
For Daily Alerts

ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ: ಕಳೆದ 11 ವರ್ಷಗಳಲ್ಲಿ ಅತಿ ಕಡಿಮೆ

|

ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಾದ ದೆಹಲಿ ಮತ್ತು ಮುಂಬೈನಲ್ಲಿ 11 ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಯಾಣಿಕರು ಕಳೆದ ವರ್ಷ ಪ್ರಯಾಣಿಸಿದ್ದಾರೆ ಎಂದು ದಾಖಲಾಗಿದೆ.

ದೇಶದಲ್ಲಿನ ಆರ್ಥಿಕತೆ ನಿಧಾನಗತಿಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆಯ ಕುಸಿತ, ಹೂಡಿಕೆ ಮತ್ತು ಬಳಕೆಯ ಪ್ರಮಾಣದಲ್ಲಿ ಇಳಿಕೆಯು ಜನರ ಮೇಲೆ ಪರಿಣಾಮ ಬೀರಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಇಂದಿರಾ ಗಾಂಧಿ ಏರ್‌ಪೋರ್ಟ್, ಛತ್ರಪತಿ ಶಿವಾಜಿ ಏರ್‌ಪೋರ್ಟ್‌ಗಳಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರ ಕ್ಯಾರಿಗೇಜ್‌ನಲ್ಲಿ ಕುಸಿತ ಕಂಡಿದೆ.

ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ: 11 ವರ್ಷಗಳಲ್ಲಿ ಅತಿ ಕಡಿಮೆ

2018ರಲ್ಲಿ ದೇಶದ ಜನನಿಬಿಡ ವಿಮಾಣ ನಿಲ್ದಾಣವಾದ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 7 ಕೋಟಿ ಪ್ರಯಾಣಿಕರು ಮುಟ್ಟಲು ಕೇವಲ 2 ಲಕ್ಷ ಕಡಿಮೆಯಿತ್ತು. 2018ರಲ್ಲಿ 6.98 ಕೋಟಿ ಪ್ರಯಾಣಿಕರು ಈ ಏರ್‌ಪೋರ್ಟ್ ಮೂಲಕ ವಿಮಾನದಲ್ಲಿ ಪ್ರಯಾಣಿಸಿದ್ದರು. DIALನ ತಾತ್ಕಾಲಿಕ ದತ್ತಾಂಶದ ಪ್ರಕಾರ ಈ ವಿಮಾನ ನಿಲ್ದಾಣದಲ್ಲಿ 2.6 ಪರ್ಸೆಂಟ್‌ನಷ್ಟು ಪ್ರಯಾಣಿಕರು ಇಳಿಕೆಯಾಗಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆಯು 6 ಪರ್ಸೆಂಟ್ ಕಡಿಮೆಯಾಗಿದೆ. 2018ರಲ್ಲಿ 5.2 ಕೋಟಿ ಪ್ರಯಾಣಿಕರಿದ್ದು , 2019ರಲ್ಲಿ 4.9 ಕೋಟಿಗೆ ಇಳಿದಿದೆ. ಮುಂಬೈ ವಿಮಾನ ನಿಲ್ದಾಣದಲ್ಲೂ 2019ರಲ್ಲಿ 5.6 ಪರ್ಸೆಂಟ್‌ನಷ್ಟು ಪ್ರಯಾಣಿಕರು ಇಳಿಕೆಯಾಗಿದ್ದಾರೆ.

English summary

Number Of Passengers Falls At Mumbai And Delhi Airports

For the first time since 2008, India's busiest airports Delhi and mumbai have seen a dip in pasengers in 2019
Story first published: Friday, January 10, 2020, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X