For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್ & ಡೀಸೆಲ್ ದರ ಏರಿಕೆಗೆ ಒಪೆಕ್ ರಾಷ್ಟ್ರಗಳು ಕಾರಣ!

|

ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಗಗನಕ್ಕೇರಿರುವುದಕ್ಕೆ ಒಪೆಕ್ ರಾಷ್ಟ್ರಗಳ ದುರಾಸೆಯೇ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಒಪೆಕ್‌ ರಾಷ್ಟ್ರಗಳು ಲಾಭದ ಉದ್ದೇಶದಿಂದ ಉತ್ಪಾದನೆಯ ಪ್ರಮಾಣವನ್ನು ತಗ್ಗಿಸಿರುವುದೇ ಇದಕ್ಕೆ ಕಾರಣವಾಗಿದೆ ಎಂದಿದೆ.

''ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ಯಾರೆಲ್‌ ದರಗಳು ಒಂದೇ ಸಮನೆ ಏರಿಕೆಯಾಗುತ್ತಿದೆ. ಒಪೆಕ್‌ ಸದಸ್ಯ ರಾಷ್ಟ್ರಗಳು ಅತಿಯಾದ ಲಾಭದ ಆಸೆಯಿಂದ ಪೆಟ್ರೋಲ್‌, ಡೀಸೆಲ್‌ ಉತ್ಪಾದನೆಯನ್ನು ತಗ್ಗಿಸಿ ಕೃತಕ ಅಭಾವ ಸೃಷ್ಟಿಸುತ್ತಿವೆ. ಬೇಡಿಕೆಗೆ ತಕ್ಕಷ್ಟು ಇಂಧನ ಪೂರೈಕೆಯಾಗದ ಕಾರಣ ಬೆಲೆ ಹೆಚ್ಚಳದ ಅನಿವಾರ್ಯತೆ ಎದುರಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಉತ್ಪಾದನೆ ಹೆಚ್ಚಿಸುವಂತೆ ಒಪೆಕ್‌ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ'' ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪೆಟ್ರೋಲ್ & ಡೀಸೆಲ್ ದರ ಏರಿಕೆಗೆ ಒಪೆಕ್ ರಾಷ್ಟ್ರಗಳು ಕಾರಣ!

ಇತ್ತೀಚೆಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತೈಲ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ್ದರು. ತೈಲ ಬೆಲೆ ಏರಿಕೆಯು ದುಖಃದ ಸಂಗತಿಯಾಗಿದ್ದು, ಒಂದು ರೀತಿಯಲ್ಲಿ ಧರ್ಮ ಸಂಕಟದ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಚರ್ಚೆ ನಡೆಸಿ ದರ ಇಳಿಕೆಗೆ ಮುಂದಾಗಬೇಕು ಎಂದಿದ್ದರು.

ದೇಶದಲ್ಲಿ ಕೋವಿಡ್-19 ಲಾಕ್‌ಡೌನ್ ಬಳಿಕ ತೈಲ ಬೆಲೆ ಏರಿಕೆ ಪ್ರಾರಂಭವಾಯಿತು. ಈ ವರ್ಷ ಶೇಕಡಾ 20ರಷ್ಟು ತೈಲ ಬೆಲೆ ತುಟ್ಟಿಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

English summary

Oil Minister Gives These Reasons Behind Rising Fuel Prices

Union Petroleum and natural gas and steel minister Dharmendra Pradhan On Sunday said that reduced Fuel production and oil rich nations seeking more profits are the primary reason behind fuel hike
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X