For Quick Alerts
ALLOW NOTIFICATIONS  
For Daily Alerts

ಜುಲೈ 4 ಒಂದೇ ದಿನ 75 ಸಾವಿರಕ್ಕೂ ಹೆಚ್ಚು ಮಂದಿ ದೇಶೀ ವಿಮಾನದಲ್ಲಿ ಪ್ರಯಾಣ

By ಅನಿಲ್ ಆಚಾರ್
|

ಜುಲೈ 4ರಂದು (ಶನಿವಾರ) 75 ಸಾವಿರಕ್ಕೂ ಹೆಚ್ಚು ಮಂದಿ ದೇಶೀಯ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ. ಮೇ 25ನೇ ತಾರೀಕಿನಂದು ದೇಶೀಯ ವಿಮಾನ ಯಾನ ಸೇವೆ ಆರಂಭವಾದಾಗ 30 ಸಾವಿರದಷ್ಟು ಪ್ರಯಾಣಿಕರೊಂದಿಗೆ ಶುರು ಆಗಿತ್ತು ಎಂದು ಅವರು ಹೇಳಿದ್ದಾರೆ.

 

ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟ ಜುಲೈ 31ರ ತನಕ ಇಲ್ಲಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟ ಜುಲೈ 31ರ ತನಕ ಇಲ್ಲ

ಮೇ 25ನೇ ತಾರೀಕಿನಂದು 30 ಸಾವಿರದಷ್ಟು ಪ್ರಯಾಣಿಕರೊಂದಿಗೆ ದೇಶೀ ವಿಮಾನ ಯಾನ ಆರಂಭವಾಗಿತ್ತು. ನಿನ್ನೆ 75 ಸಾವಿರದ ಗಡಿ ದಾಟಿದೆ. ನಿಧಾನವಾಗಿ ಹಾಗೂ ಸ್ಥಿರವಾಗಿ ದೇಶೀಯ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜುಲೈ 4ನೇ ತಾರೀಕಿನ ರಾತ್ರಿ 11.59ರ ತನಕದ ಲೆಕ್ಕಾಚಾರದ ಪ್ರಕಾರ, ಒಟ್ಟು 1560 ಚಲನೆ ಇದೆ.

 
ಜುಲೈ 4 ಒಂದೇ ದಿನ 75,000ಕ್ಕೂ ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣ

ವಿಮಾನ ನಿಲ್ದಾಣದಲ್ಲಿ 1,53,547 ಮಂದಿ ಕಂಡುಬಂದಿದ್ದರೆ, ಪ್ರಯಾಣ ಮಾಡಿದವರು 76,104 ಮಂದಿ ಎಂದು ಪುರಿ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ದೇಶೀಯವಾಗಿ ಎಲ್ಲ ನಿಗದಿಯಾದ ವಿಮಾನಗಳು ಮಾರ್ಚ್ 25ರಂದು ಅಮಾನತು ಆಗಿದ್ದವು. ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಆ ನಂತರ ಮೇ 25ರಿಂದ ದೇಶೀಯ ವಿಮಾನ ಸಂಚಾರ ಮತ್ತೆ ಶುರು ಮಾಡಲಾಗಿದೆ.

English summary

On July 4 More Than 75 Thousand Flyers Traveled In Domestic Flights: Hardeep Singh Puri

More than 75,000 flyers traveled in domestic flights on July 4, said by civil aviation minister Hardeep Singh Puri on Sunday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X