For Quick Alerts
ALLOW NOTIFICATIONS  
For Daily Alerts

150ರ ಗಡಿ ಸಮೀಪಿಸಿದ ಈರುಳ್ಳಿ ದರ, ರಾಜ್ಯದಲ್ಲೂ ದರ ಏರಿಕೆ ಬಿಸಿ

|

ದೇಶಾದ್ಯಂತ ಈರುಳ್ಳಿ ಬೆಲೆಯು ದಾಖಲೆ ಬರೆಯುತ್ತಲೇ ಸಾಗಿದೆ. ರಾಜ್ಯದ ವಿವಿಧೆಡೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಕ್ವಿಂಟಾಲ್‌ಗೆ 13 ಸಾವಿರದಿಂದ 15 ಸಾವಿರದವರೆಗೂ ಏರಿಕೆಯಾಗಿದ್ದು ವರದಿಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಕೆಜಿ ಈರುಳ್ಳಿ ಬೆಲೆ 100ರ ಗಡಿದಾಟಿದ್ದು ಉತ್ಕೃಷ್ಟ ಗುಣಮಟ್ಟದ ಈರುಳ್ಳಿ 150ರ ಗಡಿ ಸಮೀಪಿಸಿದೆ.

 

ಪಂಜಾಬ್‌ನ ಲೂದಿಯಾನದಲ್ಲಿ ಪ್ರತಿ ಕೆಜಿ ಈರುಳ್ಳಿಗೆ 100 ರುಪಾಯಿ ದಾಟಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿಯನ್ನು 170ರುಪಾಯಿನಿಂದ 180 ರುಪಾಯಿವರೆಗೂ ಏರಿಕೆಯಾಗಿದೆ. ಈರುಳ್ಳಿ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮವು ನಲುಗಿದೆ.

 
150ರ ಗಡಿ ಸಮೀಪಿಸಿದ ಈರುಳ್ಳಿ ದರ, ರಾಜ್ಯದಲ್ಲೂ ದರ ಏರಿಕೆ ಬಿಸಿ

'ಈ ಮೊದಲು ಈರುಳ್ಳಿ ಬೆಲೆ ಸಾಮಾನ್ಯವಾಗಿದ್ದಾಗ ನಾವು 5 ಕೆಜಿ ಈರುಳ್ಳಿಯನ್ನು ಖರೀದಿಸುತ್ತಿದ್ದೆವು. ಇದೀಗ ಈರುಳ್ಳಿ ಬೆಲೆ ಕೆಜಿ ೧೦೦ ರುಪಾಯಿಗಿಂತ ಹೆಚ್ಚಾಗಿದೆ, ಹೀಗಾಗಿ ನಾವು ಅರ್ಧ ಕೆಜಿ ಈರುಳ್ಳಿ ಖರೀದಿಸುತ್ತಿದ್ದೇವೆ' ಎಂದು ಲುದಿಯಾನದಲ್ಲಿ ಈರುಳ್ಳಿ ಖರೀದಿಸಲು ಬಂದಿದ್ದ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಕ್ಕೆ ಮುಂದಾಗಿದೆ. ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿದೆ. ಸರ್ಕಾರದ ಭರವಸೆಯಂತೆ ವಿದೇಶದಿಂದ ಈರುಳ್ಳಿ ಆಮದಾದರೆ, ದರ ಇಳಿಯಬಹುದು. ಟರ್ಕಿಯಿಂದ 11,000 ಟನ್ ಈರುಳ್ಳಿ ಆಮದಿಗೆ ಈಗಾಗಲೇ ಸರ್ಕಾರಿ ಸ್ವಾಮ್ಯದ MMTC ಮುಂದಾಗಿದೆ. ಡಿಸೆಂಬರ್ ಕೊನೆಯ ವಾರ ಇಲ್ಲವೇ ಜನವರಿ ಆರಂಭದಲ್ಲಿ ಆಮದಾದ ಈರುಳ್ಳಿ ಮಾರುಕಟ್ಟೆ ತಲುಪಲಿದೆ.

English summary

Onion Price hike continued in retail market

All over India Onions price hiked . In retail market per kg onions rate crossed 100rs
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X