ಸೆನ್ಸೆಕ್ಸ್, ನಿಫ್ಟಿ ಕುಸಿತ: ಟೈಟಾನ್‌ಗೆ ಭಾರೀ ನಷ್ಟ
ಮೂರು ಸೆಷನ್‌ಗಳಲ್ಲಿ ಲಾಭವನ್ನು ಕಂಡಿದ್ದ ಷೇರು ಮಾರುಕಟ್ಟೆ ಜಿಎಸ್‌ಟಿ ಸಭೆ ನಡೆಯಲಿರುವ ದಿನದಂದು ಕುಸಿತ ಕಂಡಿದೆ. ವಾಲ್ ಸ್ಟ್ರೀಟ್‌ನಲ್ಲಿ ಏಷ್ಯನ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ.
ಕಳೆದ ವಾರದ ಕುಸಿತದ ನಂತರ ಕಚ್ಚಾ ತೈಲ ಬೆಲೆ ಏರಿಕೆಯು ಕಂಡಿದೆ. ಇದು ಹೂಡಿಕೆದಾರರ ಭಾವನೆಯ ಮೇಲೆ ಪ್ರಭಾವ ಬೀರಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಫ್ಯೂಚರ್ಸ್ ಇಂದು ಬ್ಯಾರೆಲ್‌ಗೆ 1.08 ಡಾಲರ್ ಅಥವಾ ಶೇಕಡಾ 0.9 ಕ್ಕೆ ಜಿಗಿದು ಡಾಲರ್ 116.17 ಕ್ಕೆ ಜಿಗಿದಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆ: ಎಲ್‌ಐಸಿ ಜಿಗಿತ, ಜೊಮ್ಯಾಟೊ ಭಾರೀ ಕುಸಿತ
30-ಷೇರು ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 236 ಪಾಯಿಂಟ್‌ಗಳು ಅಥವಾ ಶೇಕಡಾ 0.44 ರಷ್ಟು ಕುಸಿದು 52,926 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 72 ಪಾಯಿಂಟ್ ಅಥವಾ 0.45 ರಷ್ಟು ಕುಸಿದು 15,760 ಕ್ಕೆ ವಹಿವಾಟು ನಡೆಸಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.41 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.55 ರಷ್ಟು ಕುಸಿದಿದೆ. ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ 1.68 ಶೇಕಡಾ ಮತ್ತು 0.85 ಶೇಕಡಾದಷ್ಟು ಕುಸಿದಿದೆ.

ಟೈಟಾನ್ ಟಾಪ್ ಲೂಸರ್
ಷೇರು ಮಾರುಕಟ್ಟೆಯಲ್ಲಿ ಟೈಟನ್ ಟಾಪ್ ನಿಫ್ಟಿ ಲೂಸರ್ ಆಗಿದ್ದು, ಸ್ಟಾಕ್ 3.06 ಶೇಕಡಾ ಕುಸಿದು ರೂಪಾಯಿ 1,977.95 ಕ್ಕೆ ತಲುಪಿದೆ. ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಅದಾನಿ ಪೋರ್ಟ್ಸ್ ಮತ್ತು ಬಜಾಜ್ ಫಿನ್‌ಸರ್ವ್ ಕೂಡ ನಷ್ಟ ಕಂಡಿದೆ. ಬಿಎಸ್‌ಇಯಲ್ಲಿ 940 ಷೇರುಗಳು ಲಾಭ ಕಂಡರೆ, 1,324 ಷೇರುಗಳು ನಷ್ಟವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟೈಟಾನ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಟೆಕ್ ಮಹೀಂದ್ರಾ, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಭಾರೀ ನಷ್ಟವಾಗಿದೆ.

ಜೊಮ್ಯಾಟೊ ಷೇರು ಮತ್ತೆ ಕುಸಿತ
ಬ್ಲಿಂಕಿಟ್ ಅನ್ನು 4,447 ಕೋಟಿ ಡಾಲರ್‌ಗೆ ಖರೀದಿ ಮಾಡುವ ಒಪ್ಪಂದದೆ ನಂತರ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ ಭಾರೀ ಕುಸಿತ ಕಂಡಿದೆ. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಶೇಕಡ 6.40ರಷ್ಟು ಕುಸಿತ ಕಂಡು 65.85 ರೂಪಾಯಿಗೆ ಸ್ಥಿರವಾಗಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಜೊಮ್ಯಾಟೊ ಶೇ 6.38 ರಷ್ಟು ಕುಸಿದು ರೂಪಾಯಿ 61.65 ಕ್ಕೆ ವಹಿವಾಟು ನಡೆಸಿದೆ.

ಎಲ್‌ಐಸಿ ಷೇರು ಇಳಿಕೆ
ಅಲ್ಲದೆ, ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 0.71 ರಷ್ಟು ಕುಸಿದು ರೂಪಾಯಿ 659.95 ಕ್ಕೆ ವಹಿವಾಟು ನಡೆಸಿವೆ. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.45ರಷ್ಟು ಹೆಚ್ಚಳವಾಗಿ ರೂಪಾಯಿ 664.65ಕ್ಕೆ ತಲುಪಿದೆ. ಸೋಮವಾರದಂದು ಸೆನ್ಸೆಕ್ಸ್ 433 ಪಾಯಿಂಟ್ ಅಥವಾ ಶೇಕಡಾ 0.82 ರಷ್ಟು ಜಿಗಿದು 53,161 ಕ್ಕೆ ತಲುಪಿದ್ದರೆ, ನಿಫ್ಟಿ 133 ಪಾಯಿಂಟ್ ಅಥವಾ 0.85 ರಷ್ಟು ಏರಿಕೆ ಕಂಡು 15,832 ಕ್ಕೆ ಸ್ಥಿರವಾಯಿತು.