For Quick Alerts
ALLOW NOTIFICATIONS  
For Daily Alerts

ಆರಂಭಿಕ ವಹಿವಾಟು: ಸೆನ್ಸೆಕ್ಸ್, ನಿಫ್ಟಿ ಕುಸಿತ

|

ಆಗಸ್ಟ್ 22ರಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಕುಸಿತ ಕಂಡಿದೆ. ಆರಂಭಿಕವಾಗಿ ನಿಫ್ಟಿ 17700ಕ್ಕಿಂತ ಕೆಳಕ್ಕೆ ಇಳಿದಿದೆ. ನಿಫ್ಟಿ 50 ಸ್ಟಾಕ್‌ನಲ್ಲಿ 43 ಕುಸಿತ ಕಂಡಿದ್ದರೆ ಉಳಿದ 7 ಸ್ಟಾಕ್‌ಗಳು ಏರಿಕೆಯಾಗಿದೆ.

30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ 348.37 ಅಂಕ ಅಥವಾ ಶೇಕಡ 0.58ರಷ್ಟು ಕುಸಿದು 59,297.78ಕ್ಕೆ ತಲುಪಿದೆ. ನಿಫ್ಟಿ 112.25 ಅಂಕ ಅಥವಾ ಶೇಕಡ 0.63ರಷ್ಟು ಇಳಿಕೆ ಕಂಡು 17,646.20ಕ್ಕೆ ವಹಿವಾಟು ಆರಂಭ ಮಾಡಿದೆ. 929 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1238 ಷೇರುಗಳು ಕುಸಿತವಾಗಿದೆ. 158 ಷೇರುಗಳು ಸ್ಥಿರವಾಗಿದೆ.

ನಿಫ್ಟಿ ಐಟಿ ಶೇಕಡ 1.1ರಷ್ಟು ಕುಸಿದಿದೆ. ಈ ಸಂದರ್ಭದಲ್ಲೇ ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇಕಡ 1.4ರಷ್ಟು ಇಳಿದಿದೆ. ದಿವೀಸ್ ಲ್ಯಾಬ್ಸ್ ಷೇರು ಭಾರೀ ಇಳಿಕೆಯಾದ ಷೇರು ಆಗಿದೆ. ದಿವೀಸ್ ಲ್ಯಾಬ್ಸ್ ಶೇಕಡ 3.22ರಷ್ಟು ಕುಸಿದು ರೂಪಾಯಿ 3,577.05ಗೆ ತಲುಪಿದೆ. ಐಟಿಸಿ ಷೇರು ಏರಿಕೆಯಾಗಿದೆ. ಶೇಕಡ 1.20ರಷ್ಟು ಏರಿ, ರೂಪಾಯಿ 315.75ಕ್ಕೆ ಇಳಿದಿದೆ.

ಆರಂಭಿಕ ವಹಿವಾಟು: ಸೆನ್ಸೆಕ್ಸ್, ನಿಫ್ಟಿ ಕುಸಿತ

ಯಾವ ಷೇರು ಏರಿಕೆ, ಇಳಿಕೆ

ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡ 2.7ರಷ್ಟು ಇಳಿಕೆಯಾಗಿದೆ. ಪೇಟಿಎಂ ಶೇಕಡ 3.1ರಷ್ಟು ಹೆಚ್ಚಾಗಿದೆ. ಅದಾನಿ ಪವರ್ ಲಿಮಿಟಿಡ್ ಸ್ಟಾಕ್ ಶೇಕಡ 3.4ರಷ್ಟು ಹೆಚ್ಚಾಗಿದೆ. ಸೆನ್ಸೆಕ್ಸ್‌ನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಸ್ಟೀಲ್ಸ್, ವಿಪ್ರೋ, ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಎಚ್‌ಸಿಎಲ್‌ ಟೆಕ್ನಾಲಜೀಸ್, ಇಂಡಸ್‌ಇಂಡ್ ಬ್ಯಾಂಕ್ ಸ್ಟಾಕ್ ಏರಿಕೆಯಾಗಿದೆ. ಇದಲ್ಲದೆ ಹಿಂದೂಸ್ತಾನ್ ಯೂನಿಲಿವರ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಐಟಿಸಿ ಸ್ಟಾಕ್ ಏರಿಕೆಯಾಗಿದೆ.

English summary

Opening Bell: Sensex Crashes 300 Points, Nifty Trades Below 17,700

Opening Bell: Sensex Crashes 300 Points, Nifty Trades Below 17,700.
Story first published: Monday, August 22, 2022, 12:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X