For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಆಗಸ್ಟ್ 3ರಂದು ಆರಂಭಿಕ ವಹಿವಾಟು ಹೇಗಿದೆ ನೋಡಿ

|

ಷೇರು ಮಾರುಕಟ್ಟೆಯು ಆರಂಭಿಕ ವಹಿವಾಟಿನಲ್ಲಿ ಪಾಸಿಟಿವ್ ಆಗಿದೆ. ಆಗಸ್ಟ್ 3ರಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆಯೊಂದಿಗೆ ವಹಿವಾಟು ಆರಂಭವಾಗಿದೆ. ಸೆನ್ಸೆಕ್ಸ್ 155.47 ಅಂಕ ಅಥವಾ ಶೇಕಡ 0.27ರಷ್ಟು ಏರಿಕೆಯಾಗಿ 58291.83ಕ್ಕೆ ವಹಿವಾಟು ಆರಂಭ ಮಾಡಿದರೆ, ನಿಫ್ಟಿ 35 ಅಂಕ ಅಥವಾ ಶೇಕಡ 0.20ರಷ್ಟು ಹೆಚ್ಚಳವಾಗಿ 17380.50ಕ್ಕೆ ತಲುಪಿದೆ.

ನಿಫ್ಟಿ ಮೆಟಲ್, ನಿಫ್ಟಿ ಎನರ್ಜಿ ಮತ್ತು ನಿಫ್ಟಿ ಐಟಿ ಸೂಚ್ಯಂಕವು ಕ್ರಮವಾಗಿ ಶೇಕಡ 0.4, ಶೇಕಡ 0.5ರಷ್ಟು ಏರಿಕೆಯಾಗಿದೆ. ಕಚ್ಚಾ ತೈಲ ದರದ ಇಳಿಕೆಯು ಭಾರತೀಯ ಷೇರು ಮಾರುಕಟ್ಟೆಗೆ ಬಲವನ್ನು ತುಂಬಿದೆ. ಕಚ್ಚಾ ತೈಲ ದರವು ಬುಧವಾರ ಆರಂಭಿಕ ವಹಿವಾಟಿನಲ್ಲಿ ಶೇಕಡ ಒಂದರಷ್ಟು ಕುಸಿತ ಕಂಡಿದೆ.

ಷೇರುಪೇಟೆಯಲ್ಲಿಂದು: ಕಳೆದ ವಾರದ ಟಾಪ್ 10 ಕಂಪನಿಗಳ ಏರಿಳಿತ ಹೇಗಿತ್ತು?ಷೇರುಪೇಟೆಯಲ್ಲಿಂದು: ಕಳೆದ ವಾರದ ಟಾಪ್ 10 ಕಂಪನಿಗಳ ಏರಿಳಿತ ಹೇಗಿತ್ತು?

ಬಿಎಸ್‌ಇಯಲ್ಲಿ ಆಟೋ ಸೂಚ್ಯಂಕ ಭಾರೀ ಕುಸಿತವನ್ನು ಕಂಡಿದೆ. ಟಿವಿಎಸ್ ಮೋಟಾರ್ಸ್, ಬಜಾಜ್ ಆಟೋ, ಎಂಆರ್‌ಎಫ್, ಎಂ&ಎಂ, ಟಾಟಾ ಮೋಟಾರ್ಸ್, ಮಾರುತಿ, ಈಚರ್ ಮೋಟಾರ್ಸ್, ಹಿರೋ ಷೇರುಗಳು ಕುಸಿತವನ್ನು ಕಂಡಿದೆ. ಹಾಗಾದರೆ ಯಾವೆಲ್ಲಾ ಷೇರುಗಳು ಏರಿಕೆ ಕಂಡಿದೆ, ಯಾವುದು ಟಾಪ್ ಗೇನರ್ ಯಾವುದು ಟಾಪ್ ಲೂಸರ್ ಎಂದು ತಿಳಿಯೋಣ ಮುಂದೆ ಓದಿ....

ಷೇರುಪೇಟೆ: ಆಗಸ್ಟ್ 3ರಂದು ಆರಂಭಿಕ ವಹಿವಾಟು ಹೇಗಿದೆ ನೋಡಿ

ಟಾಪ್ ಲೂಸರ್, ಗೇನರ್ ಸ್ಟಾಕ್‌

ಷೇರು ಮಾರುಕಟ್ಟೆಯಲ್ಲಿ ಕೋಲ್ ಇಂಡಿಯಾ ಟಾಪ್ ಲೂಸರ್ ಆಗಿದ್ದು, ಇದರ ಷೇರುಗಳು ಸುಮಾರು ಶೇಕಡ 2.88ರಷ್ಟು ಕುಸಿತ ಕಂಡು ರೂಪಾಯಿ 209.05ಕ್ಕೆ ತಲುಪಿದೆ. ಇನ್ನು ಸಿಪ್ಲಾ ಟಾಪ್ ಗೇನರ್ ಆಗಿದೆ. ಸಿಪ್ಲಾ ಷೇರು ಶೇಕಡ 1.87ರಷ್ಟು ಹೆಚ್ಚಳವಾಗಿ ರೂಪಾಯಿ 1,023.00ಕ್ಕೆ ಏರಿದೆ. ನಿಫ್ಟಿ ಐಟಿ ಬೆಸ್ಟ್ ಸೆಕ್ಟರ್ ಆಗಿದ್ದು, ನಿಫ್ಟಿ ಆಟೋ ಭಾರೀ ಕುಸಿತ ಕಂಡಿದೆ.

ಷೇರುಪೇಟೆ ಶುಭಾಂತ್ಯ: ಎಸ್‌ಬಿಐ ಲೈಫ್ ಟಾಪ್ ಗೇನರ್ಷೇರುಪೇಟೆ ಶುಭಾಂತ್ಯ: ಎಸ್‌ಬಿಐ ಲೈಫ್ ಟಾಪ್ ಗೇನರ್

ಯಾವ ಷೇರುಗಳು ಏರಿಕೆ, ಯಾವುದು ಇಳಿಕೆ?

ಷೇರು ಮಾರುಕಟ್ಟೆಯು ಆರಂಭಿಕವಾಗಿ ಏರಿಕೆಯನ್ನು ಕಂಡಿದ್ದರೂ ಆ ಬಳಿಕ ಕುಸಿತವನ್ನು ದಾಖಲಿಸಿದೆ. ನಿಫ್ಟಿಯಲ್ಲಿ ಸಿಪ್ಲಾ, ಟೆಕ್ ಮಹೀಂದ್ರಾ, ಎಚ್‌ಸಿಎಲ್, ಅಪೋಲೋ ಹಾಸ್ಪಿಟಲ್, ಇನ್ಫೋಸಿಸ್ ಷೇರುಗಳು ಏರಿಕೆಯನ್ನು ಕಂಡಿದೆ. ಆದರೆ ಮಾರುತಿ ಸುಜೂಕಿ, ಒಎನ್‌ಜಿಸಿ, ಕೋಟಕ್ ಮಹೀಂದ್ರಾ, ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ ಸ್ಟಾಕ್‌ಗಳು ಕುಸಿತವನ್ನು ದಾಖಲಿಸಿದೆ.

ಇನ್ನು ಸೆನ್ಸೆಕ್ಸ್‌ನಲ್ಲಿ ಟೆಕ್ ಮಹೀಂದ್ರಾ, ಎಚ್‌ಸಿಎಲ್‌ ಟೆಕ್, ಇನ್ಫೋಸಿಸ್, ಎಸ್‌ಬಿಐ, ಭಾರ್ತಿ ಏರ್‌ಟೆಲ್ ಸ್ಟಾಕ್‌ಗಳು ಏರಿಕೆಯನ್ನು ಕಂಡಿದ್ದರೆ, ನೆಸ್ಲೆ ಇಂಡಿಯಾ, ಐಟಿಸಿ, ಎಂ&ಎಂ, ಮಾರುತಿ ಸುಜೂಕಿ, ಕೋಟಕ್ ಮಹೀಂದ್ರಾ ಸ್ಟಾಕ್‌ಗಳು ಕುಸಿತವನ್ನು ದಾಖಲಿಸಿದೆ.

ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಈ ಸಮಯಕ್ಕೆ ಶೇಕಡ 0.63ರಷ್ಟು ಕುಸಿದು ರೂಪಾಯಿ 681.20ಕ್ಕೆ ತಲುಪಿದೆ.

English summary

Opening Bell: Sensex Rises Over 100 Points, Nifty Trades Above 17,300

Sensex Rises Over 100 Points, Nifty Trades Above 17,300.
Story first published: Wednesday, August 3, 2022, 11:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X