For Quick Alerts
ALLOW NOTIFICATIONS  
For Daily Alerts

2021 ನೇ ಹಣಕಾಸು ವರ್ಷದಲ್ಲಿ 3 ಕೋಟಿಗೂ ಅಧಿಕ ಐಟಿ ರಿಟರ್ನ್ ಸಲ್ಲಿಕೆ: ಸಚಿವಾಲಯ

|

2020-21ರ ಹಣಕಾಸು ವರ್ಷಕ್ಕೆ ಇಲ್ಲಿಯವರೆಗೆ ಮೂರು ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಇನ್ನೂ ರಿಟರ್ನ್ ಸಲ್ಲಿಸದ ತೆರಿಗೆದಾರರು ಬೇಗನೆ ರಿಟರ್ನ್ ಸಲ್ಲಿಸಲು ಹಣಕಾಸು ಸಚಿವಾಲಯ ಸೂಚಿಸಿದೆ. ಪ್ರತಿದಿನವು ನಾಲ್ಕು ಲಕ್ಷಕ್ಕಿಂತ ಅಧಿಕ ಐಟಿ ರಿಟರ್ನ್ ಸಲ್ಲಿಕೆ ಆಗುತ್ತಿದೆ. ಈ ವರ್ಷ ಐಟಿ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕವು ಡಿಸೆಂಬರ್ 31 ಸಮೀಪ ಬರುತ್ತಿರುವ ಹಿನ್ನೆಲೆಯಿಂದಾಗಿ ಪ್ರತಿದಿನ ಐಟಿ ರಿಟರ್ನ್ ಸಲ್ಲಿಕೆ ಅಧಿಕ ಆಗುತ್ತಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ಐಟಿ ಇಲಾಖೆಯು ಇ-ಮೇಲ್‌ಗಳು, ಎಸ್‌ಎಂಎಸ್ ಮತ್ತು ಇತರೆ ಮೂಲಗಳ ಮೂಲಕವಾಗಿ ತೆರಿಗೆದಾರರಿಗೆ ಐಟಿ ರಿಟರ್ನ್ ಸಲ್ಲಿಕೆ ಮಾಡುವಂತೆ ತಿಳಿಸುತ್ತಿದೆ. ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮತ್ತಷ್ಟು ವಿಳಂಬವಿಲ್ಲದೆ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ. 2021-22 ರ ಮೌಲ್ಯಮಾಪನ ವರ್ಷಕ್ಕೆ ಇನ್ನೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ಎಲ್ಲಾ ತೆರಿಗೆದಾರರು ಕೊನೆಯ ಕ್ಷಣದಲ್ಲಿ ಗಡಿ ಬಿಡಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಐಟಿ ರಿಟರ್ನ್ ಸಲ್ಲಿಕೆ ಮಾಡುವಂತೆ ವಿನಂತಿ ಮಾಡಲಾಗಿದೆ.

 77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಿದ ಸಿಬಿಡಿಟಿ 77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಿದ ಸಿಬಿಡಿಟಿ

ಟಿಡಿಎಸ್‌ ತೆರಿಗೆ ಪಾವತಿಗಳ ನಿಖರತೆಯನ್ನು ಪರಿಶೀಲಿಸಲು ಹಾಗೂ ಐಟಿಆರ್‌ಪ ಪ್ರೀ ಫೈಲಿಂಗ್‌ ಮಾಡಲು ಇ-ಫೈಲಿಂಗ್ ಪೋರ್ಟಲ್ ಮೂಲಕ ತಮ್ಮ ಫಾರ್ಮ್ 26AS ಮತ್ತು ವಾರ್ಷಿಕ ಮಾಹಿತಿ ಹೇಳಿಕೆ (Annual Information Statement - ಎಐಎಸ್‌) ಅನ್ನು ಪರಿಶೀಲನೆ ಮಾಡಲು ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಹೇಳಿದೆ.

2021: ಈವರೆಗೆ 3 ಕೋಟಿಗೂ ಅಧಿಕ ಐಟಿ ರಿಟರ್ನ್ ಸಲ್ಲಿಕೆ

ತೆರಿಗೆದಾರರು ತಮ್ಮ ಬ್ಯಾಂಕ್ ಪಾಸ್‌ಬುಕ್, ಬಡ್ಡಿ ಪ್ರಮಾಣಪತ್ರ, ಫಾರ್ಮ್ 16 ಮತ್ತು ಈಕ್ವಿಟಿ / ಮ್ಯೂಚುವಲ್ ಫಂಡ್‌ಗಳ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ಬ್ರೋಕರೇಜ್‌ಗಳಿಂದ ಎಐಎಸ್ ಸ್ಟೇಟ್‌ಮೆಂಟ್‌ನಲ್ಲಿರುವ ಡೇಟಾವನ್ನು ಮತ್ತೆ ಪರಿಶೀಲನೆ ಮಾಡಲು ಕೂಡಾ ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

ಆದಾಯ ತೆರಿಗೆ ಸಲ್ಲಿಕೆ ಏರಿಕೆ

"ಹಣಕಾಸು ವರ್ಷ 2021-22 ರಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯು 3.03 ಕೋಟಿಗೆ ಏರಿಕೆ ಆಗಿದೆ. ಈ ಪೈಕಿ ಶೇಕಡ 58.98 ಐಟಿಆರ್‌ಐ (1.78 ಕೋಟಿ), ಎಂಟು ಶೇಕಡ ಐಟಿಆರ್‌2 (24.42 ಲಕ್ಷ), 8.7 ಶೇಕಡ ಐಟಿಆರ್‌3 (26.58 ಲಕ್ಷ), 23.12 ಶೇಕಡ ಐಟಿಆರ್‌4 (70.07 ಲಕ್ಷ) ಆಗಿದೆ. ಇನ್ನುಳಿದಂತೆ ಐಟಿಆರ್‌5, 2.14 ಲಕ್ಷ, ಐಟಿಆರ್‌6, 0.91 ಲಕ್ಷ ಹಾಗೂ ಐಟಿಆರ್‌7, 0.15 ಲಕ್ಷ ಆಗಿದೆ. ಈ ಐಟಿಆರ್‌ಗಳಲ್ಲಿ ಶೇಕಡಾ 52 ಕ್ಕಿಂತ ಹೆಚ್ಚು ಪೋರ್ಟಲ್‌ನಲ್ಲಿ ಆನ್‌ಲೈನ್ ಐಟಿಆರ್ ಫಾರ್ಮ್ ಅನ್ನು ಬಳಸಿಕೊಂಡು ಸಲ್ಲಿಸಲಾಗುತ್ತಿದೆ. ಉಳಿದವುಗಳು ಆಫ್‌ಲೈನ್ ಸಾಫ್ಟ್‌ವೇರ್ ಮೂಲಕ ಅಪ್‌ಡೇಟ್‌ ಮಾಡಲಾಗುತ್ತಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ ಐಟಿಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಯಾವುದಾದರೂ ಮರುಪಾವತಿಯನ್ನು ನೀಡಲು ಆಧಾರ್ ಒಟಿಪಿ ಮತ್ತು ಇತರ ವಿಧಾನಗಳ ಮೂಲಕ ಇ-ಪರಿಶೀಲನೆಯ ಪ್ರಕ್ರಿಯೆಯು ಮುಖ್ಯವಾಗಿದೆ. 2.69 ಕೋಟಿ ರಿಟರ್ನ್‌ಗಳನ್ನು ಇ-ಪರಿಶೀಲಿಸಲಾಗಿದೆ. ಅದರಲ್ಲಿ 2.28 ಕೋಟಿಗೂ ಹೆಚ್ಚು ಆದಾಯ ಆಧಾರ್ ಆಧಾರಿತ ಒಟಿಪಿ ಮೂಲಕ ಬಂದಿವೆ ಎಂದು ಗಮನಿಸುವುದು ಉತ್ತೇಜನಕಾರಿಯಾಗಿದೆ.

2021-22 ಆರ್ಥಿಕ ವರ್ಷದಲ್ಲಿ 2.38 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ2021-22 ಆರ್ಥಿಕ ವರ್ಷದಲ್ಲಿ 2.38 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ

Mobile ನಲ್ಲೆ IT ರಿಟರ್ನ್ ಫೈಲ್

ಜನರಿವೆ ಸುಲಭ ಆಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ತನ್ನ ಎಲ್ಲಾ ಸೇವೆಗಳನ್ನು ಮತ್ತು ಆದಾಯ ತೆರಿಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀಡಿದೆ. ಮೊಬೈಲ್‌ನಲ್ಲಿ ಯಾವುದೇ ಸಮಯದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆ ಈ ಮೊಬೈಲ್ ಅಪ್ಲಿಕೇಶನ್(Mobile App) ಅನ್ನು ಜೂನ್ 7, 2021 ರಂದು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಅನ್ನು ಆಪಲ್ ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

English summary

Over 3 crore income tax returns for FY21 have been filed so far Says Finance Ministry

Over 3 crore income tax returns for FY21 have been filed so far Says Finance Ministry.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X