For Quick Alerts
ALLOW NOTIFICATIONS  
For Daily Alerts

ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಲಿಂಕ್ ಡೆಡ್‌ಲೈನ್ ಮತ್ತೆ ಮುಂದೂಡಿಕೆ!

|

ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಲು ಈಗ ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ. ಈ ಮೊದಲು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 30, 2021 ಆಗಿತ್ತು.

 

ಈ ಮೂಲಕ ಪ್ಯಾನ್-ಆಧಾರ್ ಲಿಂಕ್ ಮಾಡಲು 6 ತಿಂಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ತೆರಿಗೆದಾರರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಈ ಹಿಂದೆ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು 30 ಸೆಪ್ಟೆಂಬರ್ 2021 ಕ್ಕೆ ವಿಸ್ತರಿಸಿತ್ತು, ಈಗ ಅದನ್ನು 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ.

ಪ್ಯಾನ್ - ಆಧಾರ್ ಏಕೆ ಲಿಂಕ್ ಮಾಡಬೇಕು?

ಪ್ಯಾನ್ - ಆಧಾರ್ ಏಕೆ ಲಿಂಕ್ ಮಾಡಬೇಕು?

ನೀವು ಈಗಾಗಲೇ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಹೊಂದಿದ್ದರೆ ಮತ್ತು ನೀವು ಆಧಾರ್ ಸಂಖ್ಯೆಯನ್ನು ಹೊಂದಲು ಅರ್ಹರಾಗಿದ್ದರೆ ಅಥವಾ ನೀವು ಈಗಾಗಲೇ ಆಧಾರ್ ಸಂಖ್ಯೆಯನ್ನು ಹೊಂದಿದ್ದರೆ, ನೀವು ಈ ಎರಡನ್ನು ಲಿಂಕ್ ಮಾಡಬೇಕಾಗುತ್ತದೆ. ನೀವು ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು, ಇಲ್ಲದಿದ್ದರೆ ನಿಮ್ಮ ಪ್ಯಾನ್ 'ನಿಷ್ಕ್ರಿಯ' ಆಗುತ್ತದೆ. ಒಮ್ಮೆ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಿದ ನಂತರ, ಪ್ಯಾನ್ ಅಗತ್ಯವಿರುವಲ್ಲಿ ಅದರೊಂದಿಗೆ ಅನೇಕ ವಹಿವಾಟುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಪ್ಯಾನ್ ಕಾರ್ಡ್ ಅಗತ್ಯ ಹೆಚ್ಚಿದೆ!

ಪ್ಯಾನ್ ಕಾರ್ಡ್ ಅಗತ್ಯ ಹೆಚ್ಚಿದೆ!

ಆದಾಯ ತೆರಿಗೆ ಇಲಾಖೆಯು 18 ಹಣಕಾಸಿನ ವಹಿವಾಟುಗಳನ್ನು ನಿರ್ದಿಷ್ಟಪಡಿಸಿದ್ದು, ಯಾವುದೇ ಒಬ್ಬ ವ್ಯಕ್ತಿಯು ಪ್ಯಾನ್ ಅನ್ನು ಉಲ್ಲೇಖಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿದಾಗ ಮಾತ್ರ ವಹಿವಾಟು ಮಾಡಬಹುದು. ಹೀಗಾಗಿ ಪ್ಯಾನ್ ಅನ್ನು ಮತ್ತೊಮ್ಮೆ ಸಕ್ರಿಯಗೊಳಿಸಬಹುದು. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡಲು, ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಲಾಗಿನ್ ಆಗದೆ ಲಿಂಕ್ ಮಾಡಿ
 

ಲಾಗಿನ್ ಆಗದೆ ಲಿಂಕ್ ಮಾಡಿ

ನೀವು ಬಯಸಿದರೆ, ನೀವು ಲಾಗಿನ್ ಆಗದೆ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದು. ನಿರ್ದಿಷ್ಟವಾಗಿ ವಿನಾಯಿತಿ ನೀಡದ ಹೊರತು, ಐಟಿಆರ್ ಸಲ್ಲಿಸಲು ಆಧಾರ್ ಮತ್ತು ಪ್ಯಾನ್ ಲಿಂಕ್ ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಹೂಡಿಕೆಗೆ ಅಗತ್ಯವಿದೆ

ಹೂಡಿಕೆಗೆ ಅಗತ್ಯವಿದೆ

ನೀವು ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡದಿದ್ದರೆ, ನೀವು ಕಾರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅಂತೆಯೇ, ಹೂಡಿಕೆದಾರರಿಗೆ ಈ ಕೆಲಸವು ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಅಂದರೆ, ಇದಕ್ಕಾಗಿ ಪ್ಯಾನ್ ಕೂಡ ಅಗತ್ಯ. ನಿಮ್ಮ ಪ್ಯಾನ್ ಅಮಾನ್ಯವಾಗಿದ್ದರೆ, ನೀವು SIP ಮೂಲಕ ಹಾಗೂ ಇತರ ರೀತಿಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.

ಹೆಚ್ಚಿನ ಚಿನ್ನ ಖರೀದಿಗೂ ಸಾಧ್ಯವಾಗುವುದಿಲ್ಲ!

ಹೆಚ್ಚಿನ ಚಿನ್ನ ಖರೀದಿಗೂ ಸಾಧ್ಯವಾಗುವುದಿಲ್ಲ!

ನೀವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ನೀವು 5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಲು ಮತ್ತು .50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಪ್ಯಾನ್ ಕೂಡ ಕಡ್ಡಾಯವಾಗಿದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿ

ಮನೆಯಲ್ಲಿ ಕುಳಿತುಕೊಂಡೇ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬಹುದು. ಇದಕ್ಕಾಗಿ, ನೀವು ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ.

* ಮೊದಲು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://www.incometaxindiaefiling.gov.in/home.

* ಮುಖಪುಟದಲ್ಲಿ ಎಡಭಾಗದಲ್ಲಿ ಲಿಂಕ್ ಆಧಾರ್ ಆಯ್ಕೆಯನ್ನು ನೀವು ನೋಡುತ್ತೀರಿ. ನೀವು ಅದರ ಮೇಲೆ ಕ್ಲಿಕ್ ಮಾಡಿ.

* ಇದರ ನಂತರ, ನಿಮ್ಮ ಮುಂದೆ ಒಂದು ಪೇಜ್ ಕಾಣಿಸುತ್ತದೆ, ಇದರಲ್ಲಿ ನೀವು ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ಆಧಾರ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ನೀಡಿದರೆ, ನೀವು ಅದರ ಮೇಲೆ ಕ್ಲಿಕ್ ಮಾಡಬೇಕು.

* ಇದರ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ, ನಿಮ್ಮ ಮುಂದೆ ಒಂದು ಪುಟ ತೆರೆಯುತ್ತದೆ, ಇದರಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್‌ಗೆ ಲಿಂಕ್ ಮಾಡುವ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ.

 

ಎಸ್‌ಎಂಎಸ್‌ ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಎಸ್‌ಎಂಎಸ್‌ ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಕೇವಲ ಒಂದು ಸಂದೇಶವನ್ನು ಕಳುಹಿಸುವ ಮೂಲಕ ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಬಹುದು.

* ಎಸ್‌ಎಂಎಸ್ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567678 ಅಥವಾ 56161 ಗೆ ಸಂದೇಶ ಕಳುಹಿಸಿ.

* UIDPAN ಸ್ಪೇಸ್‌ 12 ಅಂಕಿಗಳ ಆಧಾರ್ ಸಂಖ್ಯೆ ನಂತರ ಸ್ಪೇಸ್‌ ನೀಡಿ 10 ಸಂಖ್ಯೆ ಪ್ಯಾನ್‌ ನಂಬರ್‌ ಅನ್ನು ಟೈಪ್ ಮಾಡಿ ಈ ಮೇಲ್ಕಂಡ ನಂಬರ್‌ಗೆ ಎಸ್‌ಎಂಎಸ್‌ ಮಾಡಿ

* ಅದರ ನಂತರ, ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ವಿನಂತಿಯ ರಶೀದಿಯ ಸಂದೇಶವನ್ನು ಪಡೆಯುತ್ತಾರೆ.

* ವಿನಂತಿಯನ್ನು ಮಾಡಿದ ಕೆಲವು ದಿನಗಳ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಎಸ್‌ಎಂಎಸ್ ಮೂಲಕ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ.

 

ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

-ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ www.incometaxindiaefiling.gov.in ನ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ.
-ಅಲ್ಲಿ ಮೇಲ್ಭಾಗದ 'ಕ್ವಿಕ್ ಲಿಂಕ್ಸ್' ಮೇಲೆ 'ಲಿಂಕ್ ಆಧಾರ್' ಕ್ಲಿಕ್ ಮಾಡಿ. ನಂತರ ಸ್ಕ್ರೀನ್ ಮೇಲೆ ಹೊಸ ಪೇಜ್ ತೆರೆಯುತ್ತದೆ.
-ಈ ಪುಟದ ಮೇಲ್ಭಾಗದಲ್ಲಿ ಹೈಪರ್ಲಿಂಕ್ ಇರುತ್ತದೆ, ಅದನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ, ನೀವು ಈಗಾಗಲೇ ಆಧಾರ್ ಲಿಂಕ್ ಮಾಡಲು ವಿನಂತಿಸಿದ್ದರೆ ಸ್ಟೇಟಸ್ ಪರಿಶೀಲಿಸಿ ಮೇಲೆ ಕ್ಲಿಕ್ ಮಾಡಿ.
-ಈ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
-'ವ್ಯೂ ಲಿಂಕ್ ಆಧಾರ್ ಸ್ಥಿತಿ' ಕ್ಲಿಕ್ ಮಾಡಿ. ಅದರ ಫಲಿತಾಂಶದಲ್ಲಿ ಪ್ಯಾನ್ ನಿಮ್ಮ ಆಧಾರ್ ಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯುತ್ತದೆ.

English summary

Pan And Aadhar card Linking Deadline Extended: Check Steps To Link in Online

The last date to link Aadhaar with PAN has been extended by the government. The last date for linking Aadhaar with PAN will now be March 31, 2022. here the step by step process for link
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X