For Quick Alerts
ALLOW NOTIFICATIONS  
For Daily Alerts

ಮಾರ್ಚ್ 31ರೊಳಗೆ ಪ್ಯಾನ್ - ಆಧಾರ್ ಲಿಂಕ್ ತಪ್ಪಿದರೆ 10,000 ರುಪಾಯಿ ದಂಡ

|

ಪ್ಯಾನ್‌ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ದಂಡ ತೆರಬೇಕಾದ ಪರಿಸ್ಥಿತಿ ಎದುರಿಗಿದೆ. ಮಾರ್ಚ್ 31ರೊಳಗೆ ಆಧಾರ್ ಕಾರ್ಡ್‌ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ನಿಮ್ಮ ಕಾರ್ಡ್ ನಿಷ್ಕ್ರಿಯವಾಗಲಿದೆ. ಆನಂತರ ಒಂದು ವೇಳೆ ಪ್ಯಾನ್ ಕಾರ್ಡ್ ಬಳಸಿದರೆ 10,000 ರುಪಾಯಿ ದಂಡ ತೆರಬೇಕಾಗುತ್ತದೆ.

 

ಈ ಹಿಂದೆಯೇ ಪ್ಯಾನ್ -ಆಧಾರ್ ಕಾರ್ಡ್ ಲಿಂಕ್‌ಗೆ ಗಡುವು ನೀಡಲಾಗಿತ್ತು. ಆದರೆ ಆದಾಯ ತೆರಿಗೆ ಇಲಾಖೆಯು ಈ ಗಡುವನ್ನು ವಿಸ್ತರಿಸುತ್ತಲೇ ಬಂದಿತ್ತು. ಮಾರ್ಚ್ 31ರೊಳಗೆ ಜೋಡಣೆ ಮಾಡದಿದ್ದರೆ ಏಪ್ರಿಲ್ 1ರಿಂದ ನಿಷ್ಕ್ರಿಯವಾಗುತ್ತದೆ.

ನಿಷ್ಕ್ರಿಯ ಪ್ಯಾನ್ ಬಳಸಿದರೆ 10,000 ರುಪಾಯಿ ದಂಡ

ನಿಷ್ಕ್ರಿಯ ಪ್ಯಾನ್ ಬಳಸಿದರೆ 10,000 ರುಪಾಯಿ ದಂಡ

ನಿಷ್ಕ್ರಿಯ ಪ್ಯಾನ್ ಅನ್ನೇ ಬಳಕೆ ಮಾಡಿದರೆ 10,000 ರುಪಾಯಿ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ಯಾವುದೇ ವ್ಯವಹಾರಕ್ಕೆ ನಿಷ್ಕ್ರಿಯ ಪ್ಯಾನ್ ಅನ್ನು ಬಳಸಿದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272ಬಿ ಅನ್ವಯ ದಂಡ ವಿಧಿಸಬಹುದಾಗಿದೆ.

ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಹೊಸ ಕಾರ್ಡ್‌ಗೆ ಅರ್ಜಿ ಹಾಕಬೇಕಾ?

ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಹೊಸ ಕಾರ್ಡ್‌ಗೆ ಅರ್ಜಿ ಹಾಕಬೇಕಾ?

ಒಂದು ವೇಳೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗದಿದ್ದರೆ ಏಪ್ರಿಲ್ 1ರಿಂದ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಈ ಸಂದರ್ಭದಲ್ಲಿ ಹೊಸ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸುವುದು ಬೇಡ. ಆಧಾರ್ ಜೊತೆ ಲಿಂಕ್ ಮಾಡಿದರೆ ಸಾಕು ಮತ್ತೆ ಪ್ಯಾನ್ ಕಾರ್ಡ್ ಸಕ್ರಿಯವಾಗುತ್ತದೆ.

ಒಂದು ವೇಳೆ ಪ್ಯಾನ್ -ಆಧಾರ್ ಲಿಂಕ್ ಆಗಿದ್ದರೆ ಏನು ಮಾಡಬೇಕು?
 

ಒಂದು ವೇಳೆ ಪ್ಯಾನ್ -ಆಧಾರ್ ಲಿಂಕ್ ಆಗಿದ್ದರೆ ಏನು ಮಾಡಬೇಕು?

ಮಾರ್ಚ್‌ 31ರೊಳಗೆ ಪ್ಯಾನ್-ಆಧಾರ್ ಲಿಂಕ್ ಆಗದಿದ್ದರೆ ಏನು ಮಾಡಬೇಕು ಎಂಬುದು ನಿಮ್ಮಲ್ಲಿ ಮೂಡಬಹುದಾದ ಪ್ರಶ್ನೆಯಾಗಿರಬಹುದು. ಒಂದು ವೇಳೆ ಈ ಗಡುವಿನಲ್ಲಿ ಲಿಂಕ್ ಆಗದಿದ್ದರೆ ನಿಷ್ಕ್ರಿಯವಾಗುವ ಪ್ಯಾನ್ ಅನ್ನು ಯಾವುದೇ ವ್ಯವಹಾರಕ್ಕೆ ಬಳಸಬೇಡಿ. ಏಪ್ರಿಲ್ 1ರ ಬಳಿಕವೂ ಆಧಾರ್ ಲಿಂಕ್ ಮಾಡುವ ಅವಕಾಶವಿದೆ. ಹೀಗಾಗಿ ನಿಷ್ಕ್ರಿಯ ಪ್ಯಾನ್ ಬಳಸಿ ದಂಡಕ್ಕೆ ಒಳಗಾಗದಿರಿ.

ನಿಷ್ಕ್ರಿಯಗೊಂಡರೂ ಐಡಿ ಪ್ರೂಫ್‌ ಆಗಿ ಬಳಸಬಹುದು

ನಿಷ್ಕ್ರಿಯಗೊಂಡರೂ ಐಡಿ ಪ್ರೂಫ್‌ ಆಗಿ ಬಳಸಬಹುದು

ಒಂದು ವೇಳೆ ನಿಮ್ಮ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅದನ್ನು ವ್ಯಹವಾರಕ್ಕೆ ಬಳಸುವಂತಿಲ್ಲ. ಆದರೆ ಅದನ್ನು ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದು. ಉದಾಹರಣೆಗೆ ಬ್ಯಾಂಕ್ ಖಾತೆ ತೆರಯಲು ಅಥವಾ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಬಳಸಿದರೆ ನಿಮಗೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಕ್ರಿಯ ಪ್ಯಾನ್ ಕಾರ್ಡ್ ಅವಶ್ಯಕತೆ ಇದೆ. ಹಣ ಡೆಪಾಸಿಟ್ ಮಾಡಲು, ಹಣ ವರ್ಗಾವಣೆಗೆ ಪ್ಯಾನ್ ಕಾರ್ಡ್ ಬಳಕೆ ಅತ್ಯವಶ್ಯಕ.

English summary

PAN Card Holders May Be Fined 10000 Rupees If Not Linking Aadhaar

Pan cardholders who fail to link it with their Aadhaar card will have to furnish a huge penalty after the deadline ends on March 31. A penalty of Rs 10,000
Story first published: Tuesday, March 3, 2020, 10:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X