For Quick Alerts
ALLOW NOTIFICATIONS  
For Daily Alerts

4 ಗಂಟೆ ನಿಷೇಧದ ಬಳಿಕ ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿದ ಪೇಟಿಎಂ

|

ಪೇಟಿಎಂ ಬಳಕೆದಾರರಿಗೆ ಇಲ್ಲಿದೆ ಗುಡ್‌ ನ್ಯೂಸ್. ಪ್ಲೇ ಸ್ಟೋರ್‌ನಿಂದ ಬ್ಯಾನ್ ಆಗಿ 4 ಗಂಟೆಗಳ ನಂತರ ಪೇಟಿಎಂ ಹಿಂತಿರುಗಿದೆ. ಈ ಕುರಿತು ಪೇಟಿಎಂ ತನ್ನ ಮಾಹಿತಿಯನ್ನು ಟ್ವೀಟ್ ಮೂಲಕ ನೀಡಿದೆ.

 

ಗೂಗಲ್ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಪೇಟಿಎಂ ಅನ್ನು ಪ್ಲೇ ಸ್ಟೋರ್‌ನಿಂದ ಹೊರಗಿಡಲಾಗಿತ್ತು. ಆದರೆ ಈಗ ಮತ್ತೆ ಪ್ಲೇ ಸ್ಟೋರ್‌ಗೆ ಮರಳಿದ್ದು, ಈಗ ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಬಹುದು.

 

ಶುಕ್ರವಾರ, ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ, ಆದರೂ ಇದಕ್ಕೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಮಾಹಿತಿಯ ಪ್ರಕಾರ, 'ನಿಯಮಗಳ ಪುನರಾವರ್ತಿತ ಉಲ್ಲಂಘನೆಯಿಂದಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಅಪ್ಲಿಕೇಶನ್ ಅನ್ನು ತೆಗೆದುಹಾಕಲು ಸರ್ಚ್ ಎಂಜಿನ್ ಕಂಪನಿ ನಿರ್ಧರಿಸಿತ್ತು.''

4 ಗಂಟೆ ನಿಷೇಧದ ಬಳಿಕ ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿದ ಪೇಟಿಎಂ

ಪೇಟಿಎಂ ಅಪ್ಲಿಕೇಶನ್ ಬಗ್ಗೆ ಗೂಗಲ್ ಏನನ್ನೂ ಹೇಳಲಿಲ್ಲ. ಆದರೆ ಜೂಜಾಟಕ್ಕೆ ಸಂಬಂಧಿಸಿದ ನಿಯಮಗಳ ಇತ್ತೀಚಿನ ಉಲ್ಲಂಘನೆಗಳ ಕುರಿತು ಕಂಪನಿಯು ನವೀಕರಿಸಿದ ಬ್ಲಾಗ್ ಪೋಸ್ಟ್ ಅನ್ನು ಹಂಚಿಕೊಂಡಿದೆ. ಆಂಡ್ರಾಯ್ಡ್ ಸೆಕ್ಯುರಿಟಿ ಮತ್ತು ಗೌಪ್ಯತೆ, ಉತ್ಪನ್ನದ ಉಪಾಧ್ಯಕ್ಷ ಸುಜಾನ್ಫ್ರೇ, ''ನಾವು ಆನ್‌ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ ಅಥವಾ ಬೆಟ್ಟಿಂಗ್‌ಗೆ ಸಂಬಂಧಿಸಿದ ಯಾವುದೇ ಅಪ್ಲಿಕೇಶನ್‌ಗೆ ಬೆಂಬಲ ನೀಡುವುದಿಲ್ಲ ಮತ್ತು ಕ್ರೀಡೆಗಳಿಗೆ ಬಂದಾಗ ಆಟಗಳನ್ನು ಹೇಗೆ ನೀಡುತ್ತೇವೆ ಎಂಬುದರ ಕುರಿತು ಬರೆದಿದ್ದಾರೆ. ಹಣ ಅಥವಾ ಬಹುಮಾನಗಳ ಆಮಿಷವೊಡ್ಡುವ ಮೂಲಕ ಬಳಕೆದಾರರನ್ನು ಬೆಟ್ಟಿಂಗ್ ವೆಬ್‌ಸೈಟ್‌ಗೆ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಸಹ ಇದು ಒಳಗೊಂಡಿದೆ'' ಎಂದಿದ್ದರು.

ಗೂಗಲ್ ಯಾವುದೇ ರೀತಿಯ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ಇಡಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ಬೆಟ್ಟಿಂಗ್ ನಿಷೇಧದ ನಂತರವೂ ಈ ಅಪ್ಲಿಕೇಶನ್‌ಗಳಿಂದ ಭಾರತೀಯ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಗೂಗಲ್ ಈ ನಿರ್ಧಾರಕ್ಕೆ ಬಂದಿತ್ತು.

English summary

Paytm app restored on Google Play Store

Google on Friday restored the Paytm app on its Play store after removing it for a few hours for violating its policy on sports betting activities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X